ಶಾಸಕಿ ಜೊಲ್ಲೆ ಕುಟುಂಬದ ಜಮೀನಿಗೂ ಅಂಟಿದ ವಕ್ಫ್ ವಕ್ರದೃಷ್ಟಿ : ಸ್ವಗ್ರಾಮದಲ್ಲಿರುವ ಜಮೀನು

ಶಾಸಕಿ ಜೊಲ್ಲೆ ಕುಟುಂಬದ ಜಮೀನಿಗೂ ಅಂಟಿದ ವಕ್ಫ್ ವಕ್ರದೃಷ್ಟಿ : ಸ್ವಗ್ರಾಮದಲ್ಲಿರುವ ಜಮೀನು

ಬೆಳಗಾವಿ :  ಬಿಜೆಪಿಯ ಪ್ರತಿಷ್ಠಿತ ಕುಟುಂಬ ಹಾಗೂ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಕುಟುಂಬ ವಕ್ಫ್ ವಕ್ರದೃಷ್ಟಿ (ಹೆಸರು) ಅಂಟಿಕೊಂಡಿರುವ ಮಾಹಿತಿ ಹೊರಬಂದಿದೆ. 


    ಚಿಕ್ಕೋಡಿಯ ಶಶಿಕಲಾ ಹಾಗೂ ಅಣ್ಣಾಸಾಹೇಬ ಜೊಲ್ಲೆ ದಂಪತಿಗಳ ಪುತ್ರ ಬಸವಪ್ರಸಾದ ಜೊಲ್ಲೆ ಹೆಸರಲ್ಲಿರುವ ಸ್ವ ಗ್ರಾಮ ಯಕ್ಸಂಬಾದಲ್ಲಿ ಜಮೀನಿಗೆ ವಕ್ಫ್ ನ ಹೆಸರು ನೊಂದಣಿ ಇರುವದು ಕಂಡು ಬಂದಿದೆ. ಜೊತೆಗೆ ಜೊಲ್ಲೆ ಕುಟುಂಬದ ಹಲವು ಜನರ ಜಮೀನಿಗೂ ವಕ್ಫ್ ಆಸ್ತಿಯ ಹೆಸರು ಅಂಟಿಕೊಂಡಿದೆ.

   ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿನ ಇದು ಪತ್ತೆಯಾಗಿದೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಹಲವಾರು ರೈತರ ಜಮೀನಿಗೆ ವಕ್ಫ್ ಹೆಸರು ಪತ್ತೆಯಾಗಿರುವದು ಬೆಳಕಿಗೆ ಬಂದಿದೆ.

   ಬಿಜೆಪಿಯ‌ ಶಾಸಕಿ ಕುಟುಂಬಕ್ಕೆ ವಕ್ಫ್ ಹೆಸರು ಕಂಡು ಜನಸಾಮಾನ್ಯ, ರೈತರು‌  ದಂಗಾಗಿದ್ದಾರೆ. ಸ್ಪಷ್ಟವಾಗಿ ತಾಂತ್ರಿಕ ದೋಷದ ನಿವಾರಣೆ ನೀಡದ ಸರ್ಕಾರದ ವಿರುದ್ಧ ಆಕ್ರೋಶ ಕೆಲರೈತರು ಹೊರಹಾಕುತ್ತಿದ್ದಾರೆ. 


ಸುದ್ದಿ ಓದಿ