ಕತ್ತೆಕಿರಬ ಕಾಡು ಪ್ರಾಣಿಯ ಓಡಾಟ ಗ್ರಾಮಸ್ಥರಲ್ಲಿ ಭಯ : ಅರಣ್ಯ ಇಲಾಖೆಯಿಂದ ಶೋಧ
ಬೆಳಗಾವಿ : ಕತ್ತೆಕಿರಬ ಕಾಡು ಪ್ರಾಣಿಯೊಂದು ಕಳೆದ ನಾಲ್ಕು ದಿನಗಳಿಂದ ರೈತರ ಜಮೀನುಗಳಲ್ಲಿ ಓಡಾಟ ಮಾಡುತ್ತಿರುವದರಿಂದ ಜನರು ಭಯಬೀತವಾಗಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆದಿದೆ.

ಕತ್ತೆ ಕಿರಬ ಕಾಡು ಪ್ರಾಣಿಯು ಯಮಕನಮರಡಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳಿಂದ ರೈತರ ಜಮೀನು ಗಳಲ್ಲಿ ಓಡಾತ್ತಿರುವದರಿಂದ ಅಲ್ಲಿನ ಜನರು ಭಯಬೀತರಾಗಿದ್ದಾರೆ. ಸುದ್ದಿ ತಿಳಿದ ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು ಕತ್ತೆಕಿರಬ ಪ್ರಾಣಿ ಯನ್ನು ಸೆರೆಹಿರಿಯಲು ಪ್ರಯತ್ನಿಸಿದರೂ ಅವರ ಕೈಗೆ ಈ ಪ್ರಾಣಿ ಸಿಗತಾ ಇಲ್ಲ.
ಯಾವಾಗಾ ಯಾರಿಗೆ ತೊಂದರೆ ಮಾಡುತ್ತೊ ಎನೋ ಎನ್ನುವ ಭೀತಿಯಲ್ಲಿ ಹೊಲಗದ್ದೆಗಳಲ್ಲಿ ವಾಸಿಸುವ ರೈತರಲ್ಲಿ ಆತಂಕ ಸೃಷ್ಟಿ ಮಾಡಿದೆ.