ಮಹಿಳಾ ಮೀಸಲು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು ಹಾಗೂ ಮಹಿಳೆಯರು ಸಬಲರಾಗಬೇಕು : ಕೆ ಎಂ ಮಲ್ಲಿಕಾರ್ಜುನ
ಬ್ಯಾಡಗಿ 10 : ಸಂವಿಧಾನಬದ್ಧವಾಗಿ ನೀಡಿರುವ ಮಹಿಳಾ ಮೀಸಲು ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಬೇಕು ಹಾಗೂ ಮಹಿಳೆಯರು ಸಬಲರಾಗಬೇಕು ಎಂದು ತಾಲೂಕು ಕಾರ್ಯನಿರ್ವಹಿತ ಅಧಿಕಾರಿ ಕೆ ಎಂ ಮಲ್ಲಿಕಾರ್ಜುನ ಹೇಳಿದರು. ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಇವರುಗಳ ಸಹಯೋಗದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದವರು ಮಹಿಳಾ ದಿನಾಚರಣೆಯ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು, ಮಹಿಳೆಯರು ಮಗಳಾಗಿ ಸಹೋದರಿಯಾಗಿ ಬಾಳ ಸಂಗಾತಿಯಾಗಿ ತಾಯಿಯಾಗಿ ಅತ್ತೆ ಅಜ್ಜಿಯಾಗಿ ಹಂತ ಹಂತವಾಗಿ ಎಲ್ಲ ಪಾತ್ರವನ್ನು ಸಂತಸದಿಂದ ನಿರ್ವಹಿಸುತ್ತಾರೆ.
ಇದರೊಂದಿಗೆ ತಮಗೆ ಎದುರಾಗುವ ಸಾಲುಗಳನ್ನು ಎದುರಿಸಿ ಮುನ್ನುಗ್ಗಿದರೆ ಸಮೃದ್ಧ ಮತ್ತು ಯಶಸ್ವಿ ಜೀವನ ನಡೆಸಬಹುದು ಅಲ್ಲದೆ ಸಮಾಜಕ್ಕೆ ಉತ್ತಮ ದಾರಿ ದೀಪ ಆಗಬಹುದು ಪ್ರತಿಯೊಬ್ಬ ಯಶಸ್ಸಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಮಹಿಳೆಯರು ಅಡಿಗೆ ಮನೆಯಿಂದ ವಿಮಾನದವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಗುರುತಿಸಿಕೊಂಡಿರುವುದು ಉತ್ತಮ ಬೆಳವಣಿಗೆ ಪ್ರತಿ ಹೆಣ್ಣು ಮಗುವಿಗೆ ಶಿಕ್ಷಣ ಆಸ್ತಿ ನೀಡಬೇಕು ಸಾವಲಂಬಿಯಾಗಿ ಜೀವಿಸುವ ಆತ್ಮಸ್ಥೈರ್ಯ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.ರಾಜ್ಯ ಗ್ಯಾರೆಂಟಿ ಯೋಜನೆಯ ಉಪಾಧ್ಯಕ್ಷ ಎಸ್ ಆರ್ ಪಾಟೀಲ್ ಮಾತನಾಡಿ ಮಹಿಳೆಯರು ನಮ್ಮ ದೇಶದ ಸಂಸ್ಕೃತಿಯನ್ನು ಅನಾದಿಕಾಲದಿಂದಲೂ ಮಹಿಳೆಯರಿಗೆ ಉನ್ನತ ಸ್ಥಾನಮಾನ ನೀಡಲಾಗಿದೆ.
ಅದರಂತೆ ಎಲ್ಲಾ ನಾರಿಯರು ಗೌರವದಿಂದ ಹಕ್ಕು ಸ್ಥಾನಮಾನ ನೀಡಿ ತೃಪ್ತಿಪಡಿಸಿದರೆ ಈ ದೇಶ ರಾಜ್ಯ ಸಮೃದ್ಧಿ ವಾಗುತ್ತದೆ ಮತ್ತು ನಮ್ಮ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ಯಾರಂಟಿ ಅನುಷ್ಠಾನದಿಂದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ ಮಹಿಳೆಯರಿಗಾಗಿ ಮುಖ್ಯಮಂತ್ರಿಗಳ ದಿಟ್ಟ ಹೆಜ್ಜೆಯು ಇಂದು ರಾಜ್ಯದ ಮಹಿಳೆಯರು ಸಾಕಷ್ಟು ಮಹಿಳೆಯರ ಸಾಕಷ್ಟು ಭಾರವನ್ನು ತಿಳಿಸಿದ್ದಾರೆ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಮತ್ತು ಯುವ ನಿಧಿ. ಗೃಹ ಜ್ಯೋತಿ. ಅನ್ನಭಾಗ್ಯ. ಯೋಜನೆಗಳಿಂದ ಮಹಿಳೆಯರು ಸ್ವಾವಲಂಬಿಯಾಗಿ ಉತ್ತಮ ಜೀವನ ನಡೆಸುತ್ತಿದ್ದಾರೆ ನಮ್ಮ ಯೋಜನೆಯಿಂದ ಶಿಕ್ಷಣ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮಹಿಳೆಯರು ಮುಂದೆ ಬಂದಿದ್ದಾರೆ ಮತ್ತು ಮಹಿಳೆಯರು ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು ಅಥವಾ ಚಿಕ್ಕ ಅವಕಾಶವನ್ನು ಬಳಸಿಕೊಂಡು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರಬೇಕು ಪ್ರಸ್ತುತ ದಿನಗಳಲ್ಲಿ ಮಹಿಳೆಯರು ವೇಗವನ್ನು ಗಮನಿಸಿದರೆ.
