ವೃದ್ಧಾಶ್ರಮಕ್ಕೆ ಓಖಖ ವಿದ್ಯಾರ್ಥಿಗಳ ಭೇಟಿ
ವೃದ್ಧಾಶ್ರಮಕ್ಕೆ ಓಖಖ ವಿದ್ಯಾರ್ಥಿಗಳ ಭೇಟಿ
ಯಮಕನಮರಡಿ: ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಓಖಖ) ಘಟಕದ ವತಿಯಿಂದ ಹಿಡಕಲ್ ಡ್ಯಾಂ ಪಟ್ಟಣದಲ್ಲಿರುವ ಆಸರೆ ವೃದ್ಧಾಶ್ರಮ ಹಾಗೂ ಮಹಿಳಾ ಶಕ್ತಿ ಸದನಕ್ಕೆ ಭೇಟಿ ನೀಡಲಾಯಿತು.
ಬೆಳಿಗ್ಗೆ 10 ಗಂಟೆಗೆ ಕಾಲೇಜಿನಿಂದ ತೆರಳಿದ ವಿದ್ಯಾರ್ಥಿಗಳು ಸಂಸ್ಥೆಯ ಆವರಣದಲ್ಲಿ ಶ್ರಮದಾನ ಹಾಗೂ ಸ್ವಚ್ಛತಾ ಕಾರ್ಯ ಕೈಗೊಂಡರು. ಬಳಿಕ ವೃದ್ಧಾಶ್ರಮದ ಹಿರಿಯರೊಂದಿಗೆ ಸಮಯ ಕಳೆದು, ಅವರ ಸಮಸ್ಯೆಗಳನ್ನು ಆಲಿಸಿದರು. ಹಿರಿಯ ಜೀವಗಳು ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳ ಕುರಿತು ತಿಳಿಸಿ ಆಶೀರ್ವದಿಸಿದರು.
ನಂತರ ನಡೆದ ಸಭೆಯಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಕಚೇರಿ ಸಹಾಯಕಿ ಕುಮಾರಿ ಪೂಜಾ ಚೌಗಲೆ ಅವರು ಮಹಿಳೆಯರು ಹಾಗೂ ಮಕ್ಕಳಿಗಾಗಿ ಸಂಸ್ಥೆ ಹಮ್ಮಿಕೊಳ್ಳುವ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಓಖಖ ಕಾರ್ಯಕ್ರಮಾಧಿಕಾರಿ ಬಸವರಾಜ ಕೊಡ್ಲಿ ಮಾತನಾಡಿ, ವಯೋವೃದ್ಧರ ಸಮಸ್ಯೆಗಳನ್ನು ಅರಿತು ಅವರಿಗೆ ಕುಟುಂಬ ಹಾಗೂ ಸಮಾಜದಿಂದ ಆತ್ಮವಿಶ್ವಾಸ ನೀಡಬೇಕು. ಅವರ ಅನುಭವಗಳನ್ನು ಪಡೆದು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಆರ್. ತಬರಿ ಸೇರಿದಂತೆ ಸ್ವಯಂಸೇವಕರು ಹಾಗೂ ಕಾಲೇಜಿನ ಸಿಬ್ಬಂದಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಈ ಭೇಟಿಯಿಂದ ವಿದ್ಯಾರ್ಥಿಗಳು ಹಲವು ಜೀವನ ಮೌಲ್ಯಗಳನ್ನು ಅರಿತುಕೊಂಡರು.