ನುಡಿದಂತೆ ನಡೆಯುತ್ತಿದ್ದೇವೆ, ಬಡವರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದೇವೆ : ಸರ್ಕಾರದ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಿ ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ : ಸರ್ಕಾರದ ಅತ್ಯಂತ ಮಹತ್ವದ ಯೋಜನೆ ಗೃಹ ಜ್ಯೋತಿ ಯೋಜನೆಯಾಗಿದ್ದು, ವಿವಿಧ ಯೋಜನೆಗಳ ಅನುಷ್ಠಾನ ಮಾಡುವ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಗೆ ಸರ್ಕಾರ ಪಾತ್ರವಾಗಿದೆ. ಈಗಾಗಲೇ ಗೃಹ ಜ್ಯೋತಿ ಸೇರಿದಂತೆ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ ಸೇರಿ ಒಟ್ಟು 5 ಜನಪರ ಯೋಜನೆಗಳನ್ನು ಸರ್ಕಾರ ಜಾರಿಗೆ ತರುವ ಮೂಲಕ ಬಡವರ ಪರ ಎಂದು ಸಾಬೀತುಪಡಿಸಿದೆ ಇದರ ಸದ್ಬಳಕೆ ಆಗಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕರೆ ನೀಡಿದರು.

ನಗರದ ಕುಮಾರ ಗಂಧರ್ವ ಕಲಾ ಮಂದಿರದ ಶನಿವಾರ ರಾಜ್ಯ ಸರಕಾರದ "ಗೃಹ ಜ್ಯೋತಿ" ಯೋಜನೆ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಸರಾಸರಿ ಬಳಕೆ 53 ಯೂನಿಟ್ ಇದೆ 200 ಯೂನಿಟ್ ಬಳಕೆಗೆ ಯಾವುದೇ ರೀತಿಯ ಶುಲ್ಕ ಪಾವತಿಸುವ ಅವಶ್ಯಕೆತೆ ಇರುವುದಿಲ್ಲ.
ಬೆಳಗಾವಿ ಜಿಲ್ಲೆಯ 13 ತಾಲೂಕು ಹೋಬಳಿಂದ ವಿವಿಧ ಫಲಾನುಭವಿಗಳು ಇದ್ದರು. 10 ಲಕ್ಷ 50 ಸಾವಿರ ಫಲಾನುಭವಿಗಳ ಆಯ್ಕೆ ಈಗಾಗಲೇ ಮಾಡಲಾಗಿದೆ.
ಪ್ರತಿ ನಾಗರಿಕರಿಗೆ ತಲುಪುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಒಗ್ಗೂಡಿಸಿ ಗೃಹ ಜ್ಯೋತಿ ಯೋಜನೆ ಜಾರಿಗೆ ತರಲಾಗಿದೆ. ಪ್ರತಿ ತಿಂಗಳು 43 ಕೋಟಿ ಪ್ರತಿ ತಿಂಗಳು ಅನುದಾನ ವೆಚ್ಚದಲ್ಲಿ ಉಚಿತ ವಿದ್ಯುತ್ ನೀಡಲಾಗುವುದು
ಬಡವರಿಗೆ ವಿವಿಧ ಮೂಲಗಳಿಂದ ಅನೇಕ ಯೋಜನೆಳನ್ನು ಜಾರಿಗೆ ತರುವ ಮೂಲಕ ಸರಳವಾಗಿ ನೀಡಲಾಗುತ್ತಿದೆ. ಸಮಾಜ ಕಟ್ಟುವಲ್ಲಿ ಸರ್ಕಾರದ ಯೋಜನೆಗಳು ಸದುಪಯೋಗ ಆಗಬೇಕು.
ಮಕ್ಕಳಿಗೆ ಶಿಕ್ಷಣ ನೀಡುವುದು ನಿಮ್ಮ ಮೂಲ ಗುರಿಯಾಗಬೇಕು.ಭಾರತ ಸರ್ಕಾರದ ಇತಿಹಾಸದಲ್ಲೇ ಮೊದಲ ಬಾರಿಗೆ ಹಲವು ಬಡವರ ಪರ ಯೋಜನೆಗಳು ಏಕ ಕಾಲದಲ್ಲಿ ನೀಡಲಾಗಿದೆ. ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈಗಾಗಲೇ ಸರ್ಕಾರ ಬಡವರು, ಮಾಧ್ಯಮ ವರ್ಗದವರು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೆ ತಂದಿದೆ ಇದರ ಇದರ ಬಳಕೆಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಾಗಿದೆ ಎಂದು ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಬೆಳಗಾವಿ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆಸಿಫ್ (ರಾಜು) ಸೇಠ್ ಮಾತನಾಡಿ, ಈಗಾಗಲೇ ಸರ್ಕಾರ ಯೋಜನೆಗಳ ಗ್ಯಾರೆಂಟಿ ಮೂಲಕ ಜಾರಿ ಮಾಡಲಾಗಿದೆ. ಅದರ ಉಪಯೋಗ ಫಲಾನುಬವಿಗಳು ಪಡೆಯುವಂತೆ ನುಡಿದರು.
ಜಿಲ್ಲೆಯ ವಿವಿಧ ಫಲಾನುಭವಿಗಳಿಗೆ ವಿದ್ಯುತ್ ಉಚಿತ ಬಿಲ್ ಸಾಂಕೇತಿಕವಾಗಿ ನೀಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.