ಬಳ್ಳಾರಿ

ಆದರ್ಶ ವೃದ್ಧಾಶ್ರಮದಲ್ಲಿ ಕಿಸಾನ್ ಕಾಂಗ್ರೆಸ್‍ನಿಂದ ಮಹಿಳಾ ದಿನಾಚರಣೆ

ಆದರ್ಶ ವೃದ್ಧಾಶ್ರಮದಲ್ಲಿ ಕಿಸಾನ್ ಕಾಂಗ್ರೆಸ್‍ನಿಂದ ಮಹಿಳಾ ದಿನಾಚರಣೆ

ಬಳ್ಳಾರಿ 08:  ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತವಾಗಿ ಬಳ್ಳಾರಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಮಾನ್ಯಂ ಶ್ರೀಧರ್ ಇವರ ನೇತೃತ್ವದಲ್ಲಿ ಸೋಮವಾರ ಸಂಗನಕಲ್ಲಿನ ಆದರ್ಶ ವೃದ್ಧಾಶ್ರಮದಲ್ಲಿ ಕೇಕ್ ಕತ್ತಿರಿಸಿ ವೃದ್ಧರಿಗೆ ಹೊಸ ಬಟ್ಟೆಗಳನ್ನು ನೀಡಿ ಅವರೊಂದಿಗೆ ಕಿಸಾನ್ ಕಾಂಗ್ರೆಸ್ ಮಹಿಳೆಯರಿಗೆ ಸನ್ಮಾನಿಸಲಾಯಿತು. ಕಿಸಾನ್ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಲೀಲಾರೆಡ್ಡಿ, ಡಿ.ಸಿ.ಸಿ ಬಳ್ಳಾರಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಕಮಲಾ ಮರಿಸ್ವಾಮಿಯವರು ಮಾತನಾಡುತ್ತಾ, ಮಹಿಳೆಯರು ಎಲ್ಲಾ ರಂಗದಲ್ಲೂ ಪುರುಷರಿಗೆ ಸರಿಸಮಾನಾಗಿ ಬೆಳೆಯಬೇಕೆಂದು ಕರೆ ನೀಡಿದರು. ಅದೇ ರೀತಿಯಾಗಿ ಮಹಿಳೆಯರ ಸೇವೆಯನ್ನು ಗಮನಿಸಿ ಮಹಿಳಾ ದಿನಾಚರಣೆ ಯಂದು ಸನ್ಮಾಸಿದ ಶ್ರೀಧರ್‍ರವರನ್ನು ಅಭಿನಂದಿಸಿದರು.ಇದೇ ಸಂದರ್ಭದಲ್ಲಿ ಎಲ್ಲರಿಗೂ ಸಸಿಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಕಿಸಾನ್ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷ ಶ್ರೀಧರ್, ಉಪಾಧ್ಯಕ್ಷ ವಿಜಯಕುಮಾರ್, ಅಲಿವೇಲು ಸುರೇಶ್, ಕಾಂಗ್ರೆಸ್ ಮಹಿಳಾ ಮುಖಂಡರಾದ ಎಂ.ಎಸ್ ಮಂಜುಳಾ, ಸಮೀಮ್ ಜೆಟ್ಲೆ, ಕುಮಾರಮ್ಮ, ಶಾಂತಮ್ಮ, ಪವೀನ್‍ಬಾನು, ಪ್ರವಲ್ಲಿಕಾ, ಕಮಲಮ್ಮ, ದ್ರಾಕ್ಷಾಯಿಣಿ, ಆಶಾ ಸೇರಿದಂತೆ ಹಲವಾರು ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸುದ್ದಿ ಓದಿ