ಹಗರಿಬೊಮ್ಮನಹಳ್ಳಿ

ಅಂಗಡಿ ಮುಂಗಟ್ಟುಗಳು ಬಂದ್ ; ವಾಹನ ಸಂಚಾರಕ್ಕೆ ಬೀಳದ ಬ್ರೇಕ್

ಅಂಗಡಿ ಮುಂಗಟ್ಟುಗಳು ಬಂದ್ ; ವಾಹನ ಸಂಚಾರಕ್ಕೆ ಬೀಳದ ಬ್ರೇಕ್

ಹಗರಿಬೊಮ್ಮನಹಳ್ಳಿ 08 : ಕೋವಿಡ್ ಮೂರನೆ ಅಲೆ ಸೇರಿದಂತೆ ಒಮೈಕ್ರಾನ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾರ್ವಜನಿಕ ಹಿತದೃಷ್ಠಿಯಿಂದ ರೋಗ ಹರಡದಂತೆ ರಾಜ್ಯ ಸರಕಾರ ಹೊರಡಿಸಿದ ವಾರಾಂತ್ಯ ಕರ್ಫ್ಯೂಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ಉಂಟಾಗಿದ್ದು, ಅಗತ್ಯ ವಸ್ಯಗಳ ಸೇವೆ ಹೊರತು ಪಡಿಸಿ ಅಂಗಡಿ ಮುಂಗಟ್ಟಗಳು ಮುಚ್ಚಿದ್ದವು, ಸಾರ್ವಜನಿಕರ ಒಡಾಟ ಹಾಗೂ ವಾಹನಗಳ ಸಂಚಾರಕ್ಕೆ ಸಂಪೂರ್ಣ ಬ್ರೇಕ್ ಬೀಳದೆ ಮಿಶ್ರ ಪ್ರತಿಕ್ರಿಯೆ ಕಂಡುಬಂದಿತು. 

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪೋಲೀಸ್ ಇಲಖೆಯಿಂದ ಏರಿ​‍್ಡಸಿದ್ದ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ ನಡೆಯಿತು, ಸಬೂಬು ಹೇಳಿ ವಿನಾ ಕಾರಣ ರಸ್ತೆಗಿಳಿದ ವಾಹನ ಸವಾರರಿಗೆ ದಂಡವಿಧಿಸಲಾಯಿತು.ಆರೋಗ್ಯ ಸೇರಿದಂತೆ ಅಗತ್ಯ ಸೇವೆಗಳನ್ನು ಪಡೆಯಲು ಪಟ್ಟಣಕ್ಕೆ ಬಂದ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಕೈಗೆಟುಕದೆ ಟಂಟಂ ಸೇರಿದಂತೆ ಖಾಸಗಿ ವಾಹನಗಳ ಮೊರೆಹೋಗಿದ್ದನ್ನು ಕಾಂಡುಬಂದಿತು.ಪಟ್ಟಣದ ಬೀದಿ ಬೀದಿಗಳಲ್ಲಿ ಗಸ್ತು ತಿರುಗಿ ಸಾರ್ವಜನಿಕರಿಗೆ ಮನೆಯಿಂದ ಹೊರಬರದಂತೆ ಒಣಿಗಳಲ್ಲಿ ತೆರೆದ ಅಂಗಡಿಗಳನ್ನು ಮುಚ್ಚಿಸಿ ವಾರ್ನಿಂಗ್ ಮಾಡಿದ್ದು ಕಂಡುಬಂದಿತು. 

ಪಟ್ಟಣದಲ್ಲಿನ ಹೋಟೇಲ್‌ಗಳಲ್ಲಿ ಪಾರ್ಸೆಲ್ ವ್ಯೆವಸ್ಥೆಯಿದ್ದು, ಅಲ್ಲಿಯು ಜನ ಗುಂಪಾಗಿ ಸೇರದಂತೆ ತಾಕೀತು ಮಾಡಲಾಯಿತು. ರಸ್ತೆಗಳಲ್ಲಿ ಒಡಾಡುತ್ತಿದ್ದ ವಾಹನ ಸವಾರರ ಹಾಗೂ ಪೋಲೀಸರ ನಡುವೆ ಮಾತಿನ ಚಕಮಕಿಯು ನಡೆಯಿತು. 

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಪ್ರತಿದಿನ ನೂರಾರು ರೋಗಿಗಳು ಚಿಕಿತ್ಸಗೆ ಬರುವುದು ಸಾಮಾನ್ಯವಾಗಿತ್ತು, ವಾರಾಂತ್ಯದ ಕರ್ಫ್ಯೂಗೆ ಆಸ್ಪತ್ರೆಯಲ್ಲಿ ಬೆರಳೆಣಿಕೆಯಷ್ಟು ಜನ ಮಾತ್ರ ಕಂಡು ಬಂದರು.  

ಸುದ್ದಿ ಓದಿ