ಪುರುಷರ ಕ್ರಿಕೆಟ್ಗೆ ಮಹಿಳಾ ಅಂಪೈರ್
ನವದೆಹಲಿ 23: ಮುಂಬೈ ಮೂಲದ ವೃಂದಾ ರತಿ
ಹಾಗೂ ನ್ನೈಯ ಎನ್.ಜನನಿ ಜೊತೆಗೂಡಿ
ಭಾರತೀಯ ಕ್ರಿಕೆಟ್ ನಲ್ಲಿ ಹೊಸದೊಂದು ದಾಖಲೆ ಬರೆಯಲು ಮುಂದಾಗಿದ್ದಾರೆ. ಭಾರತ ಕ್ರಿಕೆಟ್ ಇತಿಹಾಸದಲ್ಲಿ
ಮೊದಲ ಬಾರಿಗೆ ಮಹಿಳೆಯರು ಅಂಪೈರ್ ಹ್ಯಾಟ್ ಧರಿಸುತ್ತಿದ್ದಾರೆ.
ಈ ಇಬ್ಬರೂ ಬಿಸಿಸಿಐ
ರಾಷ್ಟ್ರೀಯ ಮಟ್ಟದ ಅಂಪೈರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಮುಖೇನ ಮಹಿಳಾ
ಜೋಡಿಯು ಮಹಿಳಾ ಕ್ರಿಕೆಟ್ ಪಂದ್ಯ ಹಾಗೂ ಜೂನಿಯರ್-ಮಟ್ಟದ ಪುರುಷರ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾಣಿಸಿಕೊಳ್ಳಲಿದೆ.
ನವಿ ಮುಂಬೈ ಮೂಲದ
ಫಿಟ್ನೆಸ್ ತರಬೇತುಗಾತರ್ಿ 29ರ ಹರೆಯದ ವೃಂದಾ
ರತಿ 2010ರಿಂದ ಬಿಸಿಸಿಐ ಸ್ಕೋರರ್
ಆಗಿದ್ದಾರೆ. ಹಲವು ಸ್ಥಳೀಯ ಪಂದ್ಯಗಳನ್ನು
ಅಂಪೈರಿಂಗ್ ಮಾಡಿರುವ ವೃಂದಾ ರತಿ ಅಂಪೈರಿಂಗ್ ಕ್ಷೇತ್ರದಲ್ಲಿ
ಅಪಾರ ಆಸಕ್ತಿ ಹೊಂದಿದ್ದಾರೆ.
"ಆರಂಭದಲ್ಲಿ, ಮಹಿಳಾ ಅಂಪೈರ್ ಬಗ್ಗೆ ಸಾಕಷ್ಟು ಅಸಮಾಧಾನಗಳಿತ್ತು. ಆದರೆ ನಿಮ್ಮ ಸಾಮಥ್ರ್ಯದ
ಅರಿವು ನಿಮಗಿದ್ದಾಗ ನಿಮ್ಮ ಲಿಂಗವೆನ್ನುವುದು ಅಪ್ರಸ್ತುತವಾಗುತ್ತದೆ" ಅವರು ಹೇಳಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 