ಮಹಲಿಂಗಪುರ

ನೀರಿನ ದಾನ, ದೇವರ ಕಾರ್ಯ: ಶೇಖರ್ ಅಂಗಡಿ.

ನೀರಿನ ದಾನ, ದೇವರ ಕಾರ್ಯ: ಶೇಖರ್ ಅಂಗಡಿ.

ಮಹಾಲಿಂಗಪುರ 02: ನೀರು ಜೀವಜಲ, ಅದು ಅಮೃತಕ್ಕೆ ಸಮಾನ. ಬಿಸಿಲ ಬೇಗೆಯಿಂದ ಬಸವಳಿದ ದಾರಿಹೋಕರಿಗೆ ಮತ್ತು ಸಾರ್ವಜನಿಕರಿಗೆ ಜೀವಜಲವನ್ನು ನೀಡಿ ಸಹಾಯ ಮಾಡುವ ಕಾರ್ಯ ನಿಜವಾದ ದೇವರ ಕಾರ್ಯ ಅಂತಹ ಕಾರ್ಯವನ್ನು ಮಾಡುತ್ತಿರುವ ಶ್ರೀರಾಮ ಸೇನಾ ಹಿಂದೂಸ್ತಾನ ಸಂಘಟನೆಯ ಅಧ್ಯಕ್ಷ ನಾಗರಾಜ ಭಜಂತ್ರಿ ಮತ್ತು ಅವರ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ ಎಂದು ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಶೇಖರ ಅಂಗಡಿ ಹೇಳಿದರು.

ಸ್ಥಳೀಯ  ರಾಮ ಸೇನಾ ಹಿಂದೂಸ್ತಾನ ವತಿಯಿಂದ ಚನ್ನಮ್ಮ ವೃತ್ತ, ಬಸವೇಶ್ವರ ವೃತ್ತ, ಮಾಧವಾನಂದ ಆಶ್ರಮ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಅರವಟಿಗೆಗಳನ್ನು ಉದ್ಘಾಟಸಿ ಮಾತನಾಡಿದರು. 

ಶ್ರೀರಾಮ ಸೇನಾ ಹಿಂದೂಸ್ತಾನದ ಅಧ್ಯಕ್ಷ ನಾಗರಾಜ ಭಜಂತ್ರಿ ಅವರ ನೇತೃತ್ವದಲ್ಲಿ ವಿನಯ ಟಿರ್ಕಿ, ಆನಂದ ನೂಲಿ, ಶ್ರೀನಿವಾಸ ಬಂಡಿವಡ್ಡರ, ಅಕ್ಷಯ ಹಾಸಿಲ್ಕರ, ಕಿರಣ ಜಾಧವ, ಸುರೇಶ ಪಾತ್ರೋಟ, ಶಂಕರ ಬೆಳವಂಕಿ, ಬಸು ಮೇದಾರ, ಸಿದ್ದು ಬೆಳವಂಕಿ, ಬಸು ಭಜಂತ್ರಿ, ಧರ್ಮರಾಜ ಪೂಜಾರಿ , ಶ್ರೀಶೈಲ, ರಾಮು ಕಲಾಲ, ಶ್ರೀಶೈಲ ಕಿರಿಕಿರಿ, ರಾಮು ಗೊಲ್ಲರ, ಆದಿತ್ಯ ಚವ್ಹಾಣ, ಬಸು ಗೌಡಪ್ಪಗೋಳ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಸುದ್ದಿ ಓದಿ