ಮಹಲಿಂಗಪುರ

ನೇಕಾರರು ಯಾರಿಗೂ ಹಣ ನೀಡಬೇಡಿ: ಬಸವರಾಜ ಚಮಕೇರಿ.

ನೇಕಾರರು ಯಾರಿಗೂ ಹಣ ನೀಡಬೇಡಿ: ಬಸವರಾಜ ಚಮಕೇರಿ.

ಮಹಾಲಿಂಗಪುರ:  ರಾಜ್ಯದ ನೇಕಾರರ ಹಿತ ದೃಷ್ಟಿ ಹಾಗೂ ಅಭಿವೃದ್ಧಿಗಾಗಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಅವರ ಪ್ರಯತ್ನದ ಫಲವಾಗಿ ರಾಜ್ಯ ಬಿಜೆಪಿ ಸರ್ಕಾರ ನೇಕಾರ ಸಮ್ಮಾನ್ ಯೋಜನೆ ಜಾರಿಗೆ ತಂದಿದ್ದು ಆ ಮೂಲಕ ರಾಜ್ಯದ ನೇಕಾರರ ಖಾತೆಗೆ ನೇರ ನಗದು ವರ್ಗಾವಣೆ ( ಡಿ.ಬಿ.ಟಿ ) ಮೂಲಕ ಅರ್ಹ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡುತ್ತಿದೆ ಆದರೆ ಈಗ ಕೆಲವೊಂದು ಸ್ವಯಂ ಘೋಷಿತ ನೇಕಾರ ನಾಯಕರು ಇದನ್ನು ತಾವು ಮಾಡಿಸಿದ್ದು ಎಂದು ಅಮಾಯಕ ಬಡ ನೇಕಾರರಿಂದ ಹಣ ವಸೂಲಿ ಮಾಡಿ ವಂಚಿಸುತ್ತಿದ್ದಾರೆ. ಇದು ಸರ್ಕಾರದ ಯೋಜನೆಯಾಗಿದ್ದು ನೇಕಾರರು ಯಾರಿಗೂ ಹಣ ಕೊಡುವ ಅವಶ್ಯಕತೆ ಇರುವುದಿಲ್ಲ ಹಾಗೂ ಅಮಾಯಕ ಬಡ ನೇಕಾರನ್ನು ವಂಚಿಸುವುದು ಒಳಿತಲ್ಲ ಎಂದು ನೇಕಾರ ಮುಖಂಡ ಹಾಗೂ ಪುರಸಭಾ ಸದಸ್ಯ ಬಸವರಾಜ ಚಮಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ ಓದಿ