ಮಹಲಿಂಗಪುರ

ತೋಟಗಾರಿಕೆ ವಿವಿ ಅಧಿಕಾರಿಗಳ ಭೇಟಿ

ತೋಟಗಾರಿಕೆ ವಿವಿ ಅಧಿಕಾರಿಗಳ ಭೇಟಿ


ಮಹಾಲಿಂಗಪುರ21:  ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಧಿಕಾರಿಗಳು ಪಟ್ಟಣದ ರನ್ನಬೆಳಗಲಿ ರಸ್ತೆಯಲ್ಲಿರುವ ರೋಹಿಣಿ ಸಮೂಹ ಸಂಸ್ಥೆಯ ವಿವಿಧ ವಿಭಾಗಗಳಿಗೆ ಮಂಗಳವಾರ ಭೇಟಿ ನೀಡಿ ಇದರ ಕಾರ್ಯಕ್ಷಮತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಇಂದಿರೇಶ ಕೆ.ಎಂ., ಸಂಶೋಧನಾ ನಿರ್ದೇಶಕ ಡಾ.ಮಹೇಶ್ವರ​‍್ಪ ಎಚ್‌.ಪಿ., ವಿಸ್ತರಣಾ ನಿರ್ದೇಶಕ ಡಾ.ಎಸ್‌.ಐ.ಅಥಣಿ ಈ ತಂಡದಲ್ಲಿದ್ದರು. 

 ಸಂಸ್ಥೆಯಲ್ಲಿನ ಟಿಶ್ಯುಕಲ್ಚರ್ ಸಸಿಗಳ ಉತ್ಪಾದನೆ, ಉಪಯೋಗ, ಮಣ್ಣು ಮತ್ತು ನೀರು ಪರೀಕ್ಷಾ ವಿಧಾನ ಸೇರಿದಂತೆ ಹಲವು ಮಾಹಿತಿಗಳನ್ನು ತಿಳಿದು, ಡೇರಿಗೂ ಭೇಟಿ ನೀಡಿ ಅಲ್ಲಿನ ಪಂಡರಪುರ, ಮರಾ​‍್ರ ಎಮ್ಮೆ, ದೇಶಿ ಖಿಲಾರಿ, ಶಾಹಿವಾಲ್ ಆಕಳು ಸಾಕಣೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ಸಂದರ್ಭದಲ್ಲಿ ಉಪಕುಲಪತಿ ಡಾ.ಇಂದಿರೇಶ ಕೆ.ಎಂ. ಮಾತನಾಡಿ, ರೈತರಿಗೆ ರೋಹಿಣಿ ಸಮೂಹ ಸಂಸ್ಥೆ ಬಹು ಉಪಯುಕ್ತವಾಗಿದೆ. ಕೃಷಿ ಕ್ಷೇತ್ರದಲ್ಲಿರುವ ಅನುಭವವನ್ನು ರೈತರಿಗಾಗಿ ಧಾರೆ ಎರೆಯುತ್ತಿದೆ. ಅಂಗಾಂಶ ಕೃಷಿ ಬಾಳೆ, ಕಬ್ಬು ತಳಿ ಅಭಿವೃದ್ಧಿ ಪಡಿಸುತ್ತಿದೆ. ಲಘು ಪೋಷಕಾಂಶಗಳನ್ನು ನೀಗಿಸಲು ಪ್ರಾಯೋಗಿಕ ಉತ್ಪಾದನೆ ಮಾಡಿದ್ದು, ಅಪಾರ ಬೇಡಿಕೆ ಇದೆ ಮತ್ತು ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳನ್ನು ಉತ್ಪಾದಿಸಿ ರೈತರಿಗೆ ತಲುಪಿಸುತ್ತಿದೆ ಎಂದರು. 

 ಇವರ ರಾಜಿ ಇಲ್ಲದ ಗುಣಮಟ್ಟದ ಉತ್ಪಾದನೆಗೆ ರೈತರಿಂದ ಹೇರಳ ಬೇಡಿಕೆ ಇದ್ದು, ರಾಜ್ಯಾದ್ಯಂತ ಮಾರುಕಟ್ಟೆಗಳನ್ನು ಹೊಂದಿ ರೋಹಿಣಿ ಸಮೂಹ ಸಂಸ್ಥೆ ರೈತರ ಜೀವನಾಡಿಯಾಗಿದೆ. ಇದರ ಜತೆಗೆ ವಿವಿಧ ಎಮ್ಮೆ ತಳಿಗಳೊಂದಿಗೆ ಡೇರಿ ನಿರ್ವಹಿಸುತ್ತಿರುವುದು ಶ್ಲಾಘನೀಯ. ಅಲ್ಲದೆ, ಸಾವಯವ ಗೊಬ್ಬರ ತಯಾರಿಸಿ ರೈತರಿಗೆ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು. 

ಸಂಸ್ಥೆಯ ಸಂಸ್ಥಾಪಕ ಡಾ.ಎಂ.ವೈ.ಕಟ್ಟಿ, ಪ್ರವೀಣ ಕಟ್ಟಿ, ವಿನೋದ ಕಟ್ಟಿ, ಚನ್ನಯ್ಯ ಮಸಗುಪ್ಪಿಮಠ, ಅರವಿಂದ ನೀಲಾರ, ಸಂಜಯ ಯಲಶೆಟ್ಟಿ, ಪ್ರಶಾಂತ ನಾಯಕ ಇದ್ದರು. 


ಸುದ್ದಿ ಓದಿ