ಕಾಡಿನಿಂಡ ನಾಡಿಗೆ ಬಂದ ಕಾಡಾನೆ : ಹುಕ್ಕೇರಿ ತಾಲೂಕಿನ ಜನನಿಬಿಡ ಪ್ರದೇಶ ಕಾಡಾನೆ ಪ್ರತ್ಯಕ್ಷ, ಆತಂಕದಲ್ಲಿ ಜನಾ
ಬೆಳಗಾವಿ : ಗಂಡು ಕಾಡಾನೆಯೊಂದು ಜನನಿಬೀಡ ಪ್ರದೇಶದಲ್ಲಿ ಪತ್ತೆಯಾಗಿರುವ ಘಟನೆ ಹುಕ್ಕೇರಿ ತಾಲೂಕಿನ ಹಂಚಿನಾಳ ಕ್ರಾಸ್ ಬಳಿಯ ಗುಲಾಬಶಾ ದರ್ಗಾ ಬಳಿಯ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ರವಿವಾರ ಬೆಳಿಗ್ಗೆ ನಡೆದಿದೆ.

ರವಿವಾರ ಬೆಳಗ್ಗೆ ಈ ಕಾಡಾನೆ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪೂರ ಗ್ರಾಮದ ವ್ಯಾಪ್ತಿಯಲ್ಲಿ ಪ್ರತ್ಯಕ್ಷ ವಾಗಿದ್ದು, ಈ ಕಾಡಾನೆಯನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆಯ ಬೆಳಗಾವಿ ಎಸಿಎಫ್ ಮಲ್ಲಿನಾಥ ಕುಸನಾಳ ಸೇರಿದಂತೆ ಹುಕ್ಕೇರಿ ವಯಲದ ಅಧಿಕಾರಿ ಪ್ರಸನ್ನ ಬೆಲ್ಲದ ಮತ್ತು ಸಿಬ್ಬಂದಿಗಳು ಪ್ರಯತ್ನ ನಡೆಸುತ್ತಿದ್ದಾರೆ.
ಇದು ಗಂಡು ಕಾಡಾನೆಯಾಗಿದ್ದು, ಇದು ಮಹಾರಾಷ್ಟ್ರ ಅರಣ್ಯ ಪ್ರದೇಶದಿಂದ ಇದೇ ವರ್ಷದಲ್ಲಿ ಮೂರನೇ ಬಾರಿ ಈ ಪ್ರದೇಶದಲ್ಲಿ ಬಂದಿದೆ ಎನ್ನಲಾಗಿದೆ.