ಮಹಲಿಂಗಪುರ

ಜನಸ್ಪಂದನ ಸಭೆ: ವಾರ್ಡಿನ ಸಮಗ್ರ ಅಭಿವೃದ್ಧಿ ಭರವಸೆ

ಜನಸ್ಪಂದನ ಸಭೆ: ವಾರ್ಡಿನ ಸಮಗ್ರ ಅಭಿವೃದ್ಧಿ ಭರವಸೆ

ಮಹಾಲಿಂಗಪುರ 6:  16ನೇ ವಾರ್ಡಿನ ಜನ ಸರ್ವಾನುಮತದಿಂದ ಪುರಸಭೆಗೆ ಜನ ಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿದ್ದು, ವಾರ್ಡಿನ ಸೇವೆಯೇ ನನ್ನ ಉದ್ದೇಶ ಎಂದು ಪುರಸಭೆ ಸದಸ್ಯ ಚನಬಸು ಯರಗಟ್ಟಿ ಹೇಳಿದರು.

ಪಟ್ಟಣದ 16ನೇ ವಾರ್ಡಿನ ಶಾಂತಿನಿಕೇತನ ಕಾಲನಿಯ ವೈದ್ಯರ ಸಂಘದ ಸಭಾ ಭವನದಲ್ಲಿ ರವಿವಾರ ಸಂಜೆ ಜರುಗಿದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು.

ಕೊರೋನಾ ಸಮಯದಲ್ಲಿ ಸರ್ಕಾರದಿಂದ ಅನುದಾನ ಸಮಯಕ್ಕೆ ಬಾರದ ಕಾರಣ ವಾರ್ಡಿನಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ನೀವು ಇಟ್ಟಿರುವ ವಿಶ್ವಾಸಕ್ಕೆ ದ್ರೋಹ ಬಗೆಯದೇ ವಾರ್ಡಿನ ಸಮಗ್ರ ಅಭಿವೃದ್ಧಿಯನ್ನು ಮಾಡುತ್ತೇನೆ ಎಂದು ಯರಗಟ್ಟಿ ಭರವಸೆ ನೀಡಿದರು. 

ಡಾ.ಅಶೋಕ ದಿನ್ನಿಮನಿ ಮಾತನಾಡಿ ವಾರ್ಡಿನಾದ್ಯಂತ ನೀರು, ಸಮರ್ಪಕ ವಿದ್ಯುತ ಪೂರೈಕೆ ಹಾಗೂ ದೀಪಗಳ ಅಳವಡಿಕೆ, ರಸ್ತೆ ಡಾಂಬರೀಕರಣ, ಉದ್ಯಾನವನ ಅಭಿವೃದ್ಧಿ, ವಿಧವಾ ವೇತನ, ಜೀಮ್, ರಸ್ತೆ ಬದಿಯಲ್ಲಿ ಪೇವರ ಬ್ಲಾಕ್, ಚರಂಡಿ, ಕಸ ವಿಲೇವಾರಿ ಇನ್ನೂ ಮುಂತಾದ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿರುವ ಅವರು ಅಭಿನಂದನಾರ್ಹರು ಮತ್ತು ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡುವ ಮೂಲಕ ಮಾದರಿ ವಾರ್ಡನ್ನಾಗಿ ಮಾಡುವ ಗುರಿ ಹೊಂದಲಿ ಎಂದರು.

ಇದಕ್ಕೂ ಮುನ್ನ ವಾರ್ಡಿನ ಜನರು ತಮ್ಮ ತಮ್ಮ ಪ್ರದೇಶಗಳಲ್ಲಿಯ ಮೂಲಭೂತ ಸೌಲಭ್ಯಗಳ ಕುಂದುಕೊರತೆಗಳನ್ನು ವಿವರಿಸಿ ಅದಕ್ಕೆ ಪರಿಹಾರ ಹಾಗೂ ಭರವಸೆಗಳನ್ನು ಪಡೆದು ಅಯೋಧ್ಯಾ ನಗರ ಬಸ್ ನಿಲುಗಡೆಗೆ ಹಾಗೂ ವಾರ್ಡಿನ ಅಲ್ಲಲ್ಲಿ ಪಾದಚಾರಿಗಳಿಗೆ ಕೂಡ್ರಲು ಆಸನಗಳ ವ್ಯವಸ್ಥೆ ಕುರಿತು ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಎಸ್ ಎಂ ಅನ್ನಿಗೆರಿ ಮಾತನಾಡಿದರು. ವಾರ್ಡಿನ ಬಸಪ್ಪ ಕೊಪ್ಪದ, ಸಂಜಯ ಅಂಬಿ, ಡಾ. ರವಿ ಕಮತಗಿ, ವರದಿಗಾರ  ಮಹೇಶ ಆರಿ, ಸುರೇಶ ಜಾಡಗೌಡ, ಕಾನಿಪ ಅಧ್ಯಕ್ಷ ಎಸ್.ಎಸ್ ಈಶ್ವರಪ್ಪಗೋಳ, ಸುವರ್ಣ ಆಸಂಗಿ, ಮೀನಾಕ್ಷಿ ಹಿರೇಮಠ, ಆನಂದ ಘಟ್ನಟ್ಟಿ, ಮಹಾಲಿಂಗಪ್ಪ ಶಿರೋಳ, ಗಿರೀಶ ಸೊgಗೊಂಡ, ಪ್ರಭಾಕರ ಘಟ್ನಟ್ಟಿ, ಈರಣ್ಣ ಕೊಪ್ಪದ, ಪ್ರಕಾಶ ಮರೆಗುದ್ದಿ, ಮಲ್ಲು ಮಗದುಮ, ಶಿವಾನಂದ ಹುನಶ್ಯಾಳ, ಸೋಮು ಶಿರೋಳ, ಸಂಜು ರಾಠೋಡ, ಈಶ್ವರ ಮಠಪತಿ, ವಿರೇಶ ಜಿಗೇರಿ, ಶಾರದಾ ಮಠದ, ಪವಿತ್ರ ಭಾವಿಕಟ್ಟಿ, ಸೋಮು ಶಿರೋಳ, ಕಲ್ಲೇದ ಸರ್, ಶಿವಪುತ್ರ ಕೈಸೋಲಗಿ, ಮುರಿಗೇಶ ಪಂಕಿ, ಮಹಾಲಿಂಗ ಕದ್ದಿಮನಿ, ಆನಂದ ಅಂಬಿ ಸೇರಿದಂತೆ ಹಲವರು ಇದ್ದರು. ಗುರುಪಾದ ಅಂಬಿ ಸ್ವಾಗತಿಸಿ ನಾರಾಯಣಗೌಡ ಉತ್ತಂಗಿ ನಿರೂಪಿಸಿ ವಂದಿಸಿದರು. 

ಸುದ್ದಿ ಓದಿ