ಕಡ್ಡಾಯವಾಗಿ ಮಾಸ್ಕ ಧರಿಸಿ; ಸಿಎಂ ಜಿಲ್ಲಾಧಿಕಾರಿಗೆ ಆದೇಶ
ಇಂಡಿ21: ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊರೋನಾ ವೈರಸ್-2 ನೆರೆಯ ರಾಜ್ಯಗಳಾದ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಗಣನಿಯವಾಗಿ ಕೊರೋನಾ ವೈರಸ್-2 ಅಲೆ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ರಾಜ್ಯದ ಹಿತ ದೃಷ್ಟಿಯಿಂದ ಮುಖ್ಯಮಂತ್ರಿ ಬಿ ಎಸ್.ಯಡಿಯುರಪ್ಪನವರು ಯಾವುದೆ ಸಭೆ ಸಮಾರಭಂಗಳು ಮಾಡಬೇಕಾದರೆ ಕಡ್ಡಾಯವಾಗಿ ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಆಯಾ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.
ಆದರೆ ರಾಜ್ಯ ಸರಕಾರ ಹೊರಡಿಸಿರುವು ನಿಯಮಗಳು ಕಾಟಾಚಾರಕ್ಕೆ ಎಂಬತೆ ಅನ್ನಿಸಿದರೆ ದೇಶಕ್ಕೆ ಯಾವ ಬೆಲೆ? ಇದಕ್ಕೆ ತಾಜಾ ಉಧಾಹರಣೆ ಗಡಿ ಭಾಗದ ಇಂಡಿಯ ನಗರದಲ್ಲಿ ರವಿವಾರದಂದು ಜರುಗಿದ ಪ್ರಥಮ ಮಹಿಳಾ ಕನ್ನಡ ಸಾಹಿತ್ಯ ಸಮ್ಮೆಳನವೆ ಸಾಕ್ಷಿ. ಇಲ್ಲಿ ಮಾಸ್ಕ ಧರಿಸದೆ ಸಾಮಾಜಿಕ ಅಂತರ ಎಂದರೇನು ಎಂಬಂತೆ ಗೊಚರಿಸುವ ರೀತಿಯಲ್ಲಿ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕ ಶಿಕ್ಷಕಿಯರು ಭಾಗಿಯಾಗಿದ್ದು ಅಲ್ಲದೆ ಶಾಲಾ ಮಕ್ಕಳು ಕೂಡಾ ಲಂಬಾಣಿ ಉಡುಗೆ ತೊಟ್ಟು ನೃತ್ಯದಲ್ಲಿ, ಡೊಳ್ಳು ಕುಣಿತ ಮಾಡಿದರು. ಸಾಮುಹಿಕ ಕುಣಿತದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕಿಯರು ಸೇರಿದಂತೆ ಅನೇಕರು ಗಂಡು ಹೆಣ್ಣು ಎಂಬ ಭಾವನೆ ಇಲ್ಲದೆ ಕುಣಿದು ಕುಪ್ಪಳಿಸಿದ್ದು ಸಮ್ಮೆಳನಾದ್ಯಕ್ಷರ ಮೆರವಣಿಗೆಯಲ್ಲಿ ಹಾಗೂ ಸಮ್ಮೆಳನದ ಕಾರ್ಯಕ್ರಮದಲ್ಲಿ ಕೂಡಾ ಕಂಡು ಬಂದಿತು. ಏನಾದರು ಹೆಚ್ಚು ಕಡಿಮೆಯಾದರೆ ಇದಕ್ಕೆ ಯಾರು ಹೊಣೆ?
ಮುಂಬರು ದಿನಗಳಲ್ಲಿ ಪ್ರತಿ ಗ್ರಾಮಗಳಲ್ಲಿ ಜಾತ್ರೆ, ಹರಿದಿನಗಳು ಹೆಚ್ಚಾಗಿ ಜರುಗುತ್ತವೆ. ಇಂತಹ ಸಾರ್ವಜನಿಕವಾಗಿ ಸಭೆ ಸಮಾರಂಭಗಳು ಜಾತ್ರೆಗಳು, ಜಯಂತಿಗಳು ಜರುಗಬೇಕಾದರೆ ಇದಕ್ಕೆ ಪರವಾನಗಿ ಬೇಕೊ ಬೆಡವೆ ಇಲ್ಲ ಮುಕ್ತವಾಗಿದೆ. ಏನಾದರು ಹೆಚ್ಚು ಕಡಿಮೆಯಾದರೆ ಯಾರು ಹೊಣೆ? ಸಾರ್ವಜನಿಕರ ಗಮನಕ್ಕೆ ಬರುವಂತೆ ವಿಜಯಪುರ ಜಿಲ್ಲಾಧಿಕಾರಿಗಳು ಉತ್ತರಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.