ಹಗರಿಬೊಮ್ಮನಹಳ್ಳಿ

ದೇವರ ದಾಸಿಮಯ್ಯ ವೃತ್ತ ನಿರ್ಮಾಣಕ್ಕೆ ನೇಕಾರ ಒಕ್ಕೂಟ ಒತ್ತಾಯ

ದೇವರ ದಾಸಿಮಯ್ಯ ವೃತ್ತ ನಿರ್ಮಾಣಕ್ಕೆ ನೇಕಾರ ಒಕ್ಕೂಟ ಒತ್ತಾಯ

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 09: ಪಟ್ಟನದ ಸರ್ಕ್ಯೂಟ್ ಹೌಸ್‌ಗೆ ತೆರಳುವ ಮಾರ್ಗದ ಬಳಿ ಇರುವ ವೃತ್ತಕ್ಕೆ ಸಂತ ಸೇವಾಲಾಲ್ ಮಹಾರಾಜ ವೃತ್ತ ಎಂದು ನಾಮಕರಣ ಮಾಡಲು ಹೊರಟಿರುವುದು ನೇಕಾರ ಸಮುದಾಯಕ್ಕೆ ಆಕ್ರೋಶ ಉಂಟುಮಾಡಿದೆ ಎಂದು ನೇಕಾರ ಸಮುದಾಯದ ಒಕ್ಕೂಟದ ಅಧ್ಯಕ್ಷ ವಕೀಲ ಜಾಣಾ ಶಿವಾನಂದ ಹೇಳಿದರು.  


ಪಟ್ಟಣದ ಪುರಸಭೆಯ ಬಳಿ ನೇಕಾರ ಸಮುದಾಯಗಳ ಒಕ್ಕೂಟದಿಂದ ದೇವರ ದಾಸಿಮಯ್ಯ ವೃತ್ತ ನಿರ್ಮಾಣಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿ ಹಳೇ ಹಗರಿಬೊಮ್ಮನಹಳ್ಳಿ ಸುಮಾರು 50 ವರ್ಷಗಳಿಂದಲೂ 400ಕ್ಕೂ ಹೆಚ್ಚು ನೇಕಾರ ಸಮುದಾಯಗಳ ಕುಟುಂಬಗಳು ನೇಕಾರ ವೃತ್ತಿಯಿಂದ ಜೀವನ ನಡೆಸುತ್ತಿದ್ದು ಅಲ್ಲಿಯೇ ಒಂದು ನೀಲಕಂಠೇಶ್ವರ ದೇವಸ್ಥಾನವು ಇರುವುದರಿಂದ ನೇಕಾರ ಕುಲದ ಆರಾಧ್ಯ ದಾರ್ಷಿಕರಾದ ಶಿವಶರಣ ದೇವರ ದಾಸಿಮಯ್ಯನವರ ಹೆಸರನ್ನು ಈ ವೃತ್ತಕ್ಕೆ ನಾಮಕರಣ ಮಾಡುವುದು ಸೂಕ್ತವಾಗಿದೆ. ಆದ್ದರಿಂದ ಶಿವಶರಣ ದೇವರ ದಾಸಿಮಯ್ಯ ವೃತ್ತವೆಂದು ನಾಮಕರಣ ಮಾಡುವ ಮೂಲಕ ನೇಕಾರ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.  

