ಬಳ್ಳಾರಿ

ಕಾರ್ಯಾಗಾರಗಳು ಶಿಕ್ಷಕರನ್ನು ನಿರಂತರ ಅಧ್ಯಯನಶೀಲರನ್ನಾಗಿಸುತ್ತವೆ: ಅಲ್ಲಂ ಗುರುಬಸವರಾಜ್

ಕಾರ್ಯಾಗಾರಗಳು ಶಿಕ್ಷಕರನ್ನು ನಿರಂತರ ಅಧ್ಯಯನಶೀಲರನ್ನಾಗಿಸುತ್ತವೆ: ಅಲ್ಲಂ ಗುರುಬಸವರಾಜ್

ಬಳ್ಳಾರಿ 12: ಕಾರ್ಯಾಗಾರಗಳು ಮಹಾವಿದ್ಯಾಲಯದ ಶಿಕ್ಷಕರನ್ನು ನಿರಂತರ ಅಧ್ಯಯನಶೀಲರನ್ನಾಗಿ ಮಾಡುವುದಲ್ಲದೆ ಅವರ ಜ್ಞಾನ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುತ್ತವೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಅಲ್ಲಂ ಗುರುಬಸವರಾಜ್ ತಿಳಿಸಿದರು. 

ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ರಾವ್ ಬಹದ್ದೂರ್ ವೈ ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಇಂದು ಆಯೋಜಿಸಿದ ಕೇಸ್ ರೈಟಿಂಗ್, ರಿಸರ್ಚ್‌ ಅಂಡ್ ಪಬ್ಲಿಕೇಶನ್ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಸಂಘದ ಕಾರ್ಯದರ್ಶಿ ಡಾಕ್ಟರ್ ಅರವಿಂದ ಪಟೇಲ್ ಮಾತನಾಡುತ್ತಾ ಸಂಘದ ಸಂಸ್ಥೆಗಳನ್ನು ಗುಣಾತ್ಮಕವಾಗಿ ಕಟ್ಟುವ ಅಗತ್ಯವಿದೆ ಇಂತಹ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಶಿಕ್ಷಕ ಕೂಡ ನಿರಂತರವಾಗಿ ವಿದ್ಯಾರ್ಥಿ ತನ ಮೈಗೂಡಿಸಿಕೊಂಡರೇ ತಾನು ಬೆಳೆಯುತ್ತಾನೆ ವಿದ್ಯಾರ್ಥಿಗಳನ್ನು ಬೆಳೆಸುತ್ತಾನೆ ಎಂದು ಅಭಿಪ್ರಾಯ ಪಟ್ಟರು.  

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸುವ ಆಗಮಿಸಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅಹಮದಾಬಾದ್  

ಪ್ರಾಧ್ಯಾಪಕ ಪ್ರಫೆಸರ್ ಡಾ.ಮುಕುಂದ ದೀಕ್ಷಿತ್ ಮಾತನಾಡಿ ಬೇರೆಬೇರೆ ಕೈಗಾರಿಕೆಗಳ ಸಂಸ್ಥೆಗಳ ಅಧ್ಯಯನದಿಂದ ಸಮಸ್ಯೆಗಳು ಎದುರಾದಾಗ ಯಾವ ನಿರ್ಣಯ ತೆಗೆದುಕೊಳ್ಳಬೇಕು ಸಂಸ್ಥೆಗಳನ್ನು ಯಾವ ರೀತಿ ಅಭಿವೃದ್ಧಿ ಪಡಿಸಬೇಕು ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂಸ್ಥೆಗಳನ್ನು ನೂತನ ಆವಿಷ್ಕಾರಗಳ ಮೂಲಕ ಹೇಗೆ ಸದೃಢಗೊಳಿಸಬೇಕು ಎನ್ನುವ ಜ್ಞಾನವನ್ನು ಕೇಸ್ ಸ್ಟಡೀಸ್‌ಗಳ ಮೂಲಕ ತಿಳಿಸಿದರು. 

ಹುಬ್ಬಳ್ಳಿಯ ಡಾ.ರಮಾಕಾಂತ್ ಕುಲಕರ್ಣಿ ಮಾತನಾಡಿದರು, ವಿವಿಧ ಕಾಲೇಜುಗಳ ನೂರಾರು ಅಧ್ಯಾಪಕರು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಾನೆ ಕುಂಟೆ ಬಸವರಾಜ್ ಪ್ರಾಂಶುಪಾಲರು ಡಾಕ್ಟರ್ ಟಿ ಹನುಮಂತರೆಡ್ಡಿ ಉಪಪ್ರಾಂಶುಪಾಲ ಡಾ.ಸವಿತಾ ಸೋನೋಳಿ ಎಂಬಿಎ ವಿಭಾಗದ ಮುಖ್ಯಸ್ಥರು ಡಾಕ್ಟರ್ ಏ.ತಿಮ್ಮನಗೌಡ, ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ಕಾಲೇಜಿನ ಸಿಬ್ಬಂದಿ ಎಂಬಿವಿ ವಿಭಾಗದ ಪ್ರಾಧ್ಯಾಪಕರು ಭಾಗವಹಿಸಿದ್ದರು. 


ಸುದ್ದಿ ಓದಿ