ಮಹಿಳಾ ಜಾಗೃತಿ, ಭಾರತ ಸೇವಾದಳ ಶಿಬಿರ
ಬಳ್ಳಾರಿ 04: ಭಾರತ ಸೇವಾದಳ, ಬಳ್ಳಾರಿ. ಜಿಲ್ಲಾ ಗೃಹರಕ್ಷಕದಳ, ಬಳ್ಳಾರಿ ಮತ್ತು ಪೌರರಕ್ಷಣಾದಳ ಇವರ ಸಂಯುಕ್ತಾಶ್ರಯದಲ್ಲಿ ದಿ.04 ರಂದು ಮಹಿಳಾ ಜಾಗೃತಿ ಮತ್ತು ಭಾರತ ಸೇವಾದಳ ಮಾಹಿತಿ ಶಿಬಿರವನ್ನು ಜಿಲ್ಲಾ ಗೃರಕ್ಷಕದಳ ಕಛೇರಿಯ ಸಭಾಂಗಣದಲ್ಲಿ ನಡೆಸಲಾಯಿತು.
ಈ ವಿಷೇಶ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಕಾರ್ಯರ್ಶಿಗಳು, ಭಾರತ ಸೇವಾದಳ, ಬಳ್ಳಾರಿ ಟಿ.ಜಿ.ವಿಠ್ಠಲ್ ಸಸಿಗೆ ನೀರು ಹಾಕುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತ ನಮ್ಮ ಭಾರತ ದೇಶದಲ್ಲಿ ರಾಷ್ಟ್ರದ್ವಜಕ್ಕೆ ಒಂದು ವಿಷೇಶ ಸ್ಥಾನವಿದೆ. ನಮ್ಮ ಭಾರತ ದೇಶದ ಇತಿಹಾಸದಲ್ಲಿ ಸ್ವಾತಂತ್ರ ತರಲು ಅನೇಕ ಹೋರಾಟಗಾರರು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಬ್ರಿಟಿಶರ ಆಡಳಿತದಲ್ಲಿ ನಮ್ಮ ರಾಷ್ಟ್ರದ್ವಜವನ್ನು ಸ್ಥಾಪನೆ ಮಾಡಲು ಅನೇಕ ವೀರರು ಹೋರಾಟವನ್ನು ಮಾಡಿದ್ದಾರೆ. ಸುಮಾರು ಏಳು ಬಾರಿ ನಮ್ಮ ರಾಷ್ಟ್ರದ್ವಜವನ್ನು ತಿದ್ದುಪಡಿ ಮಾಡಿ ಕೊನೆಯದಾಗಿ 1947 ರಲ್ಲಿ ಭಾರತ ದೇಶಕ್ಕೆ ಸ್ವಾತಂತ್ರ ಬಂದಾಗ ರಾಷ್ಟ್ರದ್ವಜವನ್ನು ಪೂರ್ಣಗೊಂಡಿದೆ.
ಈ ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಸಂಘಟಕರು ಭಾರತ ಸೇವಾದಳ ಬಳ್ಳಾರಿ ಬಾರಿಕರ ಗಣೇಶ್, ಇವರು ನಮ್ಮ ರಾಷ್ಟ್ರದ್ವಜದ ವಿಶೇಷತೆಯನ್ನು ತಿಳಿಸಿದ್ದರು. ಇವರು ಶಿಬಿರದಲ್ಲಿ ರಾಷ್ಟ್ರದ್ವಜದ ಸ್ಥಾಪನೆಯ ವಿವರ, ಇದರ ಬಳಗೆ ಮತ್ತು ಅತೀ ಮುಖ್ಯವಾಗಿ ರಾಷ್ಟ್ರದ್ವಜಕ್ಕೆ ಹೇಗೆ ಗೌರವವನ್ನು ನೀಡಬೇಕು ವೆಂದು ವಿವರವಾಗಿ ಈ ಶಿಬಿರದಲ್ಲಿ ತಿಳಿಸಿದರು.
ನಿವೃತ್ತ ಸೆಕೆಂಡ್ ಇನ್ ಕಮಾಂಡ್, ಜಿಲ್ಲಾ ಗೃಹರಕ್ಷಕದಳದ, ಬಳ್ಳಾರಿ ಎನ್.ಎಸ್.ಲಕ್ಷ್ಮೀನರಸಿಂಹ, ಅಧ್ಯಕ್ಷತೆಯನ್ನು ವಹಿಸಿದ್ದರು. ಇವರು ಈ ಕಾರ್ಯಕ್ರಮದ ಬಗ್ಗೆ ಹಿತನುಡಿಯನ್ನು ತಿಳಿಸಿದ್ದರು. ಇದೇ ಸಂದರ್ಭದಲ್ಲಿ ಬಳ್ಳಾರಿ ಘಟಕದ ಮಹಿಳಾ ಗೃಹರಕ್ಷಕಿಯರು ಮತ್ತು ಪೌರರಕ್ಷನಾ ದಳದ ಸದಸ್ಯರು ಉಪಸ್ಥಿತರಿದ್ದರು.