ಪದ್ಮಶಾಲಿ ಬಹುತ್ತಮ ಸಮಾಜದ ತಾಲೂಕು ಅಧ್ಯಕ್ಷ ಅನಿಲ್‌ಕುಮಾರ್ ಜಾಣಾ ಮಾತನಾಡಿ ದಶಕಗಳಿಂದಲೂ ಹಳೇ ಹ.ಬೊ.ಹಳ್ಳಿಯಲ್ಲಿ ನೇಕಾರ ಸಮುದಾಯದವರು ನೇಕಾರಿಕೆ ವೃತ್ತಿಯನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದು ಸುಮಾರು 400ಕ್ಕೂ ಹೆಚ್ಚು ಕುಟುಂಬಗಳು ಅಲ್ಲಿ ವಾಸವಾಗಿವೆ. ಆದರೆ ಇತ್ತೀಚಿಗೆ ಅ.8 ರಂದು ನಡೆದ ಜಂಟಿ ಸಭೆಯಲ್ಲಿ 7 ವೃತ್ತಗಳ ನಾಮಕರಣ ಮಾಡಲು ಠರಾವು ಸಂಖ್ಯೆ:17ರ ಪ್ರಕಾರ ಹಳೇ ಹ.ಬೊ.ಹಳ್ಳಿಯ ಈ 6ನೇ ವೃತ್ತಕ್ಕೆ ಸಂತ ಸೇವಾಲಾಲ್ ಮಹರಾಜರ ಹೆಸರು ನಾಮಕರಣ ಮಡಿರುವುದು ಸಮಂಜಸವಲ್ಲ. ಇಲ್ಲಿ ನೇಕಾರ ಸಮುದಾಯದ ಶ್ರೀ ನೀಲಕಂಠೇಶ್ವರ ದೇವಸ್ಥಾನವು ಇರುವುದರಿಂದ ಇಲ್ಲಿ ಹೆಚ್ಚನ ಜನಸಂಖ್ಯೆ ಇರುವ ಆ ಸಮುದಾಯಕ್ಕೆ ದೇವರ ದಾಸಿಮಯ್ಯ ವೃತ್ತ ನಿರ್ಮಾಣ ಮಾಡುವ ಮೂಲಕ ಪ್ರಾಶಸ್ತ್ಯ ನೀಡಿದಂತಾಗುತ್ತದೆ ಆದ್ದರಿಂದ ಎಲ್ಲಾ ಪೂರ್ವ ಪರಗಳನ್ನು ವಿಚಾರಿಸಿ ವೃತ್ತ ನಾಮಕರಣಕ್ಕೆ ಆಡಳಿತ ವರ್ಗ ಮುಂದಾಗಬೇಕಿತ್ತು. ಆದರೆ ಯಾವ ಸಾರ್ವಜನಿಕರು, ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ತಮಗೆ ತಿಳಿದಂತೆ ಏಕ ಮುಖವಾಗಿ ವೃತ್ತಗಳಿಗೆ ನಾಮಕರಣ ಮಾಡುತ್ತಿರುವುದು ಸರಿಯಲ್ಲ ಎಂಬುದು ನಮ್ಮ ಆಕ್ಷೇಪಣೆಯಾಗಿದ್ದು ಈ ಕೂಡಲೆ ಈ ವೃತ್ತಕ್ಕೆ ದೇವರ ದಾಸಿಮಯ್ಯ ಎಂದು ನಾಮಕರಣ ಮಾಡಲಿ ಎಂದರು.  

ಕರ್ನಾಟಕ ರಕ್ಷಣಾ ಸೇನೆ ಅಧ್ಯಕ್ಷ ಶಿವಕುಮಾರ್ ಗೋಟೂರು ಮಾತನಾಡಿ ನೇಕಾರ ಸಮುದಾಯಗಳ ಒಕ್ಕೂಟವು ಕೇಳುತ್ತಿರುವ ಮನವಿ ನ್ಯಾಯ ಸಮ್ಮತವಾಗಿದ್ದು ಅವರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.  

ಕರವೇ (ನಾರಾಯಣಗೌಡ ಬಣ) ತಾಲೂಕು ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ ಹಳೇ ಹ.ಬೊ.ಹಳ್ಳಿ  ಹುಟ್ಟಿದಾಗಿನಿಂದಲೂ ಈ ಭಾಗದಲ್ಲಿ ನೇಕಾರ ಸಮುದಾಯವು ತಮ್ಮ ನೇಕಾರಿಕೆ ಕುಲಕಸುಬನ್ನು ಮುಂದುವರಿಸಿಕೊಂಡು ಬಂದಿದ್ದು ಈಗ ಅವರು ದೇವರ ದಾಸಿಮಯ್ಯ ವೃತ್ತ ನಿರ್ಮಾಣಕ್ಕೆ ಒತ್ತಾಯ ಮಾಡುತ್ತಿರುವುದು ಸಮಂಜಸವಾಗಿದೆ ಆದ್ದರಿಂದ ನಮ್ಮ ಸಂಘಟನೆಯು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.  

