ಗೃಹಬಂಧನದಲ್ಲಿ ಹಿಂಸೆಗೆ ಒಳಗಾಗಿದ್ದ ಮಹಿಳೆಗೆ ಅಕ್ಕಪಡೆಯಿಂದ ಮುಕ್ತಿ : ತವರೂರಾದ ದೆಹಲಿಗೆ ವಿಮಾನದಲ್ಲಿ ರವಾನೆ

ಗೃಹಬಂಧನದಲ್ಲಿ ಹಿಂಸೆಗೆ ಒಳಗಾಗಿದ್ದ ಮಹಿಳೆಗೆ ಅಕ್ಕಪಡೆಯಿಂದ ಮುಕ್ತಿ : ತವರೂರಾದ ದೆಹಲಿಗೆ ವಿಮಾನದಲ್ಲಿ ರವಾನೆ

ಬೆಳಗಾವಿ : ತನ್ನ ಪತಿ ಮಹಾಶಯನಿಂದ ಗೃಹಬಂಧನಕ್ಕೆ ಒಳಗಾಗಿ ಹಿಂಸೆ ಅನುಭವಿಸುತ್ತಿದ್ದ ಪತ್ನಿ ಹಾಗೂ ಮಕ್ಕಳಿಗೆ ಬೆಳಗಾವಿಯ ಅಕ್ಕಪಡೆಯು ಮುಕ್ತಿ ನೀಡುವ ಮೂಲಕ ಮಹಿಳೆಯ ತವರೂರಾದ ದೂರದ ದೆಹಲಿಗೆ ಅವಳನ್ನು ಸುರಕ್ಷಿತವಾಗಿ ರವಾನಿಸಿ ಮಾನವೀಯತೆಯನ್ನು ಮರೆದಿದ್ದಾರೆ. 

   ಇದೇ ದಿ. 3 ರಂದು ಬೆಳಗಾವಿ ನಗರದ ಟಿಳಕವಾಡಿ ಪುದೇಶದಲ್ಲಿ ಪತಿ‌ಮಹಾಶಯನೋರ್ವ ತನ್ನ ಪತ್ನಿಯನ್ನು ಮನೆಯ ಬೆಡ್‌ರೂಮ್‌ದಲ್ಲಿ ಲಾಕ್ ಮಾಡಿ ಮಾನಸಿಕ ದೈಹಿಕ ಕಿರುಕುಳ ನೀಡುತ್ತಿರುತ್ತಾನೆ. ಈ ಕುರಿತು ದೆಹಲಿಯಿಂದ ದೂರವಾಣಿ ಕರೆ ಮೂಲಕ ಮಾಹಿತಿಯು ಮಹಿಳಾ ಪೊಲೀಸ ಠಾಣೆಯಿಂದ ಪೊಲೀಸ್ ಇನ್ಸಪೆಕ್ಟರ್ ಡಿ.ಪಿ.ನಿಂಬಾಳಕರ ಅವರಿಗೆ ಮುಂದಿನ ಕ್ರಮ ಕೈಗೊಳ್ಳಲು ತಿಳಿಸಿದ ಹಿನ್ನೆಲೆಯಲ್ಲಿ ನಿಂಬಾಳಕರ ಅವರು ಬೆಳಗಾವಿ ನಗರದಲ್ಲಿಕರ್ತವ್ಯ ನಿರ್ವಹಿಸುತ್ತಿರುವ ಅಕ್ಕಪಡೆಗೆ  ಘಟನಾ ಸ್ಥಳಕ್ಕೆ ಹೋಗಿ ಗೃಹ ಬಂಧನಕ್ಕೆ ಒಳಗಾಗಿದ್ದ ಮಹಿಳೆಗೆ ರಕ್ಷಣೆ ಮಾಡುವಂತೆ ನಿರ್ದೇಶನ ನೀಡಿದ್ದರ ಹಿನ್ನೆಲೆ ಕೂಡಲೇ ಅಕ್ಕಪಡೆ ಕರ್ತವ್ಯದ ಮೇಲಿದ್ದ ಅಧಿಕಾರಿ, ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ಹೋಗಿ ಮನೆಯ ಬಾಗಿಲು ತೆರೆಯಿಸಿ ಮಹಿಳೆಯನ್ನು ಮತ್ತು ಅವರ ಎರಡು ಮಕ್ಕಳನ್ನು ರಕ್ಷಿಸಿದ್ದಾರೆ.

   ಅಲ್ಲದೆ ಅವರಿಗೆ ಬೇಕಾಗ ಅಗತ್ಯ ವೈದ್ಯಕೀಯ ಚಿಕಿತ್ಸೆ, ಸುರಕ್ಷತೆ ಹಾಗೂ ಆಶ್ರಯ ಒದಗಿಸಿದ್ದಾರೆ. ಹಾಗೂ ರಕ್ಷಿಸಲ್ಪಟ್ಟ ಮಹಿಳೆ ನೀಡಿದ ದೂರಿನ ಮೇರೆಗೆಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯ ಪತಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡು ಆರೋಪಿತನಿಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿರುತ್ತದೆ.  ಅಲ್ಲದೆ ಮಹಿಳೆಯ ಸುರಕ್ಷತೆಯ ದೃಷ್ಟಿಯಿಂದ ರಕ್ಷಿಸಲ್ಪಟ್ಟ ಮಹಿಳೆ ಮತ್ತು ಅವಳ ಮಕ್ಕಳಿಗೆ ಅವಳ ತವರೂರಾದ ದೆಹಲಿಗೆ ವಿಮಾನದ ಮುಖಾಂತರ ಕಳುಹಿಸಿಕೊಡಲಾಗಿದೆ.

   ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಮಹಿಳೆಗೆ ರಕ್ಷಣೆ ಮಾಡಿದ ಅಕ್ಕಪಡೆಯಅಧಿಕಾರಿ ಮತ್ತು ಸಿಬ್ಬಂದಿಗಳಾದ ಪಿಎಸ್‌ಐ ಶ್ರೀಮತಿ ಎ ರುಕ್ಕಿಣಿ, ಶ್ರೀಮತಿ ಆರ್.ಐ.ಕಡಲಗಿ, ಮಹೆಚ್‌ಸಿ-1384, ಶ್ರೀಮತಿ ಸ್ವಪ್ನಾ ಗೋಂದಳಿ ಮಹೆಚ್‌ಜಿ- 0220, ಶ್ರೀಮತಿ ರೂಪಶ್ರೀ ಯಮಕನಮರಡಿ ಮಹೆಚ್‌ಜಿ-0759 ಮತ್ತು ಸಿದ್ದಪ್ಪ ಸಾಂಗ್ಲಿ ಎಪಿಸಿ-106 ಇವರ ಈ ಮಾನವೀಯ ಕಾರ್ಯವೈಖರಿ ಶ್ಲಾಘನೀಯವಾಗಿರುತ್ತದೆ.

    ಬೆಳಗಾವಿ ನಗರದಲ್ಲಿ ದಿ. 17/02/2026 ರಿಂದ ಅಕ್ಕಪಡೆಯು ಕಾರ್ಯ ನಿರ್ವಹಿಸುತ್ತಿದ್ದು, ಅಕ್ಕಪಡೆ ಆರಂಭವಾದಾಗಿನಿಂದ ಇಲ್ಲಿಯವರೆಗೂ ಒಟ್ಟು 70 ಶಾಲಾ ಕಾಲೇಜುಗಳು, ಬಸ್‌ನಿಲ್ದಾಣ, ರೇಲ್ವೆ ನಿಲ್ದಾಣ, ವಿಧ್ಯಾರ್ಥಿನಿಯರ ವಸತಿ ನಿಲಯಗಳು, ವರ್ಕಿಂಗ್ ವುಮೆನ್ಸ್ ಹಾಸ್ಟೆಲ್, ಪಿಜಿ ಹಾಸ್ಟೆಲ್‌ಗಳು ಹಾಗೂ ಪುಮುಖ ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡಿ ಒಟ್ಟು 91 ಮಹಿಳಾ ಜಾಗೃತಿ ಕಾರ್ಯಕ್ರಮಗಳನ್ನು ಕೈಕೊಂಡು ಮಹಿಳೆಯರಿಗೆ ಸಂಭಂದಿಸಿದ ಕಾನೂನುಗಳು, ಬಾಲ್ಯವಿವಾಹ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಪೊಕ್ಕೊ ಕಾಯ್ದೆ, ಒಳ್ಳೆಯ ಸ್ಪರ್ಶ-ಕೆಟ್ಟ ಸ್ಪರ್ಶ, ಸೈಬರ್ ಅಪರಾಧಗಳು ಹಾಗೂ ಮಾದಕ ವಸ್ತುಗಳ ದುಷ್ಪರಿಣಾಗಳ ಬಗ್ಗೆ ಜಾಗೃತಿ ಮೂಡಿಸಿ ತುರ್ತು ಸಮಯದಲ್ಲಿಲಭ್ಯ ಇರುವ ಸಹಾಯವಾಣಿಗಳ ಬಗ್ಗೆ ಮಾಹಿತಿ ನೀಡಿದ್ದು ಇರುತ್ತದೆ.

   ಅಲ್ಲದೇ 02 ಜನ ಮಹಿಳೆಯರ ರಕ್ಷಣೆ ಮಾಡಿದ್ದು, 08 ಕೌಟುಂಬಿಕ ಕಲಹ ಪ್ರಕರಣಗಳಲ್ಲಿ ಹಾಗೂ 12 ಇವೆಂಟ್‌ಗಳನ್ನು ಸ್ವೀಕರಿಸಿ, ಹಾಜರಾಗಿ ಅವರ ಸಮಸ್ಯೆಗಳನ್ನು ಬಗೆಹರಿಸಿದ್ದು ಇರುತ್ತದೆ. ಅಕ್ಕ ಪಡೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಈ ಕೆಳಗಿನಂತೆ ಕರ್ನಾಟಕ ಪೊಲೀಸ್ ಕಾಯ್ದೆ -1963 ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದು ಇರುತ್ತದೆ. ಬೆಳಗಾವಿ ನಗರದಲ್ಲಿ ಮಹಿಳೆ ಹಾಗೂ ಮಕ್ಕಳ ಸುರಕ್ಷತೆಗೆ ಅಕ್ಕಪಡೆಯು ಸದಾ ಸಿದ್ಧವಾಗಿ ಕಾರ್ಯ ನಿರ್ವಹಿಸುತ್ತಿದೆ.

ಸುದ್ದಿ ಓದಿ