ವಿಶ್ವ ಆಯುರ್ವೇದ ದಿನ: ನಸಲಾಪುರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಲೋಕದರ್ಶನ ವರದಿ
ಮಾಂಜರಿ 21 : ವಿಶ್ವ ಆಯುರ್ವೇದ ದಿನದ ಅಂಗವಾಗಿ ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಅತ್ಯಂತ ಉತ್ಸಾಹದಿಂದ ಹಾಗೂ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಶಿಬಿರದಲ್ಲಿ ಬರೋಬ್ಬರಿ 108 ರೋಗಿಗಳಿಗೆ ಉಚಿತ ತಪಾಸಣೆ ನಡೆಸಿ, ಅಗತ್ಯ ಚಿಕಿತ್ಸೆ ಮತ್ತು ಓಷಧೋಪಚಾರ ನೀಡಲಾಯಿತು.
ನಸಲಾಪುರದ 'ಏಕದಂತ ಗಣೇಶ ಮಂಡಳಿ'ಯ ಸಹಕಾರ ಹಾಗೂ ಮುತುವರ್ಜಿಯಿಂದ ಸೋಮವಾರ, ಸೆ. 21, 2026 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮಂಡಳಿಯ ಸದಸ್ಯರು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಸುಸಜ್ಜಿತವಾಗಿ ಶಿಬಿರವನ್ನು ಆಯೋಜಿಸಿದ್ದರಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಈ ಜನಪರ ಹಾಗೂ ಮಹತ್ವದ ಆರೋಗ್ಯ ಉಪಕ್ರಮದ ಯಶಸ್ಸಿಗೆ ಶ್ರಮಿಸಿದ ನಸಲಾಪುರದ ಏಕದಂತ ಗಣೇಶ ಮಂಡಳಿ, ಯಾಕೂಬ್ ತಾಂಬಟ್ ಸರ್, ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ವೈದ್ಯರು, ಸಿಬ್ಬಂದಿ, ಸ್ವಯಂಸೇವಕರು ಹಾಗೂ ಪ್ರತ್ಯಕ್ಷ-ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಆಯೋಜಕರು ಮತ್ತು ಗ್ರಾಮಸ್ಥರು ವಿಶೇಷ ಕೃತಜ್ಞತೆ ಸಲ್ಲಿಸಿದರು. ಗ್ರಾಮೀಣ ಭಾಗದ ಜನರಿಗೆ ಇಂತಹ ಶಿಬಿರಗಳಿಂದ ಹೆಚ್ಚಿನ ನೆಮ್ಮದಿ ಮತ್ತು ಅನುಕೂಲ ದೊರೆಯುತ್ತಿದೆ ಎಂಬ ಅಭಿಪ್ರಾಯ ಈ ವೇಳೆ ವ್ಯಕ್ತವಾಯಿತು.