ತಳಕಲ್ಲು ಕೆರೆಗೆ ನೀರು ಹರಿಸಿ ಇಲ್ಲದಿದ್ದರೆ, ಆತ್ಮಹತ್ಯೆ ಎಚ್ಚರಿಕೆ
ಲೋಕದರ್ಶನ ವರದಿ
ಹೂವಿನಹಡಗಲಿ 01 : ಮಳೆ ಕೂರತೆಯಿಂದ ಬತ್ತಿದ ಕೆರೆ ಹಾಗೂ ಹಳ್ಳ ಕೂಳಗಳಿಗೆ ನದಿ ನೀರು ಹರಿಸುವುದರಿಂದ ರೈತಾಪಿ ವರ್ಗ ಮತ್ತು ಜಾನು ವಾರುಗಳ ಹಿತದೃಷ್ಟಿಯಿಂದ ನೀರು ಹರಿಸಬೇಕು ಇಲ್ಲದಿದ್ದರೇ ರಾಜವಾಳ ಬ್ಯಾರೇಜ್ ಮುತ್ತಿಗೆ ಹಾಕಿ ಆತ್ಮಹತ್ಯೆ ಮಾಡವುದಾಗಿ ತಳಕಲ್ಲು ಕೆರೆ ಶಾಶ್ವತ ನೀರು ತುಂಬಿಸುವ ಹೋರಾಟ ಸಮಿತಿ ಎಚ್ಚರಿಕೆ ನೀಡಿದ್ದಾರೆ. ಪಟ್ಟಣದ ಸಿಂಗಟಾಲೂರು ಏತ ನೀರಾವರಿ ಇಲಾಖೆ ಶನಿವಾರ ತಳಕಲ್ಲು ಕೆರೆ ಹೋರಾಟ ಸಮಿತಿ ಮುತ್ತಿಗೆ ಹಾಕಿ ಅಧಿಕಾರಿಗೆ ಬೇಡಿಕೆ ಮನವಿಯನ್ನು ಸಲ್ಲಿಸಿದರು.
ತಳಕಲ್ಲು ಕೆರೆ ಹೋರಾಟ ಸಮಿತಿ ಅದ್ಯಕ್ಷೆ ಎಂ.ಪಿ.ಸುಮಾ ವಿಜಯ ಮಾತನಾಡಿ ನದಿಯಿಂದ 0.004. ಟಿಎಂಸಿ ನೀರು ಹರಿಸಲು ಸರ್ಕಾರ ಆದೇಶ ಇದೆ ಆದರೆ ಕಳೆದ 15 ವರ್ಷಗಳಿಂದ ಹೋರಾಟ ಮಾಡಿದರೂ ಇಲ್ಲಿಯವರೆಗೆ ಕಳಪೆ ಪೈಪ್ ಲೈನ್ ನಿಂದ ದುರಸ್ತಿ ಯಿಂದ ತಳಕಲ್ಲು ಕೆರೆಗೆ ನೀರು ಬರುತ್ತಿಲ್ಲ. ಇಲ್ಲಿಂದ ಕೂಡ್ಲಿಗಿ ಕೆರೆಗಳಿಗೆ ಹೋಗುವ ಪೈಪ್ ಲೈನ್ ಮೂಲಕ 5 ದಿನ ನೀರು ಹರಿಸಬೇಕು ಎಂದು ಮನವಿ ಮಾಡಿದರು.
ಹೋರಾಟ ಸಮಿತಿ ಅದ್ಯಕ್ಷ ಎಂ.ಚನ್ನಬಸಪ್ಪ ಮತ್ತು ರಾಮನಗೌಡ, ಕೆ. ಸತೀಶ್ ಕೆ.ಪಿ.ನಾಗರಾಜ, ಚಂದ್ರ್ಪ ಮಾತನಾಡಿ ಕೂಡಲೇ ಕೆರೆಗಳಿಗೆ ನೀರು ಹರಿಸಬೇಕು ಇಲ್ಲದಿದ್ದರೆ ಇಟ್ಟಗಿ ರಾಜ್ಯ ಹೆದ್ದಾರಿ ಬಂದ್ ಮತ್ತು ಬ್ಯಾರೇಜ್ ಮುತ್ತಿಗೆ ಹಾಕಿ ಆತ್ಮಹತ್ಯೆ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಬಿ.ಸಿದ್ದಪ್ಪ, ಕೆ.ರವಿಯಪ್ಪ, ವಾಲಿ ಅಜ್ಜಪ್ಪ, ಕೆ.ಮಂಜುನಾಥ, ಟಿ.ನಾಗರಾಜ, ಹೇಮಣ್ಣ, ಕೆ.ಮಲ್ಲಪ್ಪ, ಬಸವರಾಜ ಇದ್ದರು.