ಮಹಲಿಂಗಪುರ

ವೀಕೆಂಡ್,ನೈಟ್ ಕಫ್ಯೂ: ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್‌

ವೀಕೆಂಡ್,ನೈಟ್ ಕಫ್ಯೂ: ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್‌

ಮಹಾಲಿಂಗಪುರ 08; ದೇಶ ಹಾಗೂ ರಾಜ್ಯದಲ್ಲಿ ಕೊರೋನಾ ರೂಪಾಂತರ ತಳಿ ಓಮಿಕ್ರೋನ್ ಶರವೇಗದಲ್ಲಿ ಹರಡುತ್ತಿರುವುದರಿಂದ ಅದನ್ನು ನಿಯಂತ್ರಿಸಲು ಸರ್ಕಾರ ವೀಕೆಂಡ್ ಹಾಗೂ ನೈಟ್ ಕರ್ಫ್ಯೂವನ್ನು ಹೇರಿದ ಈ ಸಂದರ್ಭದಲ್ಲಿ ನಗರದ ವ್ಯಾಪಾರಸ್ಥರು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸರ್ಕಾರದ ನಿರ್ಧಾರಕ್ಕೆ ಬೆಂಬಲಿಸಿದರು. 

ಸರ್ಕಾರ ಸೋಮವಾರದಿಂದ ಶುಕ್ರವಾರದ ವರೆಗೆ ನೈಟ್ ಕರ​‍್್ಯೂ ಜಾರಿ ಮಾಡಿ, ಶುಕ್ರವಾರ ರಾತ್ರಿ 8 ಗಂ.ಯಿಂದಲೇ ಪಟ್ಟಣದ ಹೋಟೆಲ್, ಕಿರಾಣಿ, ಬಟ್ಟೆ ಅಂಗಡಿಗಳು ಸೇರಿದಂತೆ ಎಲ್ಲ ಬಗೆಯ ವ್ಯಾಪಾರಸ್ಥರು ಅಂಗಡಿ ಮುಂಗ್ಗಟ್ಟುಗಳನ್ನು ಬಂದ ಮಾಡಿದ್ದು, ಕೇವಲ ಹಾಲಿನ ಅಂಗಡಿ, ದವಾಖಾನೆ ಮತ್ತು ಓಷಧಿ ಅಂಗಡಿಗಳು ಅಲ್ಲದೆ ಇನ್ನಿತರ ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ವ್ಯಾಪಾರ ವಹಿವಾಟು ನಡೆಸಿದವು. ಇದರಿಂದ ನಗರದಲ್ಲಿ ಜನರ ಓಡಾಟ ಇಲ್ಲದೆ ಪ್ರಮುಖ ಬೀದಿಗಳು ಬೇಕೋ ಎನ್ನುತ್ತಿದ್ದವು.  

ಪೊಲೀಸ ಮತ್ತು ಪುರಸಭೆಯ ಸಿಬ್ಬಂದಿಗಳಿಂದ ಕ್ರಮ: ಶುಕ್ರವಾರ ಸಂಜೆಯಿಂದಲೇ ಆರಕ್ಷಕರು ಮತ್ತು ಪುರಸಭೆಯ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು ಮತ್ತು ಶನಿವಾರ ಮುಂಜಾವಿನಿಂದ ಬೇಕಾಬಿಟ್ಟಿ ತಿರುಗಾಡುವ ವಾಹನ ಸವಾರರನ್ನು ತಡೆದು ಸರ್ಕಾರದ ಕೋವಿಡ್ ನಿಯಂತ್ರಣ ಕಾನೂನುಗಳನ್ನು ಕಡ್ಡಾಯವಾಗಿ ಪಾಲೀಸಲು ತಿಳಿ ಹೇಳಿದರು. ಆದರೂ ಆಸುಪಾಸಿನ ಗ್ರಾಮಗಳ ಜನ ಈ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವುದು ಕಂಡು ಬಂದಿತು. 

ಬಡವ ಮತ್ತು ಮಧ್ಯಮ ವರ್ಗದ ತೊಳಲಾಟ : ಮಹಾಲಿಂಗಪುರ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೇಕಾರರು, ಕೃಷಿ ಹಾಗೂ ಕೂಲಿ ಕಾರ್ಮಿಕರೇ ವಾಸವಿರುವ ಪ್ರದೇಶವಾಗಿದ್ದು,. ಸಹಜವಾಗಿ ಈ ಕರ್ಫ್ಯೂಗಳಿಂದ ಮೊದಲೇ ಆರ್ಥಿಕ ಹಿಂಜರಿತ ಹೊಂದಿರುವ ಈ ಜನರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಅಲ್ಲಲ್ಲಿ ಈ ಜನ ಕಳೆದ ಎರಡು ವರ್ಷಗಳ ಲಾಕ್ ಡೌನ್ ನೆನಪಿಸಿಕೊಂಡು ಮತ್ತೆ ಜರ್ಜರಿತರಾಗಿದ್ದಾರೆ. 


ಸುದ್ದಿ ಓದಿ