ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ: ಭೀಮಪ್ಪ ರಬಕವಿ
ಸಿಂದಗಿ 25: ಹೆಲ್ಮೆಟ್ ಧರಿಸಿ ವಾಹನ ಚಲಿಸುವುದರಿಂದ ನಮ್ಮ ಜೀವವನ್ನು ನಾವು ರಕ್ಷಣೆ ಮಾಡಿಕೊಳ್ಳಹಬುದು. ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಸುರಕ್ಷಿತವಾಗಿ ವಾಹನ ಚಲಿಸುವುದು ನಾವೇಲ್ಲ ರೂಢಿ ಮಾಡಿಕೊಳ್ಳಬೇಕು ಎಂದು ಸಿಂದಗಿ ಪೋಲಿಸ ಠಾಣೆಯ ಆರಕ್ಷಕ ಅಧಿಕಾರಿ ಭೀಮಪ್ಪ ರಬಕವಿ ಹೇಳಿದರು.
ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಪದವಿ ಕಾಲೇಜ ಮತ್ತು ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಿಂದಗಿ ಪೋಲಿಸ್ ಠಾಣೆ ಹಮ್ಮಿಕೊಂಡಿರುವ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 2023-24 ನೇ ಸಾಲಿನಲ್ಲಿ ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಪರಿಣಾಮ ಸುಮಾರು 418 ಕ್ಕೂ ಅಧಿಕ ಜೀವಗಳು ಸಾವನ್ನಪ್ಪಿದ್ದಾರೆ. ನಾವೇಲ್ಲ ನಮ್ಮ ಕುಟುಂಬವನ್ನು ರಕ್ಷಣೆ ಮಾಡುವಂತವರು. ನಾವು ಜಾಗೃತರಾಗಿ ಕಡ್ಡಾಯವಾಗಿ ಹೆಲ್ಮೆಟ್‌ನ್ನು ಧರಿಸಿ ವಾಹನ ಚಲಾಯಿಸಬೇಕು ಎಂದು ಹೇಳಿದ ಅವರು, ಹೆಲ್ಮೇಟ್ ಧರಿಸುವುದರಿಂದ ತಮ್ಮ ಜೀವ ಉಳಿಯುವದರೊಂದಿಗೆ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು ಎಂದರು.
ಎಚ್.ಜಿ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಮಾತನಾಡಿ, ಹೆಲ್ಮೆಟ್ ಫಸ್ಟ್ ಸ್ಪೀಡ್ ನೇಕ್ಸ್-್ಟ ಎಂಬ ಘೋಷಣೆಯೊಂದಿಗೆ ಹೆಲ್ಮೆಟ್ ಧರಿಸುವುದರಿಂದ ಆಗುವ ಲಾಭವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಂ.ಹುರಕಡ್ಲಿ, ಉಪನ್ಯಾಸಕ ಎಸ್.ಆರ್.ಬಿರಾದಾರ, ಎಸ್.ಎ.ಜಾಗಿರದಾರ ವೇದಿಕೆ ಮೇಲಿದ್ದರು.