ಮಹಲಿಂಗಪುರ

ರಾಜಕಾರಣಿಗಳ ಬೂಟಿನ ಧೂಳು ಒರೆಸಿದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ: ಮುತ್ತಪ್ಪ

ರಾಜಕಾರಣಿಗಳ ಬೂಟಿನ ಧೂಳು ಒರೆಸಿದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ: ಮುತ್ತಪ್ಪ
ಸ್ಥಳೀಯ ಕೃಷಿ ಮಾರುಕಟ್ಟೆ ಆವರಣದಲ್ಲಿ ಪೆಂಡಾಲ್ ಮಾಲೀಕರು ಮತ್ತು ಕಾರ್ಮಿಕರು ಪತ್ರಿಕಾಗೋಷ್ಠಿ ಕರೆದು ಸಹಾಯಕ್ಕೆ ಸರ್ಕಾರವ

ಮಹಾಲಿಂಗಪುರ 02: ರಾಜ್ಯದ 225 ಶಾಸಕರು ನಮ್ಮದೇ ಮೈಕ್ ನಲ್ಲಿ ಮಾತನಾಡಿ ಪ್ರಚಾರ ಗಿಟ್ಟಿಸಿಕೊಂಡು, ನಮ್ಮ ಮ್ಯಾಟಿನ ಮೇಲೆ ಬೂಟುಗಾಲಿಟ್ಟು ವಿಧಾನಸಭೆಯನ್ನು ಪ್ರವೇಶಿಸಿದ್ದಾರೆ. ಅವರ ಬೂಟಿನ ಧೂಳನ್ನು ನಮ್ಮ ಕೈಯಿಂದ ಒರೆಸಿದ ನಮಗೆ ಈ ಕೊರೋನಾ ಸಂಕಷ್ಟದಿಂದ ತಿನ್ನಲು ಕೂಳಿಲ್ಲ ಆದ್ದರಿಂದ ಸರ್ಕಾರ ನಮ್ಮತ್ತ ಗಮನಹರಿಸಬೇಕು ಎಂದು ಪೆಂಡಾಲ್ ಸಂಘದ ಕಾರ್ಯದರ್ಶಿ ಮುತ್ತಪ್ಪ ಮುಶಿ ಹೇಳಿದರು. 

ಸ್ಥಳೀಯ ಕೃಷಿ ಮಾರುಕಟ್ಟೆ ಆವರಣದಲ್ಲಿ ಪೆಂಡಾಲ್ ಮಾಲಿಕರು ಮತ್ತು ಕಾರ್ಮಿಕರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಉಪಾಧ್ಯಕ್ಷ ಮಹಾಲಿಂಗಪ್ಪ ಹೂಗಾರ ಮಾತನಾಡಿ, ಮಹಾನ್ ಮಹಾನ್ ಮಂತ್ರಿಗಳು ಹುಟ್ಟು ಹಬ್ಬ, ತೀರಿಕೊಂಡಾಗ, ಮದುವೆ, ಮುಂಜಿ, ರಾಜಕೀಯ ಸಮಾರಂಭಗಳು ಮುಂತಾದ ಪ್ರತಿ ಕಾರ್ಯಕ್ರಮಗಳಲ್ಲಿ ನಾವು ಬೇಕು, ಆದರೆ ನಮ್ಮ ವೇದನೆ ಕೇಳುವವರೇ ಇಲ್ಲ. ಹೋದ ಕೊರೋನಾ ಸಂಕಷ್ಟದಲ್ಲಿಯೂ ಪರಿಹಾರಕ್ಕಾಗಿ ಶಾಸಕರು ಹಾಗೂ ತಹಶೀಲ್ದಾರರಲ್ಲಿ ಮನವಿ ಸಲ್ಲಿಸಲಾಗಿ ಸರಿಯಾಗಿ ಯಾವುದೇ ಸ್ಪಂದನೆ ಸಿಗಲಿಲ್ಲ. ಈ ಬಾರಿಯಾದರೂ ಸಂಕಷ್ಟದಲ್ಲಿರುವ ನಮಗೆ ನೆರವಾಗಬೇಕೆಂದು ಸರ್ಕಾರ ಹಾಗೂ ಶಾಸಕರನ್ನು ಆಗ್ರಹಿಸಿದರು. 

ಸಂಘದ ಸದಸ್ಯ ಆನಂದ ಸುಲ್ತಾನಪುರ್, ನಾಮದೇವ ಹೂಗಾರ, ಮೀರಾಸಬ ನದಾಫ್, ರಮೇಶ ಖವಾಸಿ, ಅಬ್ದುಲ್ ಯಾದವಾಡ, ಯಾಸಿನ್ ಪಾಂಡು, ಮಹಾದೇವ ಮುಗಳಖೋಡ, ಮಹಾಂತೇಶ ಹಳ್ಳಿ, ಅಸ್ಲಂ ಜಮಾದಾರ, ಶಿವಾನಂದ ಕರಡಿ, ಗಣೇಶ ಬನಹಟ್ಟಿ, ಶಿವಯ್ಯ ಮಠಪತಿ, ನಜೀರ್ ಅತ್ತಾರ ಇತರರು ಇದ್ದರು. 

ಪೆಂಡಾಲ್ ಮಾಲೀಕರು ಹಾಗೂ ಕಾರ್ಮಿಕರ ಬೇಡಿಕೆಗಳು : ಹಮಾಲಿ ಹಾಗೂ ಕಟ್ಟಡ ಕೆಲಸಗಾರರಿಗೆ ಇರುವ ಕಾರ್ಮಿಕ ಸವಲತ್ತುಗಳನ್ನು ನೀಡಬೇಕು. ಇಲ್ಲಿ ಕೆಲಸ ಮಾಡುವವರ ಮಕ್ಕಳಿಗೆ ವಿಶೇಷ ಸ್ಕಾಲರ್ಶಿಪ್ ವ್ಯವಸ್ಥೆ ಮಾಡಬೇಕು. * ಕಳೆದ ಹಾಗೂ ಪ್ರಸ್ತುತ ಕೊರೋನಾ ಮಹಾಮಾರಿಯ ಕಾರಣದಿಂದ ನಷ್ಟದಲ್ಲಿರುವ ನಮಗೆ 5ಸಾವಿರ ಸಹಾಯಧನ * ಮಳೆ ಮತ್ತು ಗಾಳಿಯಿಂದ ಪೆಂಡಾಲ್ ಮಾಲೀಕರಿಗೆ ಆಗುವ ನಷ್ಟ ಪರಿಹಾರ * ಕಾರ್ಮಿಕರಿಗೆ ಅಪಘಾತ ವಿಮೆ * ಸರಳ ಸಾಲ ಸೌಲಭ್ಯ ಮತ್ತು ಪೆಂಡಾಲ್ ಉದ್ಯೋಗವನ್ನು ಉದ್ಯಮವೆಂದು ಪರಿಗಣಿಸಿ ಸಣ್ಣ ಕೈಗಾರಿಕೆ ವ್ಯಾಪ್ತಿಯಲ್ಲಿ ಸೇರಿಸಬೇಕು. 

ಸುದ್ದಿ ಓದಿ