ಶಿಗ್ಗಾವ್

ಶರಣರ ಸಂದೇಶ ಅರೆತು ನಡೆಯಿರಿ : ಮ್ಯಾಗೇರಿ

ಶರಣರ ಸಂದೇಶ ಅರೆತು ನಡೆಯಿರಿ : ಮ್ಯಾಗೇರಿ
ಶಿಗ್ಗಾವಿ,22 : ಕಾಯಕ ಮತ್ತು ಬದುಕು ಏನೆಂಬುದನ್ನ ತಿಳಿಸಿದವರಲ್ಲಿ 12 ನೇ ಶತಮಾನದ ಶರಣರ ಸಾಲಿನಲ್ಲಿ ಬರುವ ನಿಜಶರಣ ಹಡಪದ ಅಪ್ಪಣ್ಣನವರು ಮೊದಲಿಗರು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಯಕದ ಪರಿಕಲ್ಪನೆಯಲ್ಲಿ ಶರಣರು ತೋರಿದ ಸನ್ಮಾರ್ಗ ಬಹಳಷ್ಟಿದೆ, ಭಾವನಾತ್ಮಕ ಸಂಭಂದವನ್ನ ಅಂದೇ ಅನುಭವ ಮಂಟಪದಲ್ಲಿ ಬಸವಣ್ಣನವರು ತಮ್ಮ ಆಪ್ತಕಾರ್ಯದರ್ಶಿಯನ್ನಾಗಿ ಹಡಪದ ಅಪ್ಪಣ್ಣನವರ ನೇಮಿಸುವ ಮೂಲಕ ಮಾದರಿಯಾಗಿದ್ದಾರೆ, ಶರಣರ ವಚನ ಸಾಹಿತ್ಯದ ಪರಿಕಲ್ಪನೆ ಯನ್ನ ಅರಿತವರೇ ಬಲ್ಲರು, ಶರಣರ ವಚನ ಸಾಹಿತ್ಯದ ಸನ್ಮಾರ್ಗದ ಸಂದೇಶಗಳನ್ನ ಅರಿತು ನಡೆಯಿರಿ ಎಂದು ಹಾರೈಸಿದರು.
ಗ್ರೇಡ್ 2 ತಹಶೀಲ್ದಾರ ಎಂ ಎಸ್ ಗಾಮನಗಟ್ಟಿ ಮಾತನಾಡಿ ಸಮಾನತೆ, ಮೂಡನಂಬಿಕೆ ಹೋಗಲಾಡಿಸಲು ಬಸವಣ್ಣನವರ 12 ನೇ ಶತಮಾನದಲ್ಲಿಯೇ ಹಲವಾರು ಶರಣರು ಸಂದೇಶ ನೀಡಿದ್ದಾರೆ ಅವರ ಮಾರ್ಗದರ್ಶನ ನಮಗೆಲ್ಲ ಆದರ್ಶ ಎಂದರು.   
ಈ ಸಂದರ್ಭದಲ್ಲಿ ಬಿಸಿಎಂ ಇಲಾಖೆಯ ಇಂದುಧರ ಮುತ್ತಳ್ಳಿ, ಹಡಪದ ಸಮಾಜದ ಗೌರವಾದ್ಯಕ್ಷ ಬಸವರಾಜ ಹಡಪದ, ಅದ್ಯಕ್ಷ ಮಲ್ಲಿಕಾರ್ಜುನ ಹಡಪದ, ಮುತ್ತಪ್ಪ ಕ್ಷೌರದ, ಶಿವಕುಮಾರ ಮಡ್ಲಿಕರ, ಮಾಲತೇಶ ಹಡಪದ, ವಿರೇಶ ಹಡಪದ, ತಿರಕಪ್ಪ ಹಡಪದ ಸೇರಿದಂತೆ ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು, ಹಡಪದ ಸಮಾಜದ ಮುಖಂಡರು ಇದ್ದರು. 

ಸುದ್ದಿ ಓದಿ