ಬಳ್ಳಾರಿ

ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರಿಂದ ನಾಳೆಯಿಂದ ವಿವೇಕ ತೋರಣ-ಉಪನ್ಯಾಸ ಮಾಲಿಕೆ

ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರಿಂದ ನಾಳೆಯಿಂದ ವಿವೇಕ ತೋರಣ-ಉಪನ್ಯಾಸ ಮಾಲಿಕೆ

ಲೋಕದರ್ಶನ ವರದಿ

ಬಳ್ಳಾರಿ : ಸ್ವಾಮಿ ವಿವೇಕಾನಂದ ವಿಶ್ವವನ್ನೇ ಚಕಿತಗೊಳಿಸಿದ ಮಹೋನ್ನತ ವ್ಯಕ್ತಿತ್ವ ಅವರ ಧೀರವಾಣಿ, ಧೀರೋದ್ಧಾತ್ತ ನಡೆ, ಸಾಟಿಯಿಲ್ಲದ ಸ್ವಾಭಿಮಾನ, ಅಪರಿಮಿತ ಸ್ವದೇಶಾಭಿಮಾನ, ಗುರಿ ಸೇರುವವರೆಗೂ ವಿರಮಿಸದಿರಿ ಎಂಬ ದೃಢ ವಿಶ್ವಾಸ ಇನ್ನೂ ಈ ಭೂಮಿಯನ್ನು ಜಾಗೃತಗೊಳಿಸುತ್ತಿವೆ. ನಮ್ಮೆಲ್ಲರ ಬಾಳು ಅದೇ ಘನತೆಯಿಂದ ಬೆಳಕಾಗಿ ಅಷ್ಟೇ ಸರಳತೆಯಿಂದ ಅನಂತವಾಗಲೆಂಬ ಸದಾಶಯದೊಂದಿಗೆ ಬಳ್ಳಾರಿಯಲ್ಲಿ ಒಂದು ವಿಶೇಷ ಅನುನಯದ ಕಾರ್ಯಕ್ರಮ ವಿವೇಕ ತೋರಣ-ಉಪನ್ಯಾಸ ಮಾಲಿಕೆಯನ್ನು ಆಯೋಜಿಸಲಾಗಿದೆ ಎಂದು ವಿವೇಕತೋರಣದ ಅಧ್ಯಕ್ಷರು ಡಾ. ಜಿ.ಅರ್. ವಸ್ತ್ರದ, ಸಂಯೋಜಕ ಪ್ರಭುದೇವ ಕಪ್ಪಗಲ್ಲು ಹಾಗೂ ವಿವೇಕತೋರಣ-ಉಪನ್ಯಾಸ ಮಾಲಿಕೆ, ಸ್ವಾಗತ ಸಮಿತಿಯ ಸಂಚಾಲಕರು ಸಿ.ಎರ್ರಿಸ್ವಾಮಿ ಯವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಡಿ. 8 ರಿಂದ 16ರವರೆಗೆ 9 ದಿನಗಳ ಕಾಲ ಪ್ರತಿದಿನ ಸಂಜೆ 6 ರಿಂದ 8ಗಂಟೆಯವರೆಗೆ ಸರಿಯಾಗಿ ಡಾ. ರಾಜಕುಮಾರ ರಸ್ತೆಯಲ್ಲಿರುವ ರಾಘವ ಕಲಾಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಆಶ್ರಮದ ಅಧ್ಯಕ್ಷರೂ, ಸರ್ವ ಸಮಪರ್ಿತರೂ ಹಾಗೂ ಪ್ರಖರ ವಾಗ್ಮೀಗಳೂ ಆಗಿರುವ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ಸ್ವಾಮಿ ವಿವೇಕಾನಂದ ಲೀಲಾಮೃತ ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.

