ಇಂಡಿ

ಇಂಡಿ: ವೀಕೆಂಡ್ ಲಾಕ್‌ಡೌನ್ ಯಶಸ್ವಿ

ಇಂಡಿ: ವೀಕೆಂಡ್ ಲಾಕ್‌ಡೌನ್ ಯಶಸ್ವಿ

ಇಂಡಿ 25: ಸರಕಾರ ವಾರಾಂತ್ಯದ ಕರ​‍್್ಯೂ ರೂಪದಲ್ಲಿ ಲಾಕ್‌ಡೌನ್ ವಿಧಿಸಿದ್ದು ನಗರದಲ್ಲಿ 10 ಘಂಟೆಯಿಂದ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿಸಿ ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿ ಲಾಕ್‌ಡೌನ್ ಬಿಗಿಗೊಳಿಸಿದರು. ಆಸ್ಪತ್ರೆ, ಮೆಡಿಕಲ್‌ಗಳನ್ನು ಬಿಟ್ಟರೆ ಬೇರೆ ಯಾವುದು ಅಂಗಡಿ ಮುಂಗಟ್ಟುಗಳಿಗೆ ತೆರೆಯಲಿಲ್ಲ. ಹೀಗಾಗಿ ವೀಕೆಂಡ್ ಲಾಕ್‌ಡೌನ್ ಯಶಸ್ವಿಯಾಗಿದೆ. ಬೆಳಿಗ್ಗೆ 6:00 ಘಂಟೆಯಿಂದ 9:00 ಘಂಟೆಯವರೆಗೆ ಎಂದಿನಂತೆ ಎಲ್ಲ ವ್ಯಾಪಾರ ವಹಿವಾಟುಗಳು ಪ್ರಾರಂಭವಾಗಿದ್ದವು. ಒಂಭತ್ತು ಘಂಟೆಯ ನಂತರ ಪೊಲೀಸ್ ವಾಹನಗಳು ಅಡಾಡಲು ಪ್ರಾರಮಭ ಮಾಡುತ್ತಿದ್ದಂತೆ ಅಂಗಡಿಕಾರರು ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿಲು ಅಂಗಡಿ ಮುಂಗಟ್ಟುಗಳಿಗೆ ಕೀಲಿ ಹಾಕಿಕೊಂಡು ಮನೆಗಳತ್ತ ತೆರಳಿದರು. 

ಲಾಠಿಏಟು: ಸುಖಾ ಸುಮ್ಮನೆ ದ್ವೀಚಕ್ರ ವಾಹನ ಹಾಗೂ ಪಾದಚಾರಿಗಳು ಕೆಲವೆಡೆ ಅಡಡಾಡುತ್ತಿರುವುದನ್ನು ಕಂಡ ಪೊಲಿಸರು ಲಾಠಿ ಏಟಿನ ರುಚಿ ತೋರಿಸುತ್ತಿದ್ದಂತೆ 10:30 ಘಂಟೆ ಎನ್ನುವಷ್ಟರಲ್ಲಿ ಸಂಪೂರ್ಣ ಇಂಡಿ ನಗರ ಸ್ತಭ್ಧವಾಗಿತ್ತು. ಇನ್ನೊಂದೆಡೆ ಮದ್ಯಾಹ್ನವಾಗಿ ಬಿರು ಬಿಸಿಲಿದ್ದರೂ ನಗರದ ಪೊಲೀಸರು ಬಿಸಿಲನ್ನು ಲೆಕ್ಕಿಸದೆ ತಮ್ಮ ಕಾರ್ಯದಲ್ಲಿ ತೊಡಗಿಕೊಂಡು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ್ದು ಕಂಡು ಬಂದಿತು. 

ಸರಕಾರ ವೀಕೆಂಡ್ ಲಾಕ್‌ಡೌನ್ ಆದೇಶ ಹೊರಡಿಸಿದ ಹಿನ್ನೆಲೆ ಪೊಲಿಸ್ ಇಲಾಖೆ ಹಾಗೂ ಪುರಸಭೆ ಸಿಬ್ಬಂದಿಗಳು ನಗರದಲ್ಲಿ ಲಾಕ್‌ಡೌನ್ ಮಾಡಿಸಲು ಮುಂದಾದಾಗ, ಅಂಗಡಿಕಾರರು ಸ್ವಯಂ ಪ್ರೇರಿತವಾಗಿ ಅಂಗಡಿ ಲಾಕ್ ಮಾಡಿ ಸಹಕರಿಸಿದ್ದಾರೆ. ಕೊರೋನಾ ಎರಡನೇ ಅಲೆ ಭಾರಿ ವೇಗವಾಗಿ ಹರಡುತ್ತಿದ್ದು ಸಾರ್ವಜನಿಕರು ಮನೆಯಲ್ಲೇ ಇದ್ದು ಜೀವ ಕಾಪಾಡಿಕೊಳ್ಳಬೇಕು. 

ಡಿವೈಎಸ್‌ಪಿ ಶ್ರೀಧರ ದೊಡ್ಡಿ. 

ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಸರಕಾರದ ಆದೇಶವನ್ನು ಪಾಲಿಸಲು ಪುರಸಭೆ ಸಿಬ್ಬಂದಿಗಳು ಪೊಲೀಸ್ ಇಲಾಖೆಯೊಂದಿಗೆ ಕೈ ಜೋಡಿಸಿದ್ದೇವೆ. ಜನರೂ ಸಹ ಸಹಕಾರ ನೀಡುತ್ತಿದ್ದಾರೆ. ಕೊರೋನಾದಿಂದ ರಕ್ಷಿಸಿಕೊಳ್ಳಲು ಮನೆಯಲ್ಲೇ ಇರುವುದು ಲೇಸು. 

ಶಿವಾನಂದ ಪೂಜಾರಿ ಮುಖ್ಯಾಧಿಕಾರಿ ಪುರಸಭೆ ಇಂಡಿ. 


ಸುದ್ದಿ ಓದಿ