ಕಾಮ ತೃಷೆಗೆ ಸಹಕಾರ ನೀಡದ ಮಹಿಳೆ ಹತ್ಯೆ : ಆರೋಪಿಗೆ ಜೀವಾವಧಿ ಶಿಕ್ಷೆ : ನ್ಯಾಯಾಲಯದ ಮಹತ್ವದ ತೀರ್ಪು
ಬೆಳಗಾವಿ : ತನ್ನ ಕಾಮ ತೃಷೆಗೆ ಸಹಕಾರ ನೀಡಲಿಲ್ಲ ಎಂದು ಪರಿಶಿಷ್ಟ ಜಾತಿ ಮಹಿಳೆಯನ್ನು ಹತ್ಯೆ ಮಾಡಿದ್ದ ಆರೋಪಿಗೆ ಬೆಳಗಾವಿಯ 3 ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 11 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಮದುರ್ಗ ಗ್ರಾಮದಲ್ಲಿ ಪಿರ್ಯಾದಿಯ ತಾಯಿ ಮೃತಳು ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದು, ಆರೋಪಿತನಾದ ನದೀಮ್ ಇಮಾಮಹುಸೇನ ಮುಲ್ಲಾ ಇವನು ನನ್ನನ್ನು ಪ್ರೀತಿ ಮಾಡು ಅಂತಾ ಅವಳ ಬೆನ್ನು ಬಿದ್ದಿದ್ದನು. ಅವಳು ಇವನ ಕಾಮ ತೃಷೆಗೆ ಸಹಕರಿಸದಿದ್ದಕ್ಕೆ ಸಿಟ್ಟಾಗಿ ಆರೋಪಿತನು ಮೈತಳಿಗೆ ಸರಕಾರಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮುಂಬಾಗದಲ್ಲಿ ದಿ: 16-08-2017ರಂದು ಹೋಗುತ್ತಿದ್ದ ಅವಳನ್ನು ಅಡ್ಡಗಟ್ಟಿ ಚಾಕುವಿನಿಂದ ಚುಚ್ಚಿ ಅವಳನ್ನು ಹತ್ಯೆ ಮಾಡಿದ್ದನು.
ಈ ಕೊಲೆ ಆರೋಪ ಸಾಬೀತಾಗಿರುವುದರಿಂದ ಆರೋಪಿ ನದೀಮ ಇಮಾಮಹುಸೇನ ಮುಲ್ಲಾ ಇತನಿಗೆ ಜೀವಾವಧಿ ಶಿಕ್ಷೆಮತ್ತು ರೂ. 11,000 ದಂಡ ವಿಧಿಸಿ ಮಾನ್ಯ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸವಿತಾಕುಮಾರಿ ಎನ್, ಅವರು ತೀರ್ಪು ನೀಡಿರುತ್ತಾರೆ.
ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಆರ್.ಜಿ.ದೇವರೆಡ್ಡಿ ಅವರು ಪ್ರಕರಣವನ್ನು ನಡೆಸಿ ವಾದ ಮಂಡಿಸಿರುತ್ತಾರೆ.