ಇದೇ ವೇಳೆ ಕುರುಹಿನ ಶೆಟ್ಟಿ ಸಮಾಜ, ಶ್ರೀ ಬನಶಂಕರಿ ದೇವಿ ಸೇವಾ ಟ್ರಸ್ಟ್‌, ಶ್ರೀ ಪದ್ಮಶಾಲಿ ಬಹುತ್ತಮ ಸಮಾಜ, ನೇಕಾರರ ಒಕ್ಕೂಟ ಮತ್ತು ಕನ್ನಡ ರಕ್ಷಣವೇದಿಕೆಗಳು ಸೇರಿದಂತೆ ವಿವಿಧ ಸಂಘಟನೆಗಳು ಹಳೇ ಹ.ಬೊ.ಹಳ್ಳಿಯ ಸರ್ಕ್ಯೂಟ್ ಹೌಸ್‌ಗೆ ಹೋಗುವ ಮಾರ್ಗದ ವೃತ್ತಕ್ಕೆ ದೇವರ ದಾಸಿಮಯ್ಯ ಎಂದು ನಾಮಕರಣ ಮಾಡಲು ಒತ್ತಾಯಿಸಿ ಪ್ರತಿಭಟನೆ ಮಾಡಿದರು.  

ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗುಳಿ ನೇಕಾರ ಒಕ್ಕೂಟದ ಮನವಿ ಸ್ವೀಕರಿಸಿ ಮಾತನಾಡಿ ನಿಮ್ಮ ಬೇಡಿಕೆಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.  


ಈ ಸಂದರ್ಭದಲ್ಲಿ ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಎಂ.ಮಲ್ಲಿಕಾರ್ಜುನ, ಬನಶಂಕರಿ ದೇವಿ ಸೇವಾ ಟ್ರಸ್ಟ್‌ ಅಧ್ಯಕ್ಷ ಎನ್‌.ವಿರುಪಾಕ್ಷಿ, ಪದ್ಮಶಾಲಿ ಬಹುತ್ತಮ ಸಮಾಜ ಉಪಾಧ್ಯಕ್ಷ ಜೆ.ನಾಗರಾಜ, ಕಾರ್ಯದರ್ಶಿ ಸೋಮಶೇಖರ ಜಾಣಾ, ವಿರುಪಾಕ್ಷಿ ಗೋರಂಟ್ಲಿ, ಪೂಜಾರ ಸುರೇಶ್,  ಕೊಟ್ರಗೌಡ, ನೀಲಕಂಠಪ್ಪ, ಬಿ.ಪಂಪಣ್ಣ, ನಾರಾಯಣ ಮಚಾಲೆ, ಕಡ್ಡಿ ಆನಂದ, ಮಂಜುನಾಥ, ಸಮಗಂಡಿ ನಾಗರಾಜ, ವಕೀಲ ಜಗದೀಶ್, ಹಿರಾಳ್ ಶರಣಪ್ಪ, ಆನಂದ, ಕೆ.ವೀರಣ್ಣ, ಶ್ಯಾವಿ ನಾಗರಾಜ, ಹಿರಾಳ್ ವಿಶ್ವನಾಥ, ಅಡಕಿ ಮಧು, ಲಕ್ಷ್ಮಣ ಕಲಾಲ್, ಗುಂಡ್ರ ಹನುಮಂತಪ್ಪ ಮತ್ತಿತರರು ಇದ್ದರು. 


ಸುದ್ದಿ ಓದಿ