ಧಾರವಾಡ - ಹುಬ್ಬಳ್ಳಿ

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಚುರುಕು; ಶೇ.75.90ರಷ್ಟು ಗಣಕೀಕರಣ ಪೂರ್ಣ

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಚುರುಕು; ಶೇ.75.90ರಷ್ಟು ಗಣಕೀಕರಣ ಪೂರ್ಣ

ಲೋಕದರ್ಶನ ವರದಿ 

ಧಾರವಾಡ 27 : ಭಾರತದ ಚುನಾವಣಾ ಆಯೋಗದ ನವದೆಹಲಿಯ ನಿರ್ದೇಶನದಂತೆ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ರ ಕಾರ್ಯ ಧಾರವಾಡ ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ.  

ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಜೂನ್ 30ರಿಂದ ಮತದಾರರ ಮನೆ-ಮನೆಗೆ ಭೇಟಿ ನೀಡಿ ಗಣಕೀಕರಣ ನಮೂನೆಗಳನ್ನು  ವಿತರಿಸುವ ಕಾರ್ಯ ಆರಂಭಿಸಿದ್ದಾರೆ. ಜಿಲ್ಲೆಯ ಒಟ್ಟು 16,21,961 ಮತದಾರರಿಗೆ ಸಂಬಂಧಿಸಿದ ನಮೂನೆಗಳನ್ನು ಮುದ್ರಿಸಿ ಬಿಎಲ್‌ಒಗಳಿಗೆ ವಿತರಿಸಲಾಗಿದ್ದು, ಜುಲೈ 27ರ ವೇಳೆಗೆ ಶೇ.100ರಷ್ಟು ನಮೂನೆಗಳ ವಿತರಣೆ ಪೂರ್ಣಗೊಂಡಿದೆ.  

ಜಿಲ್ಲೆಯಲ್ಲಿ ಇದುವರೆಗೆ 12,31,040 ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದ್ದು, ಶೇ.75.90ರಷ್ಟು ಪ್ರಗತಿ ಸಾಧಿಸಲಾಗಿದೆ. ಗೈರು ಹಾಜರಿ, ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 2,03,404 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 92,203 ಶಾಶ್ವತ ಸ್ಥಳಾಂತರ ಪ್ರಕರಣಗಳು, 43,461 ಮರಣ ಪ್ರಕರಣಗಳು, 16,872 ದ್ವಿಪ್ರತಿ ಪ್ರಕರಣಗಳು, 50,256 ಗೈರು ಹಾಗೂ ಇತರೆ 612 ಪ್ರಕರಣಗಳು ಸೇರಿವೆ.  

ವಿಧಾನಸಭಾ ಕ್ಷೇತ್ರವಾರು ಕಾರ್ಯ ಪ್ರಗತಿಯಲ್ಲಿ ನವಲಗುಂದ ಕ್ಷೇತ್ರದಲ್ಲಿ 2,15,962 ನಮೂನೆಗಳ ಪೈಕಿ 1,93,034 ನಮೂನೆಗಳು, ಕುಂದಗೋಳದಲ್ಲಿ 1,69,390, ಧಾರವಾಡದಲ್ಲಿ 1,73,349, ಹುಬ್ಬಳ್ಳಿ-ಧಾರವಾಡ ಪೂರ್ವದಲ್ಲಿ 1,64,134, ಹುಬ್ಬಳ್ಳಿ-ಧಾರವಾಡ ಕೇಂದ್ರದಲ್ಲಿ 1,72,054, ಹುಬ್ಬಳ್ಳಿ-ಧಾರವಾಡ ಪಶ್ಚಿಮದಲ್ಲಿ 1,85,455 ಹಾಗೂ ಕಲಘಟಗಿಯಲ್ಲಿ 1,73,624 ನಮೂನೆಗಳು ಗಣಕೀಕರಣಗೊಂಡಿವೆ.  

ಮತದಾರರು ತಮ್ಮ ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಗಣಕೀಕರಣ ನಮೂನೆಗಳನ್ನು ಬಿಎಲ್‌ಒಗಳಿಗೆ ನೀಡಿ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ಮನವಿ ಮಾಡಿದ್ದಾರೆ. 


ಸುದ್ದಿ ಓದಿ