ಹಗರಿಬೊಮ್ಮನಹಳ್ಳಿ

ಹಾವು ಕಚ್ಚಿ ಮಹಿಳೆ ಸಾವು

ಹಾವು ಕಚ್ಚಿ ಮಹಿಳೆ ಸಾವು

ಹಗರಿಬೊಮ್ಮನಹಳ್ಳಿ 06: ನಾಗರ ಪಂಚಮಿ ಹಬ್ಬದಲ್ಲಿ ಪಟ್ಟಣದ ಹಳೇ ಊರಿನ ಜೆಜೆ ನಗರ ನಿವಾಸಿ ಸುರಗಿಮಠದ ಗಂಗಮ್ಮರನ್ನು ನಾಗರಹಾವು ಕಚ್ಚಿದ ಪರಿಣಾಮ ಅವರು ಮಂಗಳವಾರ ಮೃತರಾಗಿದ್ದರು. 

ಹಿರಿಯರ ಮಾತಿನ ನಂಬಿಕೆಯಂತೆ ಹಾವು ಕಡಿದ ವ್ಯಕ್ತಿ ಒಂದು ವೇಳೆ ಸಾವನ್ನಪ್ಪಿದರೆ ಅದೇ ಸ್ಥಳಕ್ಕೆ 3ನೇ ದಿನಕ್ಕೆ ಹಾವು ಬರುತ್ತೆ ಎಂದು ಹೇಳುವ ಪ್ರಕಾರ, ಅದೇ ಸ್ಥಳಕ್ಕೆ ಮನೆಯ ಸುತ್ತಮುತ್ತಲಿನಲ್ಲಿ ಶುಕ್ರವಾರ ಮಧ್ಯಾಹ್ನ ಹಾವು ಬಂದಿದೆ. ಅದು ಸಾರ್ವಜನಿಕರಿಗೆ ಕಾಣಿಸಿಕೊಂಡಿತು. ಮನೆಯವರ ಮತ್ತು ಏರಿಯಾದ ಯುವಕರ ಸಹಕಾರದೊಂದಿಗೆ ಸತತ 2ಗಂಟೆಗಳ ಕಾಲ, ಸುರಿಯುತ್ತಿರುವ ಮಳೆಯಲ್ಲೂ ಕಾಡಿಸಿದ ಹಾವು ಕೊನೆಗೂ ಸೆರೆಸಿಕ್ಕಿತು. ಎ.ಕೆ.ಕಾಲೂನಿಯ ಸತ್ಯ ಮತ್ತು ಅವರ ಸಹೋದರರು ಹಾವು ಹಿಡಿಯುವಲ್ಲಿ ಯಶಸ್ವಿಯಾದರು. ಬಳಿಕ ಅದನ್ನು ಕಾಡಿಗೆ ಬಿಟ್ಟುಬಂದರು. 


ಸುದ್ದಿ ಓದಿ