‘ಮತದಾನ ನಮ್ಮೆಲ್ಲರ ಹಕ್ಕು’
ಹಗರಿಬೊಮ್ಮನಹಳ್ಳಿ 18: ಪಟ್ಟಣದ ಗಂ.ಭೀ.ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಗುರುವಾರ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮತದಾನ ಜಾಗೃತಿಯನ್ನು ಮೂಡಿಸಿದರು. ಮತದಾನ ನಮ್ಮೆಲ್ಲರ ಹಕ್ಕು ಎಂಬ ಘೋಷಣೆ ಕೂಗಿದರು. ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಹಶಿಲ್ದಾರ್ ಶರಣಮ್ಮ, ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಜಾಥದಲ್ಲಿ ಭಾಗವಹಿಸಿದ್ದರು.