ಮಹಿಳೆಯರಿಗೆ ಅರಿವು, ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನಿಯ: ಪಲ್ಲವಿ ನಾಡಗೌಡ
ಮುದ್ದೇಬಿಹಾಳ 19: ಶ್ರಾವಣ ಮಾಸದಲ್ಲಿ ಮಹಿಳೆಯರಿಗೆ ಉಡಿ ತುಂಬುವ ಮೂಲಕ ನಮ್ಮ ಹಳೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ಹಾಗೂ ಉಡಿ ತುಂಬುವ ಮಹತ್ವದ ಬಗ್ಗೆ ಮಹಿಳೆಯರಿಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಕೆಲಸ ನಿಜಕ್ಕೂ ಶ್ಲಾಘನಿಯ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಲ್ಲವಿ ನಾಡಗೌಡ ಅಭಿಪ್ರಾಯ ಪಟ್ಟರು.
ಪಟ್ಟಣದ ವರದಾನೇಶ್ವರ ಚಾರಿಟೇಬಲ್ ಟ್ರಷ್ಟ ವತಿಯಿಂದ ಭಾನುವಾರ ಹೇಮರೆಡ್ಡಿ ಮಲ್ಲ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ಯ ಹಮ್ಮಿಕೊಂಡಿದ್ದ 1001 ಮುತೈದೆಯರಿಗೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರನ್ನು ಒಗ್ಗೂಡಿಸುವುದರ ಜತೆ ಅವರು ಪಾಲಿಸಬೇಕಾದ ಸಂಪ್ರದಾಯಗಳನ್ನು ತಿಳಿ ಹೇಳುವ ಕೆಲಸ ಮಾಡುತ್ತಿರುವುದು. ದೇವರ ಧ್ಯಾನ ಹಾಗೂ ಬದುಕಿನ ಜಂಜಾಟದ ನಡುವೆ ಎಲ್ಲಾ ಮಹಿಳೆಯರೂ ಒಟ್ಟಿಗೆ ಸೇರಿ ಆಚರಿಸುವ ಉಡಿ ತುಂಬುವ ಕೆಲಸ ಅತ್ಯಂತ ಪುಣ್ಯದ ಕಾಯಕವಾಗಿದೆ ಎಂದರು.
ಪವಿತ್ರ ಶ್ರಾವಣ ಮಾಸ ಮಾಸದಲ್ಲಿ ಮಹಿಳೆಯರ ಪೂಜಾ ಭಾವನೆಗಳು ಹೆಚ್ಚಾಗಿರುತ್ತವೆ. ಇದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಹೀಗಾಗಿ ಸಮಾಜದ ವತಿಯಿಂದ 1 ಸಾವಿರಕ್ಕೂ ಅಧಿಕ ಮುತ್ತೈದೆಯರಿಗೆ ಉಡಿ ತುಂಬುವುದರಿಂದ ನಮ್ಮ ಧರ್ಮ ಸಂಸ್ಕಾರ ಪರಂಪರೆ ಉಳಿಸುವುದರ ಜತೆಗೆ ಮುಂಬರುವ ಯುವ ಪೀಳೆಗೆಗೆ ಇಂತಹ ಕಾರ್ಯಕ್ರಮಗಳು ಸನ್ಮಾರ್ಗ ದಿಕ್ಸೂಚಿಯಾಗಲಿವೆ
ಸರಕಾರದ ಗ್ಯಾರಂಟಿ ಯೋಜನೆಯ ತಾಲೂಕಾ ಸಮೀತಿ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ನೀಲಕಂಠರಾವ ನಾಡಗೌಡ(ಚಿನ್ನು) ರೂಪಾ ದೇಸಾಯಿ, ಸಮೀತಿ ಅಧ್ಯಕ್ಷ ಎಂ ಎಸ್ ಬಿರಾದಾರ, ಮಹಾಂತಗೌಡ ಪಾಟೀಲ, ಹಣಮಂತ ತಿಡಗುಂದಿ, ಮಹಾಂತೇಶ ಮಠಪತಿ, ಗಂಗಾಧರ ಕಲಾಲ, ಮಹಾಂತೇಶ ಮೋಟಗಿ, ಯಮನೂರಿ ನಾಯಕಮಕ್ಕಳ, ಮಹಾಂತೇಶ ಮಡಿವಾಳರ, ರವಿ ಮಡಿವಾಳರ, ಉಮೇಶ ನಾಗಠಾಣ, ಮಹಾಂತೇಶ ದಡ್ಡಿ, ಉದಯ ರಾಯಚೂರ ಸೇರಿದಂತೆ ಸಾವಿರಕ್ಕೂ ಹೆಚ್ಚು ಮಹಿಳೆಯರು, ಮುಖಂಡರು ಇದ್ದರು.