ಹಾನಗಲ್ಲು-ಕುಮಾರೇಶ್ವರ ವಚನ ವೃಂದದವರಿಗೆ ಮತ ನೀಡಿ
ಬಳ್ಳಾರಿ14: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಚುನಾವಣೆಯಲ್ಲಿ ಹಾನಗಲ್ಲು ಕುಮಾರೇಶ್ವರ ವಚನ ವೃಂದದಿಂದ ಸ್ಪರ್ಧಿಸಿದ 31ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಜಿಲ್ಲಾಧ್ಯಕ್ಷ ಸ್ಥಾನದ ಸ್ಪರ್ಧಾರ್ಥಿ ಚಾನಾಳ್ ಶೇಖರ್ ಮತ ಯಾಚಿಸಿದರು.ಇಲ್ಲಿನ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರಲ್ಲಿ ಮತಯಾಚಿಸಿ ಮಾತನಾಡಿ ಸಮುದಾಯದ ಏಳಿಗೆಗಾಗಿ ಹಗಲು ಇರಳು ಶ್ರಮಿಸುತ್ತವೇ ಬಳ್ಳಾರಿಯ ಮಹಾಸಭಾವು ರಾಜ್ಯದಲ್ಲಿಯೇ ಮಾದರಿಯಾಗಿದೆ.
ವೀರಶೈವ ಲಿಂಗಾಯತ ಸಮುದಾಯದ ಏಳಿಗೆಗಾಗಿ ಶ್ರಮಿಸಲು ಅವಕಾಶ ಮಾಡಿಕೊಡಲು ಶ್ರೀಹಾನಗಲ್ಲು ಕುಮಾರೇಶ್ವರ ವಚನ ವೃಂದದ ಎಲ್ಲಾ 31ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಬೇಕು ಎಂದರು. ವೀರಶೈವ ಮುಖಂಡರಾದ ಸಣಾಪುರ ಕನಕಗಿರಿ ರೇಣುಕಪ್ಪ, ಎಚ್.ಶಶಿಧರ, ಎಂ.ವಿಜಯಲಕ್ಷ್ಮಿ, ಅರವಿ ಬಸವನಗೌಡ, ಎಸ್.ಎಂ.ನಾಗರಾಜ, ಇಟಗಿ ಬಸವರಾಜಗೌಡ, ಬಳೆ ಮಲ್ಲಿಕಾರ್ಜುನ, ಎಸ್.ಡಿ.ಬಸವರಾಜ, ಎಲಿಗಾರು ವೆಂಕಟರೆಡ್ಡಿ, ಕಲ್ಗುಡಿ ವಿಶ್ವನಾಥ, ವಾಲಿ ಕೊಟ್ರ್ಪ, ಎಚ್.ನಾಗಪರಾಜ ಇತರರಿದ್ದರು.