ನಾಗರಿಕ ಸ್ವಾಗತ ಸಮಿತಿ 

ಉಪನ್ಯಾಸ ಮಾಲಿಕೆಯ ಯಶಸ್ಸಿಗಾಗಿ ನಗರದ ಯುವ ಉತ್ಸಾಹಿ ಲೆಕ್ಕಪರಿಶೋಧಕ ಸಿ.ಎರ್ರಿಸ್ವಾಮಿ ಯವರ ಸಂಚಾಲಕತ್ವದಲ್ಲಿ ನಗರದ ಗಣ್ಯರ ಸ್ವಾಗತ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸ್ವಾಗತ ಸಮಿತಿಯಲ್ಲಿ ಪಲ್ಲೇದ ಹಿರಿಯ ಮುಖಂಡರಾದ ಪಂಪಾಪತಿ, ಹಿರಿಯ ದಂತ ವೈದ್ಯ ಡಾ. ಶೇಷಗಿರಿರಾವ್, ತೆರಿಗೆ ಸಲಹೆಗಾರರಾದ ಎನ್.ಯಶವಂತರಾಜ್, ಭರತಕುಮಾರ್, ಡಾ. ಚಂದ್ರಶೇಖರ ಪಾಟೀಲ್ ವೈದ್ಯ ಡಾ. ಅರುಣಾ ಕಾಮಿನೇನಿ, ವಕೀಲ ಕೆ.ಆರ್. ವಿಜಯಲಕ್ಷ್ಮಿ, ಉದ್ಯಮಿಗಳಾದ ಪೋಲಾ ಸುಜಾತ, ರಾಜೇಶ ಬಾಬು, ಬಳ್ಳಾರಿ ರಾಮಕೃಷ್ಣ  ವಿವೇಕಾನಂದ ಕೇಂದ್ರ ಅಧ್ಯಕ್ಷಶ್ರೀಧರ ಬೋನಗೇರಿ, ಬಳ್ಳಾರಿ ಎಸ್.ಜಿ.ಟಿ. ಶಿಕ್ಷಣ ಸಂಸ್ಥೆ ಕಾರ್ಯದಶರ್ಿ ಜಿ.ನಾಗರಾಜ, ಕುಡುತಿನಿ. ವ್ಯಾಪಾರಿ ಹೆಚ್.ಎಂ.ಮಲ್ಲಿಕಾಜರ್ುನಸ್ವಾಮಿ, ಡ್ರೀಮ್ವಲ್ಡರ್್ ಶಾಲೆ , ಅಧ್ಯಕ್ಷ ಅನಿಲ ಬಾಬು, ಲೆಕ್ಕಪರಿಶೋಧಕರಾದ ಕೆ.ರಾಜಶೇಖರ, ಕೆ.ಹೊನ್ನೂರುಸ್ವಾಮಿ, ರಾಮದೂತ್ ಕಂಪ್ಯೂಟರ್ಸ್ ಕೆ.ಎಸ್.ಬಾಬು, ಬಿ.ಐ.ಟಿ.ಎಂ. ಉಪನಿದರ್ೆಶಕ ಪೃಥ್ವಿರಾಜ ಭೂಪಾಲ, ಲೆಕ್ಕ ಪರಿಶೋಧಕರಾದ ರಾಜೇಶ ಬಾಗ್ರೇಚ, ಸಿದ್ಧರಾಮೇಶ್ವರಗೌಡ, ಪುರುಷೋತ್ತಮರೆಡ್ಡಿ, ಲೆಕ್ಕ ಪರಿಶೋಧಕರು, ತಾರನಾಥ ಆಯುವರ್ೆದ ಕಾಲೇಜು, ಪ್ರಾಧ್ಯಾಪಕ ಡಾ. ರಾಜೇಶ್ ಇವರೆಲ್ಲರೂ ಸದಸ್ಯರಾಗಿದ್ದು ಕಾರ್ಯಕ್ರಮದ ಪೂರ್ವ ಸಿದ್ಧತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ.

ಭಕ್ತಿ ಸಂಗೀತ ಕಾರ್ಯಕ್ರಮ :

ಪ್ರತಿ ದಿನ ಸಂಜೆ ಉಪನ್ಯಾಸದ ಆರಂಭದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನಗರದ ಖ್ಯಾತ ಗಾಯಕರು, ಸಂಗೀತ ಕಲಾವಿದರುಗಳಾದ ಸುಮೇದಾನಂದ ಜಿ ಮಹಾರಾಜ, ಹೊಸಪೇಟೆ, ದೊಡ್ಡಬಸವ ಗವಾಯಿಗಳು, ಸಂಗೀತ ಶಿಕ್ಷಕರು, ಚೇಳ್ಳಗುರ್ಕಿ .  ಸಂಧ್ಯಾ ಕೋಲಾಚಲಂ, ಸುಗಮ ಸಂಗೀತ ಗಾಯಕರು, ಬಳ್ಳಾರಿ. ರಾಘವೇಂದ್ರ ಗುಡದೂರು, ಶಾಸ್ತ್ರೀಯ ಸಂಗೀತ ಗಾಯಕರು, ಬಳ್ಳಾರಿ, ಪದ್ಮಾವತಿ, ಸುಗಮ ಸಂಗೀತ ಗಾಯಕರು, ಬಳ್ಳಾರಿ. ವಿನಯಸ್ವಾಮಿ, ಭಕ್ತಿ ಸಂಗೀತ ಗಾಯಕರು, ಬಳ್ಳಾರಿ. ಕೆ.ವಸಂತಕುಮಾರ, ಸಂಗೀತ ಶಿಕ್ಷಕರು, ಬಳ್ಳಾರಿ. ವೈ.ಎನ್.ಮಾಧವಿ ಹಾಗೂ ವೈ.ಎನ್. ಶ್ವೇತಾ, ಸಂಗೀತ ಶಿಕ್ಷಕರು, ತೋರಣಗಲ್ಲು, ಕಾಸಿಂಸಾಬ್ ಹಾಗೂ ವಿಜಯೇಂದ್ರ ಇವರುಗಳು ಭಕ್ತಿ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದು, ಇವರಿಗೆ ಹೆಚ್.ತಿಪ್ಪೇಸ್ವಾಮಿ ಕ್ಯಾಷಿಯೋದಲ್ಲಿ, ರಾಘವೇಂದ್ರ ಗುಡದೂರು ಹಾಮರ್ೊನಿಯಂನಲ್ಲಿ ಹಾಗೂ ವಿರೂಪಾಕ್ಷ ದೇವಲಾಪುರ, ಹರ್ಷ ಆಚಾರ ರವರು ತಬಲದಲ್ಲಿ ಸಾತ್ ನೀಡಲಿದ್ದಾರೆ.

ಸ್ವಾಮಿ ನಿರ್ಭಯಾನಂದ ಸರಸ್ವತಿಯವರು 8 ವರ್ಷಗಳ ನಂತರ ಬಳ್ಳಾರಿಗೆ ಪುನಃ ಆಗಮಿಸುತ್ತಿದ್ದು, ಬಳ್ಳಾರಿಯ ನಾಗರಿಕರು, ಯುವ ಜನತೆ, ವಿದ್ಯಾಥರ್ಿ-ವಿದ್ಯಾಥರ್ಿನಿಯರು ಈ ಕಾರ್ಯಕ್ರಮದ ಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದು ವಿನಂತಿಸಿದ್ದಾರೆ. 

ಪತ್ರಿಕಾಗೋಷ್ಟಿಯಲ್ಲಿ ವಿವೇಕತೋರಣ-ಉಪನ್ಯಾಸ ಮಾಲಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