ಕಲುಷಿತ ನೀರು ಸೇವನೆಯಿಂದ ವಾಂತಿ ಬೇಧಿ : ಶಾಸಕ ಭೀಮಾನಾಯ್ಕ್ ಭೇಟಿ
ಹಗರಿಬೊಮ್ಮನಹಳ್ಳಿ.ನ.04 : ತಾಲೂಕಿನ ಮದೂರು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ 44ಜನರಿಗೆ ವಾಚಿತಿಬೇಧಿಯಾಗಿದ್ದು ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಸ್.ಭೀಮಾನಾಯ್ಕ ಅವರು ಭೇಟಿ ನೀಡಿ ಹೊರರೋಗಿಗಳ ಆರೋಗ್ಯವನ್ನು ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವುದಾಗಿ ಹಾಗೂ ಹಳ್ಳಿಗಳಲ್ಲಿ ಡೆಂಗ್ಯು ಹಾಗೂ ಚಿಕನ್ಗುನ್ಯಗಳಂತ ರೋಗಗಳು ಹಳ್ಳಿಗಳಲ್ಲಿ ಹರಡಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕ್ಯಾಂಪ್ ಆಯೋಜಿಸುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಕಲುಷಿತ ನೀರನ್ನು ಸೇವಿಸಿ ಅನಾರೋಗ್ಯಕ್ಕೀಡಾದವರು ಗುಣಮುಖರಾಗಿದ್ದಾರೆ, ಇವರ ಪೈಕಿ ಒಬ್ಬರು ಮಾತ್ರ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ ದಶಮಾಪುರ ಮಲ್ಟಿ ವಿಲೇಜ್ ಯೋಜನೆಯಲ್ಲಿ ಮಾದೂರು ಗ್ರಾಮಕ್ಕೆ ನೀರಿನ ಸರಬರಾಜುಯಿದ್ದು ಅದನ್ನು ಬಳಕೆ ಮಾಡಿಕೊಳ್ಳುವಂತೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಬಳಸುವಂತೆ ಶಾಸಕರು ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಸೂಚಿಸಿದರು.
ಈ ವೇಳೆ ಟಿಹೆಚ್ಒ ಶಿವರಾಜ್, ಸಿಎಂಒ ತಿಪ್ಪೇಸ್ವಾಮಿ, ಮುಖಂಡರಾದ ಡಿಶ್ ಮಂಜುನಾಥ್, ಪುರಸಭೆ ಸದಸ್ಯ ಮರಿರಾಮಪ್ಪ,ಅಕ್ಕಿ ತೋಟೇಶ್, ಮದೂರು ಗ್ರಾಮದ ಮಲ್ಲಪ್ಪ, ಕುಮರಪ್ಪ, ಮಲ್ಲೂಜ್ಜಪ್ಪ, ಮಹೇಶಪ್ಪ, ಕೊಂಡಪ್ಪ ಇತರರು ಇದ್ದರು.