ಮಹಲಿಂಗಪುರ

ವಾರ್ಡಿನಲ್ಲಿ ಏನೇ ಸಮಸ್ಯೆ ಬಂದರೂ ಉತ್ತಮ ಸೌಲಭ್ಯ ಒದಗಿಸುತ್ತೇವೆ: ಅಂಗಡಿ

ವಾರ್ಡಿನಲ್ಲಿ ಏನೇ ಸಮಸ್ಯೆ ಬಂದರೂ ಉತ್ತಮ ಸೌಲಭ್ಯ ಒದಗಿಸುತ್ತೇವೆ: ಅಂಗಡಿ

ಮಹಾಲಿಂಗಪುರ 17: ವಾರ್ಡಿನಲ್ಲಿ ಏನೇ ಸಮಸ್ಯೆ ಬಂದರೂ ಮುಂಬರುವ ದಿನಗಳಲ್ಲಿ ಅವುಗಳನ್ನು ನಿವಾರಿಸಿ ಇಲ್ಲಿಯ ನಿವಾಸಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಪುರಸಭೆ ವಾರ್ಡ್‌ ಸದಸ್ಯ ಶೇಖರ ಅಂಗಡಿ ಎಂದು ಹೇಳಿದರು. 

ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯ ವಾರ್ಡ್‌ ನಂಬರ್ 13ರಲ್ಲಿ ವಿದ್ಯುತ್ ದೀಪಗಳ ಅಳವಡಿಕೆಗಾಗಿ ಕಂಬಗಳನ್ನು ನೆಡುವ ಭೂಮಿ ಪೂಜಾ ಕಾರ್ಯಕ್ರಮವನ್ನು ಪುರಸಭೆ ವಾರ್ಡ್‌ ಸದಸ್ಯ ಶೇಖರ ಅಂಗಡಿ ನೆರವೇರಿಸಿದರು. 

ಪುರಸಭೆಯ 15ನೇ ಹಣಕಾಸು ಅಡಿಯಲ್ಲಿ ಅಂದಾಜು 9 ಲಕ್ಷ ರೂಪಾಯಿಗಳ 40 ಸಿಮೆಂಟ್ ಕಂಬಗಳನ್ನು ನೆಡುವ ಕಾರ್ಯಕ್ರಮ ಇದಾಗಿದೆ. 

ಈ ಸಮಯದಲ್ಲಿ ವಿಠ್ಠಲ ಕುಳಲಿ, ಬಸವರಾಜ್ ಪರಿಟ್, ಮುತ್ತಪ್ಪ ಕುಂದ್ರಾಳ, ಮಹಾಲಿಂಗ ಶಿವನಗಿ, ಡಾ.ಶಂಕರ ಹುಕ್ಕೇರಿ, ಗಂಗಪ್ಪ ದಿನ್ನಿಮನಿ, ಕಾಶಿಮ ಹಳಿಂಗಳಿ, ನಾಗಲಿಂಗ ಬಡಿಗೇರ, ತಿಪ್ಪಣ್ಣ ಬಂಡಿವಡ್ಡರ್, ಮಲ್ಲಪ್ಪ ಚಿಚಖಂಡಿ, ಅಬ್ಬು ಬೂದಿಹಾಳ, ಮೆಹಬೂಬ ಜಮಾದಾರ, ರಾಜೇಸಾಬ್ ನದಾಫ್, ಶಶಿ ನಕಾತಿ, ಶಫೀಕ್ ಮುಲ್ಲಾ, ಮಹಾಂತೇಶ ಅವಟಗಿ, ಮುದ್ದಪ್ಪ ಚೆನ್ನದಾಸರ, ಮೆಹಬೂಬ್ ಮುಗಳಿಹಾಳ, ಭೀಮಶಿ ಭಜಂತ್ರಿ, ರಮಜಾನ್ ನದಾಫ್ ಇನ್ನು ಮುಂತಾದವರಿದ್ದರು. 


ಸುದ್ದಿ ಓದಿ