ಮುದ್ದೆಬಿಹಾಲ್

ರೈತರ ಪಂಪ್ ಸೆಟ್ ಕಳ್ಳರಿಗೆ ಕಡಿವಾಣ ಯಾವಾಗ?

ರೈತರ ಪಂಪ್ ಸೆಟ್ ಕಳ್ಳರಿಗೆ ಕಡಿವಾಣ ಯಾವಾಗ?

ಸಚಿನ್ ಚಲವಾದಿ

ಮುದ್ದೇಬಿಹಾಳ; ಈಗಾಗಲೇ ತಾಲ್ಲೂಕಿನಲ್ಲಿ ಮಳೆ ಇಲ್ಲದೇ ಬರ ಆವರಸಿದ್ದು, ರೈತರು ಬೆಳೆದ ಬೆಳೆಗೆ ಜಲ ಇಲ್ಲದೇ ಅಕ್ಷರಶಃ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ಪಂಪ್ ಸೆಟ್ (ಮೋಟರ್) ಗಳಿಗೆ ಕಳ್ಳರು ಕಣ್ಣಾಹಾಕುತ್ತಿರುವ ಘಟನೆ ಕಳೆದ ಕೆಲವು ತಿಂಗಳುಗಳಿಂದ ತಾಲೂಕಿನಲ್ಲಿ ವಿಪರೀತವಾಗಿದೆ.ಹೌದು..  ಕೃಷಿಕರು ಕಬ್ಬು, ಬಾಳೆ, ತರಕಾರಿ ಬೆಳೆಯುತ್ತಿದ್ದಾರೆ. ಅದಕ್ಕೆ ನೀರಿನ ಮೂಲ ಅಗತ್ಯವಾಗಿದೆ. ಅದಕ್ಕಾಗಿ ಕೆಲವೊಂದಿಷ್ಟು ರೈತರು ಬೋರ್ ವೇಲ್ ಮೇಲೆ ಅವಲಂಬಿತರಾದರೆ, ಇನ್ನೂಳಿದ ರೈತರು ಕೆರೆ, ಬಾಂದಾರ, ಕೃಷಿ ಹೊಂಡ, ಕಾಲುವೆ ಮೇಲೆ ಅವಲಂಬನೆಯಾಗಿ ಮೋಟರ್ ಅಳವಡಿಸಿ, ಪೈಲ್ಲೈನ್ ಹಾಕಲು ಲಕ್ಷಾಂತರ ಹಣ ವ್ಯಯಿಸಿರುತ್ತಾರೆ. ಆದರೂ ಜೀವನಕ್ಕೆ ಆಧಾರವಾದ ಕೃಷಿ ಕೈಗೊಳ್ಳಲೇಬೇಕಾದ ಕಠಿಣ ಸ್ಥಿತಿಯ ನಡುವೆಯೂ ಈಚೆಗೆ ಕೆರೆ, ಬಾಂದಾರ, ಕಾಲುವೆಗಳಿಂದ ಮೋಟರ್, ವೈರ್, ಪೈಪ್ಗಳ ಕಳ್ಳತನ ಆಗುತ್ತಿದ್ದು, ರೈತರ ಜೀವನ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

 ಇದಕ್ಕೆ ಸಾಕ್ಷಿ ಎಂಬಂತೆ ತಾಲೂಕಿನ ಕೂಗಳತೆಯಲ್ಲಿ ಬರುವ ಕವಡಿಮಟ್ಟಿ ಗ್ರಾಮದಲ್ಲಿ ಕಳೆದ 15 ದಿನದಲ್ಲಿ 30 ಸಾವಿರ ಬೆಲೆಯ ತಲಾ 4 ಮೋಟರ್ ಗಳು ಕಳ್ಳತನ ಆಗಿವೆ.ಕಳೆದ 1 ವರ್ಷದಲ್ಲಿ 200 ಕ್ಕೂ ಹೆಚ್ಚು ಪಂಪ್ ಸೆಟ್ ಕಳವು?ತಾಲೂಕಿನಲ್ಲಿ ಕಾಲುವೆ, ಕೆರೆ, ಬಾಂದಾರ, ಕೃಷಿ ಹೊಂಡಗಳಿಗೆ ಅಳವಡಿಸಿದ್ದ ಪಂಪ್ ಸೆಟ್ ಗಳು ಅಂದಾಜು 200 ಕ್ಕೂ ಅಧಿಕ ಪ್ರಮಾಣದಲ್ಲಿ ಕಳ್ಳರು ಕದ್ದಿದ್ದಾರೆ. ರಾತ್ರೋರಾತ್ರಿ ಕಳವಾಗುತ್ತಿದ್ದರೂ ಪೊಲೀಸ್ ಇಲಾಖೆ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ಸು ಕಾಣುತ್ತಿಲ್ಲ. ಪೊಲೀಸರು ಕಳ್ಳರನ್ನ ಎಡೆಮುರಿ ಕಟ್ಟದಿದ್ದರೆ ಇಂತಹ ಬರಗಾಲದ ದಿನಗಳಲ್ಲಿ ರೈತರು ಮತ್ತಷ್ಟು ಸಂಕಷ್ಟದ ದಿನಗಳನ್ನ ಎದುರಿಸಬೇಕಾಗುತ್ತದೆ.

