ಟಮ್ ಟಮ್ ಪಲ್ಟಿಯಾಗಿ ಮಹಿಳೆ ಸಾವು: ಅನೇಕರಿಗೆ ಗಾಯ
ಮುದ್ದೇಬಿಹಾಳ 11: ತಾಲ್ಲೂಕಿನ ತಂಗಡಗಿ ಅಮರಗೋಳ ಕ್ರಾಸ್ ಹತ್ತಿರ ಭಾನುವಾರ ಟಮ್ ಟಮ್ ಪಲ್ಟಿಯಾಗಿ ಕೋಳೂರು ಗ್ರಾಮದ ಓರ್ವ ಮಹಿಳೆ ಮೃತಪಟ್ಟು ಕೆಲವು ಜನ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬ ಮಾಹಿತಿ ತಿಳಿದ ಅಸ್ಕಿ ಪೌಂಡೇಷನ್ ಮುಖ್ಯಸ್ಥ ಹಾಗೂ ಕಾಂಗ್ರೇಸ್ ಮುಖಂಡ ಸಿ ಬಿ ಅಸ್ಕಿ ಅವರು ತಾಲೂಕಾ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತ ಕುಟುಂಬಕ್ಕೆ ತಮ್ಮ ಪೌಂಡೇಷನ್ ವತಿಯಿಂದ 25 ಸಾವಿರ ಸಹಾಯ ಧನ ನೀಡಿ ಸಾಂತ್ವಾನ ಹೇಳಿದರು.
ಈ ವೇಳೆ ಮಾತನಾಡಿದ ಅವರು ಈ ಘಟನೆಯಿಂದಾಗಿ ಇಡೀ ಕೋಳೂರು ಗ್ರಾಮವೇ ಸ್ಮಶಾನ ಮೌನ ಆವರಿಸಿದೆ ಯಾರೇ ಆಗಲಿ ವಾಹ ಓಡಿಸುವಾಗ ಎಚ್ಚರಿಕೆಯಿಂದ ಓಡಿಸಬೇಕು ಜೊತೆಗೆ ಅಗತ್ಯಕ್ಕಿಂತ ಹೆಚ್ಚು ಜನರನ್ನು ಕುಳ್ಳಿರಿಸಿಕೊಂಡು ವಾಹನಗಳು ಓಡಿಸಬಾರದು ಎಲ್ಲ ಸಮಯವೂ ನಮ್ಮದೇಯಾಗಿರಲ್ಲ, ಈ ಬಗ್ಗೆ ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ವೇಳೆ ಮೃತಳು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತ ಒಂದು ರೈತ ಕುಟುಂಬದ ಮಗಳನ್ನು ಕಳೆದುಕೊಂಡಂತಾಗಿದೆ ಕೃಷಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವುದು ತಿಳಿದುಬಂತು ಇದರಿಂದಾಗಿ ಒಂದು ಬಡ ರೈತ ಕುಟುಂಭದ ಮಗಳನ್ನು ಕಳೆದುಕೊಂಡಂತಾಗಿದೆ ಸದ್ಯ ಕುಟುಂಬಕ್ಕೆ ಈ ಆಘಾತವನ್ನುಂಟು ಮಾಡಿದೆ. ಹಾಗಾಗಿ ನಮ್ಮ ಪೌಂಡೇಷನ್ ವತಿಯಿಂದ 25 ಸಾವಿರ ನಗದ ಪರಿಹಾರ ನೀಡುತ್ತಿದ್ದೇನೆ ಯಾರೂ ಕೂಡ ಅನ್ಯತಾ ಭಾವಿಸಬಾರದು, ಸಧ್ಯ ಮೃತಳ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಘಟನೆಯಲ್ಲಿ ಗಾಯಾಳುಗಳಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರು ಬೇಗ ಗುಣಮುಖರಾಗಿ ಮೊದಲಿನಂತಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಕಾಮರಾಜ ಬಿರಾದಾರ, ಬಸಲಿಂಗಪ್ಪ ರಕ್ಕಸಗಿ, ಮಲ್ಲು ಕತ್ತಿ, ಸಿಕಂದರ್ ಜಾನ್ವೇಕರ್, ದೇವರ ಹಿಪ್ಪರಗಿ ಶಬ್ಬಿರ ಮುಲ್ಲಾ ಹಾಗೂ ಇನ್ನೂ ಅನೇಕ ಗಣ್ಯ ಮಾನ್ಯರೊಂದಿಗೆ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ ಬಿ ಅವರು ಅಸ್ಕಿ ಫೌಂಡೇಶನ್ ವತಿಯಿಂದ 25000 ರೂಪಾಯಿಗಳ ಪರಿಹಾರ ಧನ ವಿತರಿಸಿದರು. ಮಾನ್ಯ ಶಾಸಕರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ಮೃತ ಮಹಿಳೆಯ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಹಾಯ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುದಾಗಿ ಆಶ್ವಾಸನೆ ನೀಡಿದರು