ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ
ಶಿಗ್ಗಾವಿ 26: ಡಾ. ವೀರೇಂದ್ರ ಹೆಗ್ಗಡೆಯವರ 75 ನೇ ಹುಟ್ಟು ಹಬ್ಬದ ಸವಿನೆನಪಿಗಾಗಿ ಮಡ್ಲಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಲ್ಲಿ ಪುನಶ್ಚೇತನ ಗೊಂಡ ಗೌಡಗಟ್ಟಿ ಕೆರೆಯನ್ನು ಸಮಿತಿಯ ಅಧ್ಯಕ್ಷ ಭೀಮರೆಡ್ಡಿ ನಡುವಿನಮನಿ ಅಧ್ಯಕ್ಷತೆಯಲ್ಲಿ ಕೆರೆ ನಾಮಫಲಕವನ್ನು ಮಡ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರುದ್ರಗೌಡ ಶಂಕರಗೌಡ ಪಾಟೀಲ ಅನಾವರಣ ಗೊಳಿಸಿದರು. ನಂತರ ಕೆರೆಗೆ ಭಾಗಿನವನ್ನು ಯೋಜನೆಯ ಯೋಜನಾಧಿಕಾರಿ ಉಮಾ ಸೇರಿದಂತೆ ಉಪಸ್ಥಿತರಿದ್ದ ಗಣ್ಣರು ಅರೆ್ಣ ಮಾಡಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಶೇಖರಯ್ಯ ಹಿರೇಮಠ್, ಕೆರೆ ಸಮಿತಿ ಉಪಾಧ್ಯಕ್ಷ ವೀರಪಾಕ್ಷಗೌಡ ಪಾಟೀಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಈಶ್ವರಗೌಡ ಪಾಟೀಲ್, ಎಪಿಎಂಸಿ ಉಪಾಧ್ಯಕ್ಷ ಹನುಮರೆಡ್ಡಿ ನಡುವಿನಮನಿ, ಗ್ರಾಮ ಪಂಚಾಯತ್ ಸದಸ್ಯ ಬಸಮ್ಮ ಗುಳೇದ, ಯಲ್ಲಪ್ಪ ತಗಡಿನಮನಿ ಹಾಗೂ ವಲಯದ ಮೇಲ್ವಿಚಾರಕ ದುರಗೇಶ, ಕಾವ್ಯ, ಕೆರೆ ವ್ಯವಸ್ಥಾಪಕ ಸಮಿತಿ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.