ಮತದಾನ ಜಾಗೃತಿ ಜಾಥಾ ಅಭಯಾನ
ಮಹಾಲಿಂಗಪುರ 06: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ, ವಿಜ್ಞಾನ ಮತ್ತು ಡಿ.ಡಿ.ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಎನ್ಎಸ್ಎಸ್ ಘಟಕದ ವತಿಯಿಂದ ಮತದಾನ ಜಾಗೃತಿ ಅಭಯಾನ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳು ನಾನಾ ಘೋಷಣೆ ಕೂಗುತ್ತ, ಘೋಷಣ ಫಲಕ ಪ್ರದರ್ಶಿಸುತ್ತ ಬಸವೇಶ್ವರ ವೃತ್ತ, ವಿದ್ಯಾನಗರ, ಬಸವನಗರ, ಮಹಾಂತೇಶ ನಗರಗಳಲ್ಲಿ ಮತದಾನ ಜಾಗೃತಿ ಮಾಡಿದರು. ರಾಜ್ಯಶಾಸ್ತ್ರದ ವಿಭಾಗದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರಪತ್ರ ನೀಡಿ ಕಡ್ಡಾಯ ಮತದಾನ ಮಾಡುವಂತೆ ಮನವಿ ಮಾಡಿದರು.
ಎನ್ ಎಸ್ ಎಸ್ ಘಟಕದ ಸ್ವಯಂಸೇವಕರು ಹಾಗೂ ರಾಜ್ಯಶಾಸ್ತ್ರ ವಿಭಾಗದ ಪ್ರಭಾರಿ ಪ್ರಾಚಾರ್ಯ ಎಂ.ಎಂ. ನಿಂಬರಗಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಯ್ ಉಗಾರೆ, ಎನ್ಎಸ್ಎಸ್ ಘಟಕದ ಅಧಿಕಾರಿಗಳಾದ ಪಿ.ಎಂ.ಗೌಳಿ, ಆರ್.ಎಸ್.ಪೂಜಾರಿ, ಟಿ.ಡಿ.ಡಂಗಿ, ಸಿ.ಎಂ.ಐಗಳಿ, ಎಸ್. ಎಸ್.ಮುಗಳ್ಯಾಳ, ಎಸ್.ಸಿ.ಬಿಜ್ಜರಗಿ, ಡಿ.ಬಿ.ಧರಿಗೌಡರ, ಆರ್.ವಿ.ಚೌಗಲಾ ಹಾಗೂ ವಿದ್ಯಾರ್ಥಿಗಳು ಇದ್ದರು.