ಹೂ ಕೊಟ್ಟು ಪರೀಕ್ಷಾರ್ಥಿಗಳಿಗೆ ಸ್ವಾಗತ
ಮಹಾಲಿಂಗಪುರ 26: ಇಲ್ಲಿನ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ಮೊದಲ ಪರೀಕ್ಷೆಗೆ ಆಗಮಿಸಿದ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಸಿಬ್ಬಂದಿ ಗೇಟ್ ಬಳಿ ನಿಂತು ಹೂಕೊಟ್ಟು ಸ್ವಾಗತ ಮಾಡಿಕೊಂಡರು. ಭಯ ಬಿಟ್ಟು ಭರವಸೆಯಿಂದ ಬರೆಯಿರಿ ಎಂದು ಹಾರೈಸಿದರು. ಪರೀಕ್ಷಾ ಮುಖ್ಯಸ್ಥ ಎಂಡಿಆರ್ಎಸ್ ಪ್ರಾಂಶುಪಾಲ ಎ.ಸಿ.ಹೂಗಾರ, ಉಪಪ್ರಾಂಶುಪಾಲ ಬಿ.ಎನ್.ಅರಕೇರಿ ಇದ್ದರು.