ಮುಂದಿನ ದಿನಗಳಲ್ಲಿ ಪುರುಷರು ಮೀಸಲಾತಿಗಾಗಿ ಹೋರಾಡುವ ಪರಿಸ್ಥಿತಿ ಎದುರಾಗಲಿದೆ ಎಲ್ಲರಿಗೂ ಸಮಾನ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಸಿಕ್ಕರೆ ಸಬಲೀಕರಣವಾಗಲಿದೆ ಎಂದು ಹೇಳಿದರು.ಸಂಜೀವಿನಿ ಒಕ್ಕೂಟದ ತಾಲೂಕ ಅಧ್ಯಕ್ಷೆ ಪುಷ್ಪ ಸಿಂಗ್ರಿ ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರತಿ ವರ್ಷ ಮಾರ್ಚ್ 8ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ ಮಹಿಳೆಯರು ತಮ್ಮ ಜವಾಬ್ದಾರಿಯನ್ನು ಅರಿತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಮತ್ತು ಮಹಿಳೆಯರನ್ನು ಪ್ರತಿಯೊಬ್ಬರು ಗೌರವಿಸಬೇಕು ಮಹಿಳೆಯರು ಅಬಲೆಯರಲ್ಲ ಸಬಲೀಯರು ಪುರುಷರಂತೆ ಮಹಿಳೆಯರು ಕೂಡ ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವಂತಾಗಬೇಕು.
ಮಹಿಳೆಯರನ್ನು ಗೌರವ ಕಾರ್ಯ ಸಮಾಜ ಮಾಡಬೇಕಾಗಿದೆ ಮಹಿಳೆಯರಿಗೆ ಶಿಕ್ಷಣ ಉದ್ಯೋಗಾವಕಾಶಗಳಲ್ಲಿ ಸಮಾನ ಅವಕಾಶಗಳನ್ನು ನೀಡಬೇಕು ಮಹಿಳೆಯರು ಸಹ ಇಂದು ವ್ಯಕ್ತಿ ಜೀವನದಲ್ಲಾಗಲಿ ಇತರರಂಗಗಳಾಗಲಿ ಅವಕಾಶಗಳು ಬಂದಾಗ ಕೀಳಹರಿಮೆಯಿಂದ ಹಿಂದೆ ಸರಿಯದೆ ಪ್ರತಿಯೊಂದು ಸವಾಲಾಗಿ ಸ್ವೀಕರಿಸಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಅಧ್ಯಕ್ಷ ಶಂಭನಗೌಡ ಪಾಟೀಲ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಚಂದ್ರಶೇಖರ್. ಅಕ್ಷರ ದಾಸೋಹ ಅಧಿಕಾರಿ ವಸಂತ ಬೀರಣ್ಣನವರ್. ಸಾರಿಗೆ ವ್ಯವಸ್ಥಾಪಕರಾದ ಅಡ್ರಗಟ್ಟಿ. ಬನ್ನಿಹಟ್ಟಿ ಟಿ ಡಿ ಜಿ ವಿದ್ಯಾವತಿ.ಹಾಗೂ ಗ್ಯಾರಂಟಿ ಸಮಿತಿಯ ಸದಸ್ಯರಾದ ರಮೇಶ್ ಕೋಟಿ. ಪಿರಾಂಬಿ ವರದಿ. ಸುಶೀಲಾ ಲಮಾಣಿ. ಹೈದರಾಲಿ ಬೆಂಗಳೂರಿ ಹಾಗೂ ಎಲ್ಲಾ ಪಂಚಾಯತಿ ವ್ಯಾಪ್ತಿಗೆ ಸಂಜೀವಿನಿ ಒಕ್ಕೂಟದ ಮಹಿಳೆಯರು ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿಗಳು. ತಾಲೂಕು ಪಂಚಾಯಿತಿ ಸಿಬ್ಬಂದಿಗಳು. ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.