ಮತದಾನ ಮಾಡುವದು ನಮ್ಮ ಹಕ್ಕು : ಬನ್ನಿ ನಮ್ಮ ಹಕ್ಕು ಚಲಾವಣೆ ಮೂಲಕ ನಾಡಿನ ಪ್ರಜೆ ಎಂಬುದನ್ನು ಸಾಬೀತು ಮಾಡೊನ

ಮತದಾನ ಮಾಡುವದು ನಮ್ಮ ಹಕ್ಕು : ಬನ್ನಿ ನಮ್ಮ ಹಕ್ಕು ಚಲಾವಣೆ ಮೂಲಕ ನಾಡಿನ ಪ್ರಜೆ ಎಂಬುದನ್ನು ಸಾಬೀತು ಮಾಡೊನ

ಪಾರೇಶ ಭೋಸಲೆ

ಬೆಳಗಾವಿ : ಮತದಾನ ಮಾಡುವದು ನಮ್ಮ ಹಕ್ಕು. ದೇಶದ ಪ್ರಜಾಪ್ರಭುತ್ವದಲ್ಲಿ ನಾವು ಇದ್ದೇವೆ ಎನ್ನುವದನ್ನು ಖಚಿತಪಡಿಸಿಸಲು ಈ ಹಕ್ಕು ಚಕಾವಣೆ ಅವಶಕ. ಆ ಹಕ್ಕನ್ನು ನಾವು ಮಾರಿಕೊಳ್ಳದೆ ಡಾ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನಮಗೆ ನೀಡಿರುವ ಹಕ್ಕನ್ನು ನಾವು ಇಂದು ಚಲಾವಣೆ ಮಾಡುವ ದಿನ. ಬನ್ನಿ ನಮ್ಮ ಹಕ್ಕು ಚಲಾವಣೆ ಮೂಲಕ ನಾವು ದೇಶದ ಪ್ರಜೆ ಎಂಬುವದನ್ನು ಸಾಬೀತು ಮಾಡೊನ.


    ಹೌದು ಓದುಗರೇ ದೇಶದಲ್ಲಿ ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ನಾವು ಜೀವಂತ ಇರಿಸೋನ. ಇಂದೆ ನಮ್ಮ ಹಕ್ಕು ಚಲಾವಣೆ ಮಾಡೋನ. ನಮಗೆ ಯೋಗ್ಯವಾದ ವ್ಯಕ್ತಿಯನ್ನು ಆಯ್ಕೆ ಮಾಡಿ ನಮ್ಮ ಪ್ರದೇಶವನ್ನು ಅಭಿವೃದ್ಧಿ ಮಾಡಿಕೊಳ್ಳೊನ. ನಮ್ಮ ಮತ ನಾಡಿನ ಶ್ರೇಯೋಭಿವೃದ್ದಿಗಾಗಿ ಚಲಾವಣೆ ಮಾಡೊನ.  

    ಇದೇ 10ನೇ ತಾರೀಕಿನಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಸರಕಾರ ನಿರ್ಮಾಣ ಮಾಡಲು ನಮ್ಮ ಒಂದು ಮತದಾನದ ಹಕ್ಕು ಅತಿಮೂಲ್ಯವಾಗಿದೆ. ಅಂತಹ ಸನ್ನಿವೇಶವನ್ನು ನಾವು ನೆನೆದು ಯಾವದೇ ಕಾರ್ಯ ಇದ್ದರು ಸ್ವಲ್ಪ ಸಮಯವನ್ನು ಪಡೆದು ಮತದಾನದ ಹಕ್ಕು ಚಲಾವಣೆ ಮಾಡೊನ.  


ಸುದ್ದಿ ಓದಿ