ಶಿಗ್ಗಾವ್

ವಾಹ ಕಾರ್ಯಕ್ರಮದ ಬಿತ್ತಿ ಪತ್ರಿಕೆ ಬಿಡುಗಡೆ

ವಾಹ ಕಾರ್ಯಕ್ರಮದ ಬಿತ್ತಿ ಪತ್ರಿಕೆ ಬಿಡುಗಡೆ

ಲೋಕದರ್ಶನ ವರದಿ

ಶಿಗ್ಗಾವಿ 24: ಬಿಸನಳ್ಳಿ ಗ್ರಾಮದಲ್ಲಿ ಡಿಸೆಂಬರ್ 11 ರಿಂದ 16 ರ ವರೆಗೆ ನಡೆಯಲಿರುವ ಸಿದ್ಧಾಂತ ಶಿಖಾಮಣಿ ಪ್ರವಚನ, ಇಷ್ಟಲಿಂಗ ಮಹಾಪೂಜೆ, ಸಾಮೂಹಿಕ ವಿವಾಹ ಕಾರ್ಯಕ್ರಮದ ಬಿತ್ತಿ ಪತ್ರಿಕೆಗಳನ್ನು ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಗೋಳಿಸಿದರು.

       ನಂತರ ಮಾತನಾಡಿದ ಶ್ರೀಗಳು, ಈ ಬಾಗದ ಭಕ್ತರಿಗೆ ಅನುಕೂಲವಾಗುವ ಉದ್ದೇಶದಿಂದ ಬಿಸನಳ್ಳಿ ಗ್ರಾಮದಲ್ಲಿ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ ಪಾಠಶಾಲೆಯನ್ನು ತೆರೆದು ಮಕ್ಕಳಿಗೆ ಉಚಿತ ಊಟ ವಸತಿಯೋಂದಿಗೆ ಶಿಕ್ಷಣ ನೀಡಲಾಗುತ್ತಿದೆ. ಅದಲ್ಲದೇ ತಂತ್ರಜ್ಞಾನದ ಕಲಿಕೆಗೂ ಕೂಡಾ ಇಲ್ಲಿ ಅವಕಾಶ ಕಲ್ಪಿಸಲಾಗಿದ್ದು, ವಿದ್ಯಾರ್ಥಿ ಗಳಿಗೆ ಕಂಪ್ಯೂಟರ್ ಜ್ಞಾನವನ್ನೂ ಕೂಡಾ ನೀಡಲಾಗುತ್ತಿದೆ. ಡಿ.11 ರಿಂದ 16 ರ ವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸೇವಾಥರ್ಿಗಳು ಬರುವ ಭಕ್ತ ಸಮೂಹಕ್ಕೆ ಯಾವುದೇ ತೋಂದರೆಯಾಗದಂತೆ ಅಚ್ಚು ಕಟ್ಟಾಗಿ ಕಾರ್ಯ ನಿರ್ವಹಿಸಿ ಕಾರ್ಯಕ್ರಮದ ಏಶಸ್ಸಿಗೆ ಕಾರಣರಾಗಬೇಕು ಎಂದು ಹೇಳಿದರು.

      ಈ ಕಾರ್ಯಕ್ರಮ ಐದು ದಿನಗಳವರೆಗೆ ನಡೆಯಲಿದ್ದು, ರಾಷ್ಟ್ರೀಯ ವೀರಶೈವ ಸೇವಾ ಸಮಾಜ ತೆಲಂಗಾಣ ರಾಜ್ಯದ ಹೈದ್ರಾಬಾದ್ ಬಲಕಂಪೇಟೆಯ ಭಕ್ತ ಸಂಉಹ ನಡೆಸಿಕೊಡುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ವಿಶೇಷತೆ ಮೆರೆದಿದ್ದು, ಈ ಪುಣ್ಯ ಭೂಮಿಯಲ್ಲಿ ವಿವಾಹ ಮಹೋತ್ಸವ ಮಾಡಿಕೊಳ್ಳುವುರೇ ಭಾಗ್ಯ ಶಾಲಿಗಳು. ಐದುದಿನಗಳ ಪರ್ಯಂತರ ಬೆಳಿಗ್ಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಸಂಜೆ ಧರ್ಮ ಸಮಾರಂಭಗಳು ಜರುಗಲಿವೆ ಇದರ ಸದುಪಯೋಗವನ್ನು ಭಕ್ತ ಸಮೂಹ ಪಡೆಯುವಂತೆ ಸೂಚಿಸಿದರು.  ಪಾಠ ಶಾಲೆಯ ಮುಖ್ಯೋಪಾದ್ಯಾಯ ಶ್ರೀ ಮಲ್ಲಿಕಾರ್ಜುನ ಶಾಸ್ತ್ರೀಜಿ, ನಾರಾಯಣ ಗ್ರಾ.ಪಂ.ಸದಸ್ಯ ಗದಿಗಯ್ಯ ಹಿರೇಮಠ. ಮುಖಂಡರಾದ ಗುರುಶಾಂತಪ್ಪ ನರೆಗಲ್ಲ. ಮುರಿಗೇಶ ಆಜೂರ, ಗಂಗಾಧರ ಬಡ್ಡಿ, ಗದಿಗೆಪ್ಪ ಶೆಟ್ಟರ್, ನಾಗರಾಜ ಹೊಸಮನಿ ಸೇರಿದಂತೆ ಪಾಠ ಶಾಲೆ ವಟುಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