ಕಾರವಾರ

ವೈಟ್ ಬೋರ್ಡ್‌ ವಾಹನ ಬಾಡಿಗೆಗೆ : ವಾಹನ ಹಿಡಿದು ಆರ್ ಟಿ ಓ ಗೆ ಕೊಟ್ಟ ಚಾಲಕರು

ವೈಟ್ ಬೋರ್ಡ್‌ ವಾಹನ ಬಾಡಿಗೆಗೆ : ವಾಹನ ಹಿಡಿದು ಆರ್ ಟಿ ಓ ಗೆ ಕೊಟ್ಟ ಚಾಲಕರು

ಕಾರವಾರ 10 : ಖಾಸಗಿ ನೋಂದಣಿಯ ವೈಟ್‌ಬೋರ್ಡ್‌ ವಾಹನವನ್ನು ನಿಯಮ ಉಲ್ಲಂಘಿಸಿ ವಾಣಿಜ್ಯ ಬಳಕೆಗೆ ಬಳಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಕಾರವಾರ ಬಾಡಿಗೆ ಕಾರು ಚಾಲಕರು , ಖಾಸಗಿ ವಾಹನವನ್ನು ಹಿಡಿದು , ಆರಿ​‍್ಟಒ ಅಧಿಕಾರಿಗೆ ನೀಡಿದ ಘಟನೆ ನಡೆದಿದೆ. ನಗರದಲ್ಲಿ ಹಳದಿಬೋರ್ಡ್‌ ನೋಂದಣಿ ಯೊಂದಿಗೆ ಕಾನೂನುಬದ್ಧವಾಗಿ ಬಾಡಿಗೆ ಸೇವೆ ನೀಡುತ್ತಿರುವ ಚಾಲಕರು ಮತ್ತು ವಾಹನ ಮಾಲೀಕರು ಖಾಸಗಿ ವಾಹನ ಬಾಡಿಗೆ ಹೊಡೆಯುವುದನ್ನು ವಿರೋಧಿಸಿ ಈಚೆಗೆ ಜಿಲ್ಲಾಧಿಕಾರಿಗೆ , ಆರ್ ಟಿಒ ಗೆ ಮನವಿ ನೀಡಿದ್ದರು.

ಖಾಸಗಿ ಬಳಕೆಗೆ ಮಾತ್ರ ಅನುಮತಿಸಲ್ಪಟ್ಟ ವೈಟ್‌ಬೋರ್ಡ್‌ ವಾಹನಗಳನ್ನು ವಾಣಿಜ್ಯ ಸೇವೆಗೆ ಇಳಿಸುವುದರಿಂದ ತಮ್ಮ ಉದ್ಯಮಕ್ಕೆ ನಷ್ಟ ಉಂಟಾಗುತ್ತಿದೆ ಎಂದು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು . ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ವಾಹನ ಖರೀದಿಸಿ, ತೆರಿಗೆ, ವಿಮೆ ಹಾಗೂ ಇತರೆ ಕಾನೂನುಬದ್ಧ ಶುಲ್ಕಗಳನ್ನು ಪಾವತಿಸುತ್ತಿರುವ ನಮಗೆ , ಖಾಸಗಿಯವರ ಅಕ್ರಮ ಬಾಡಿಗೆ ಯಿಂದ ನಮಗೆ ಹಾನಿಯಾಗುತ್ತದೆ.

ಇದು ಅಸಹ್ತಕರ ಸ್ಪರ್ಧೆಯಾಗಿದೆ ಎಂದು ವಾಹನ ಚಾಲಕರು ಹೇಳಿದರು. *ಖಾಸಗಿ ವಾಹನ ಹಿಡಿದರು*: ವೈಟ್‌ಬೋರ್ಡ್‌ ವಾಹನವನ್ನು ವಾಣಿಜ್ಯ ಉದ್ದೇಶಕ್ಕೆ(ಬಾಡಿಗೆಗೆ) ಬಳಸಲಾಗುತ್ತಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳೀಯ ಚಾಲಕರು ವಾಹನವನ್ನು ತಡೆದು ಪರೀಶೀಲನೆ ನಡೆಸಿ, ಬಳಿಕ ಅದನ್ನು ಆರಿ​‍್ಟಒ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ. ನಂತರ ಆರಿ​‍್ಟಒ ಅಧಿಕಾರಿಗಳು ವಾಹನವನ್ನು ಚಿತ್ತಾಕುಲಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಾಹನ ಚಾಲಕ ಹಾಗೂ ಮಾಲೀಕರಾದ ರಾಹುಲ್ ನಾಯ್ಕ, ಖಾಸಗಿ ವಾಹನಗಳ ಅಕ್ರಮ ವಾಣಿಜ್ಯ ಬಳಕೆಯಿಂದ ಕಾನೂನುಬದ್ಧವಾಗಿ ಬಾಡಿಗೆ ಸೇವೆ ನೀಡುತ್ತಿರುವ ಚಾಲಕರಿಗೆ ನಷ್ಟವಾಗುತ್ತಿದ್ದು, ಇಂತಹ ಪ್ರಕರಣಗಳನ್ನು ತಡೆಯಲು ಸಾರಿಗೆ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 


ಸುದ್ದಿ ಓದಿ