ಮುದ್ದೇಬಿಹಾಳ, ತಾಳಿಕೋಟಿ, ನಾಲತವಾಡ ಪಟ್ಟಣದಲ್ಲಿ ಹಾಗೂ ಹೊಬಳಿ ಮಟ್ಟದಲ್ಲಿ ಸಿಸಿ ಕ್ಯಾಮೆರಾಗಳು ಇವೆ. ಇಷ್ಟಾದರೂ ಕಳ್ಳರು ತಮ್ಮ ಕೈಚಳಕವನ್ನ ಮುಂದುವರೆಸಿದ್ದಾರೆ. ಇದರಿಂದ ರೈತರು ರೋಸಿಹೋಗಿದ್ದು, ಪೊಲೀಸರು ಈ ಬಗ್ಗೆ ನಿಗಾವಹಿಸಿ ಕಳ್ಳರನ್ನು ಎಡೆಮುರಿ ಕಟ್ಟಬೇಕು. ಪಂಪ್ ಸೆಟ್ ಗಳ ಕಳ್ಳರನ್ನು ಹಿಡಿಯಲು ಪೊಲೀಸರು ನಿಷ್ಕಾಳಜಿವಹಿಸದೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದರು.ಇನ್ನು ರೈತರು ಕೂಡ ಜಾಗೃತರಾಗಿ ಪಂಪ್ ಸೆಟ್ ಕಳವು ಬಗ್ಗೆ ಸೂಕ್ತ ದಾಖಲಾತಿಯೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. ಅಂಗಡಿಕಾರರು, ಅಪರಿಚಿತರು, ಮಧ್ಯವರ್ತಿಗಳಿಂದ ಪಂಪ್ ಸೆಟ್ ಖರೀದಿ ಮಾಡುವ ವೇಳೆಯಲ್ಲಿ ರೈತರು ಬಿಲ್ ಇಲ್ಲದೇ ಖರೀದಿ ಮಾಡಬಾರದು. ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ ಬಗ್ಗೆ ರೈತರು ಸಹ ಸರಿಯಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದರೇ ಕಳ್ಳರನ್ನು ಎಡೆಮುರಿ ಕಟ್ಟುವಲ್ಲಿ ಸಹಾಯವಾಗುತ್ತದೆ.

***ನೀರನ ಮೋಟರ್ ಕಳವು ಬಗ್ಗೆ ಈಗಾಗಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇನೆ. ಪಂಪ್ ಸೆಟ್ ಕಳೆದು ನಾಲ್ಕು ತಿಂಗಳಾಯಿತು ಇಲ್ಲವರೆಗೆ ಯಾವುದೇ ಸುಳಿವು ಇಲ್ಲ. ಕಳೆದ 10 ತಿಂಗಳಿನಿಂದ ನಮ್ಮ ಗ್ರಾಮದಲ್ಲಿ ಸುಮಾರು 20 ರೈತರ ಪಂಪ್ ಸೆಟ್ ಗಳು ಕಳ್ಳತನವಾಗಿವೆ. ಇಲ್ಲಿವರೆಗೆ ಒಂದು ಮೋಟರ್ ಗಳು ಮರಳಿ ರೈತರಿಗೆ ಸಿಕ್ಕಿಲ್ಲ. ಈ ಬಗ್ಗೆ ಮುದ್ದೇಬಿಹಾಳ ಪೊಲೀಸರು ನಿಗಾವಹಿಸಿ ಇಂತಹ ಕಳ್ಳರನ್ನು ಸೆರೆಹಿಡಬೇಕು.

-ಜಗದೀಶ್ ಇಣಚಗಲ್ಲ್,

ಕವಡಿಮಟ್ಟಿ ಗ್ರಾಮದ ಗ್ರಾಮಸ್ಥ

****ರೈತರ ಪಂಪ್ ಸೆಟ್ ಕಳವು ಬಗ್ಗೆ ಇಲ್ಲಿವರೆಗೆ ಒಂದು ಕೇಸ್ ಮಾತ್ರ ದಾಖಲಾಗಿದೆ. ಈಗಾಗಲೇ ಕಳ್ಳರಿಂದ 19 ಪಂಪ್ ಸೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ರೈತರು ಪಂಪ್ ಸೆಟ್ ಖರೀದಿಯ ರಶೀದಿ ಹಾಗೂ ಸೂಕ್ತ ದಾಖಲಾತಿಯೊಂದಿಗೆ ಪೊಲೀಸ್ ಠಾಣೆಗೆ ನೀಡಿದ್ದಲ್ಲಿ ನಿಮ್ಮ ಪಂಪ್ ಸೆಟ್ ಕೊಡಲಾಗುವುದು.  

-ಆರೀಫ್ ಮುಷಾಪುರಿ,

ಮುದ್ದೇಬಿಹಾಳ ಪಿಎಸ್ 

ಸುದ್ದಿ ಓದಿ