ಮಹಲಿಂಗಪುರ

ವಿಶಾಲಕುಮಾರ ಹೊಸಮನಿ ಐ ಎಫ್ ಎಸ್ ನಲ್ಲಿ ದೇಶಕ್ಕೆ 122 ನೇ ರಾ​‍್ಯಂಕ್,

ವಿಶಾಲಕುಮಾರ ಹೊಸಮನಿ ಐ ಎಫ್ ಎಸ್ ನಲ್ಲಿ ದೇಶಕ್ಕೆ 122 ನೇ ರಾ​‍್ಯಂಕ್,

ರಾಜ್ಯದ 10 ಜನ ಆಯ್ಕೆ, ಶಿಕ್ಷಕಿಯ ಮಗನ ಸಾಧನೆಗೆ ಪ್ರಶಂಸೆ. 

ಮಹಾಲಿಂಗಪುರ : ಕೇಂದ್ರ ಲೋಕ ಸೇವಾ ಆಯೋಗ ಕಳೆದ ನವೆಂಬರ್ ನಲ್ಲಿ ನಡೆಸಿದ ಭಾರತೀಯ ಅರಣ್ಯ ಸೇವಾ ಪರೀಕ್ಷೇಯಲ್ಲಿ ಸ್ಥಳೀಯ ವಿಶಾಲಕುಮಾರ ಸುರೇಶಹೊಸಮನಿ ಇವರು ದೇಶಕ್ಕೆ 122 ರಾ​‍್ಯಂಕ್ ಪಡೆದು ಆಯ್ಕೆಯಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.                                                                                                                                                                                                                                                                          ಭಾರತೀಯ ಅರಣ್ಯ ಸೇವೆ ಪರೀಕ್ಷೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು ರಾಜ್ಯದ 10 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ, 150 ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ದೇಶದ ವಿವಿಧ ರಾಜ್ಯಗಳ 147 ಆಯ್ಕೆಯಾಗಿದ್ದು ಅವರಲ್ಲಿ ಸ್ಥಳೀಯ ವಿಶಾಲಕುಮಾರ ಒಬ್ಬರಾಗಿದ್ದು ಸಮೀಪದ ಚಿಮ್ಮಡ ಗ್ರಾಮ ಸ. ಹಿ. ಪ್ರಾ. ಶಾಲೆಯಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಣ,ವಿಜಯಪುರದ ಸೈನಿಕ ಶಾಲೆಯಲ್ಲಿ 6 ರಿಂದ 12 ತರಗತಿವರೆಗೆ, ವಿಜಯಪುರ ಕೃಷಿ ಕಾಲೇಜಿನಲ್ಲಿ  ಬಿಎಸ್ಸಿ ಕೃಷಿ ಪದವಿ, ದೆಹಲಿಯ ಐಎಆರ್ ಐ ಕಾಲೇಜಿನಲ್ಲಿ ಎಮ್ ಎಸ್ ಸಿ ಪದವಿ ಮುಗಿಸಿ ಅದೇ ಕಾಲೇಜಿನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಲೇ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. 

ಹೆಸ್ಕಾಂನ ನಿವೃತ್ತ ನೌಕರ ಸುರೇಶ  ಹೊಸಮನಿ ಹಾಗೂ ಸ್ಥಳೀಯ ಸ.ಮಾ.ಹಿ.ಪ್ರಾ. ಶಾಲೆಯ ಮುಕಖ್ಯಶಿಕ್ಷಕಿ ಮಾಲಾ ಹೊಸಮನಿ ದಂಪತಿಗಳ ಪುತ್ರನ ಈ ಸಾಧನೆಯನ್ನು  ಪುರಸಭಾ ಮಾಜಿ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ಸದಸ್ಯ ಚನ್ನಬಸು ಯರಗಟ್ಟಿ, ಆರ್‌ಟಿಓ ಅಧಿಕಾರಿ ವಿರೂಪಾಕ್ಷ ಆನೆಪ್ಪಗೋಳ ಮತ್ತು ಶಿಕ್ಷಕ ವೃಂದ ಹಾಗೂ ಬಂಧು ಬಳಗ, ಹಿರಿಯರು ಅಭಿನಂದಿಸಿದ್ದಾರೆ. 

ನನಗೆ ಶಿಕ್ಷಣ ನೀಡಿ,ಮಾರ್ಗದರ್ಶನ ಮಾಡಿದ ಗುರುವೃಂದ, ಹೆತ್ತವರು ಹಾಗೂ ಬಂಧು ಬಳಗದವರ ಮಾರ್ಗದರ್ಶನ ಮತ್ತ ಪ್ರೋತ್ಸಾಹ ಸಾಧನೆಗೆ  ಪ್ರೇರಣೆಯಾಯಿತು : ವಿಶಾಲಕುಮಾರ, ಸಾಧಕ. 


ಸುದ್ದಿ ಓದಿ