ಬಸವೇಶ್ವರ ದೇವಸ್ಥಾನಕ್ಕೆ ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ) ಭೇಟಿ
ಮುದ್ದೇಬಿಹಾಳ 19:ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ) ಅವರ ಭಾನುವಾರ ಭೇಟಿ ನೀಡಿ ದರ್ಶನಾಶಿರ್ವಾದ ಪಡೆದು ಜಾತ್ರಾ ಮಹೋತ್ಸವದ ಅಂಗವಾಗಿ ಕೋಪ್ಪಳದಲ್ಲಿ ನಿರ್ಮಿತಗೊಂಡ ನೂತನ ರಥವನ್ನುವನ್ನು ಪರೀಶಿಲಿಸಿದರು.
ಬಸವೇಶ್ವರ ಜಾತ್ರಾ ಮಹೋತ್ಸವ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುಳ್ಳಳ್ಳಿ, ಉಪಾಧ್ಯಕ್ಷ ಆನಂದ ಗಸ್ತೆಗಾರ, ಸಂಗನಗೌಡ ಪಾಟೀಲ, ನಾಗಲಿಂಗತ್ಯಾಮಠ, ಮುದುಕಪ್ಪ ಬಾಗೇವಾಡಿ, ಯಲ್ಲಪ್ಪ ಗಸ್ತಿಗಾರ, ಬಿ.ಟಿ ಬಿರಾದಾರ, ಸಂಗಯ್ಯಾ ಮಠ, ಬಿ ಎಸ್ ಹೂಗಾರ, ಮಲ್ಲಿಕಾರ್ಜುನ ಹುಲಬೆಂಚಿ, ಸಿದ್ದು ಕೋಲಕಾರ, ಬಸಲಿಂಗಪ್ಪಗೌಡ ಬಿರಾದಾರ, ಅಶೊಕ ಕಾಟಿ, ಬಸನಗೌಡ ಬಿರಾದಾರ ಸೇರಿದಂತೆ ಹಲವರು ಇದ್ದರು.