ಮೂಡಲಗಿ ಎಸ್ಬಿಐ ಬ್ಯಾಂಕಿನಲ್ಲಿ ಮಹಿಳಾ ದಿನಾಚರಣೆ
ಮೂಡಲಗಿ 09; ಗ್ರಾಮೀಣ ಭಾಗದ ಮಹಿಳೆಯರು ಬ್ಯಾಂಕ ವ್ಯವಹಾರ ಮಾಡುವಲ್ಲಿ ಮುಂದಾಗಿ ಆರ್ಥಿವಾಗಿ ಸಬಲರಾಗಬೇಕು ಎಂದು ಮೂಡಲಗಿ ಎಸ್.ಬಿ.ಐ ಬ್ಯಾಂಕಿನ ಶಾಖಾ ವ್ಯವಸ್ಥಾಪಕಿ ಪ್ರತಿಭಾ ಶೆಟ್ಟಿ ಹೇಳಿದರು.
ಇಲ್ಲಿಯ ಎಸ್.ಬಿ.ಐ ಬ್ಯಾಂಕಿನಲ್ಲಿ ಜರುಗಿದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಕೇಕ್ ಕತ್ತರಿಸಿ ಚಾಲನೆ ನೀಡಿ ಮಾತನಾಡಿದ ಅವರು ಮಹಿಳೆಯರು ಹಿಂಜರಿಯದೆ ಹಣಕಾಸು ಸಂಸ್ಥೆಗಳಲ್ಲಿ ವ್ಯವಹಾರ ನಡೆಸಲಿಕ್ಕೆ ಮುಂದಾದಾಗ ಮಾತ್ರ ಜೀವನದಲ್ಲಿ ಸಫಲರಾಗಬಲ್ಲರು. ಸರಕಾರ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಗೆ ಅವಕಾಶ ನೀಡಿದ್ದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಶಾಖಾ ಕ್ಷೇತ್ರಪಾಲಕ ಪರಮೇಶ ರಡ್ಡಿ, ಸಹಾಯಕ ವ್ಯವಸ್ಥಾಕ ಸುಭಾಸ ಶೇಟವೆ, ಹಿರಿಯ ಗುಮಾಸ್ತೆ ಸವಿತಾ ಪರಂಡಿ, ಸಿಬ್ಬಂದಿಗಳಾದ ನೀತಾ ಪರಮಾರ, ಯಶವಂತ ವಾಯ್, ಎಮ್.ಬಿ.ಬಡಿಗೇರ, ಪರಶುರಾಮ ಬೀರಾದಾರ, ಸೋಮು ಅಂಗಡಿ ಮತ್ತಿತರರು ಇದ್ದರು.