ರಾರಾವಿ ಹಗರಿ ನದಿ ಸೇತುವೆ ಮೇಲೆ ನೀರು : ಅಪಾಯಕ್ಕೆ ಆಹ್ವಾನ
ಸಿರುಗುಪ್ಪ -ತಾಲ್ಲೂಕು ರಾರಾವಿ ಬಳಿಯ ವೇದಾವತಿ ನದಿ ಹಗರಿ ಸೇತುವೆ ಮೇಲೆ ಸತತವಾಗಿ ಮಳೆ ನೀರು ತುಂಬಿ ಹರಿಯುತ್ತಿರುವ ನೀರಿನ ಅಪಾಯದ ನಡುವೆಯೇ ದ್ವಿಚಕ್ರ ವಾಹನ ಸವಾರರು ಸಾರ್ವಜನಿಕರು ಸಂಚರಿಸುತ್ತಿದ್ದಾರೆ.ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ ಆಗುತ್ತದೆ ಆಂಧ್ರ, ತಮಿಳುನಾಡು,ತೆಲಂಗಾಣ ಮೊದಲಾದ ರಾಜ್ಯಗಳ ಕಡೆಗೆ ಮತ್ತು ಈ ತಾಲ್ಲೂಕಿನ 20ಹಳ್ಳಿಗಳ ಸಂಪರ್ಕ ಕಲ್ಪಿಸುವ ಈ ಸೇತುವೆ ಮೇಲೆ 15ದಿನಗಳಿಂದ ನೀರು ತುಂಬಿ ಹರಿದು ಸೇತುವೆ ಅಲ್ಲಲ್ಲಿ ಸಂಪೂರ್ಣ ಕೊಚ್ಚಿ ಹೋಗಿದೆ ನೀರು ರಭಸವಾಗಿ ಹರಿಯುತ್ತಿದೆ ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕು ಎಂದು ಸಾಕ್ಷರತಾ ಕಾರ್ಯಕಾರಿ ಸಮಿತಿಯ ಸದಸ್ಯ ಎ ಅಬ್ದುಲ್ ನಬಿ ಅವರು ವಿನಂತಿಸಿಕೊಂಡಿದ್ದಾರೆ.