ಮಹಲಿಂಗಪುರ

ವಚನಗಳ ರಕ್ಷಕ ವೀರ ಮಡಿವಾಳ ಮಾಚಿದೇವ : ಶೇಖರ ಅಂಗಡಿ

ವಚನಗಳ ರಕ್ಷಕ ವೀರ ಮಡಿವಾಳ ಮಾಚಿದೇವ : ಶೇಖರ ಅಂಗಡಿ

ಮಹಾಲಿಂಗಪುರ 02 : 12 ನೇ ಶತಮಾನದ ಬಸವಣ್ಣನವರ ಅನುಯಾಯಿ ಆಗಿದ ಶರಣ ಮಾಚಿದೇವ,ವೀರಭದ್ರರ ದೈವಾಂಶ ಸಂಭೂತ ಅವತಾರಿ ಪುರುಷನೆಂದು ಸಾಮಾನ್ಯ ರೂಢಿಯಾಗಿದೆ.ಅವರು ವೀರರಾಗಿದ್ದು ವಚನಗಳನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗಿಗೆ ಕೊಡುಗೆಯಾಗಿ ನೀಡಿದರು ಎಂದು ಪುರಸಭೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಶೇಖರ ಅಂಗಡಿ ಹೇಳಿದರು. 

 ಪುರಸಭೆಯಲ್ಲಿ ಜರುಗಿದ ಮಡಿವಾಳ ಮಾಚಿದೇವರ 904 ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜ್ಯ ಸಲ್ಲಿಸಿ ಮಾತನಾಡಿ ಅರಸ ಮೇಲಲ್ಲ ಅಗಸ ಕೀಳಲ್ಲ ಎನ್ನುವ ಸಮದ್ರಷ್ಟಿಯಿಂದ ಎಲ್ಲರೂ ಒಂದೇ ಮನುಷ್ಯರೂ ಎನ್ನುವ ದೇಯ ಉದ್ದೇಶ ಹೊಂದಿದ ಮಡಿವಾಳ ಮಾಚಿದೇವ ಶರಣರ ಪರಂಪರೆಯಲ್ಲಿ ವೀರ ಶೂರ, ಪ್ರಕಾಶ ಮಾನವಾಗಿ ಕಂಡು ಬಂದವರು. ಮಲ್ಲಿಕಾರ್ಜುನಯ್ಯಾ ಸ್ವಾಮಿಗಳ ಶಿಷ್ಯನಾಗಿ ಅಪಾರ ಜ್ಞಾನ, ಮತ್ತು ಶಿಕ್ಷಣ ಪಡೆದುಕೊಂಡಿದ್ದರು. ಬಿಜ್ಜಳನ ರಾಜ್ಯದಲ್ಲಿ ಕ್ರಾಂತಿ ಸಂಭವಿಸಿದಾಗ ಮಡಿವಾಳ ಮಾಚಿದೇವ ಬಸವಣ್ಣನವರ ವಚನಗಳನ್ನು ರಕ್ಷಣೆ ಮಾಡುವ ಸಂಪೂರ್ಣ ಹೊಣೆಯನ್ನು ಇವರೇ ವಹಿಸಿಕೊಂಡಿದ್ದರು. ಶರಣರಾದ ಚನ್ನಬಸವಣ್ಣ, ಅಕ್ಕನಾಗಮ್ಮ, ಕಿನ್ನರಿ ಬೊಮ್ಮಣ್ಣ,  ಅವರನ್ನು ರಕ್ಷಿಸಿ ಕಲಚುರ್ಯರಾಯ ಮುರಾರಿಯನ್ನು ಭೀಮಾ ನದಿಯನ್ನು ದಾಟಿ ತಲ್ಲೂರ ಮುರಗೋಡ, ಕಡಕೋಳ, ತಡಕೋಡ, ಮುಗಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ಮಾಡಿ ತಮ್ಮ ಧೈರ್ಯ ಅನುಪಮ ಸಾಹಸ ಬಲದಿಂದ ಶರಣರನ್ನು ವಚನ ಸಾಹಿತ್ಯವನ್ನು ರಕ್ಷಿಸಿ ಉಳುವಿಗೆ ತಲುಪಿಸಿದ ಸಾಹಸೀ ಮಾಚಯ್ಯ ಎಂದರು. 

ಪ್ರಸ್ತಾವಿಕವಾಗಿ ಮಾತನಾಡಿದ ಪುರಸಭೆ ಮ್ಯಾನೇಜರ ಎಸ್ ಏನ್ ಪಾಟೀಲ ಮಾಚಿದೇವ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ 1120  ರಲ್ಲಿ ಪರುವತಯ್ಯ ಸುಜ್ಞಾನವ್ವಾ ಪವಿತ್ರ ಉದರದಲ್ಲಿ ಜನಿಸಿದರು, ಅನೇಕ ವಚನಗಳನ್ನು ರಚಿಸಿದರು, ಬಸವಣ್ಣನವರ ವಚನಗಳನ್ನು ರಕ್ಷಿಸಿದರು, ಉಳುವಿಯ ಚನ್ನಬಸವಣ್ಣಲ್ಲಿ ಐಕೆ ಆಗಲು ಬಯಸಿದರು ಆದರೆ ಸಾಧ್ಯವಾಗಲಿಲ್ಲ, ಸಿಂದಗಿ ತಾಲೂಕಿನ ಕಲೀಪುರ ಇಂದಿನ ಕಲಕೇರಿಯಲ್ಲಿ ತಮ್ಮ ಗುರುಗಳಾದ ವೀರಘಂಟೆಯ್ಯರ ಜೊತೆಗೆ ಜೀವಂತ ಸಮಾದಿಯಾಗಿ ಗುರು ಶಿಷ್ಯರು ಐಕ್ಯರಾದರು ಇಂದಿಗೂ ಪ್ರತಿ ವರ್ಷ ಹೊಸ್ತಿಲ ಹುಣಿಮೆಯ ದಿನ ಮೂಲಾ ನಕ್ಷತ್ರದ ಸಮಯದಲ್ಲಿ ರಥೋತ್ಸವ ನಡೆವುತ್ತದೆ ಒಂದು ತಿಂಗಳು ಜಾತ್ರೆ ನಡೆಯುತ್ತದೆ. ಇವರ ಜಯಂತಿಯನ್ನು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ​‍್ರದೇಶ, ತಮಿಳುನಾಡುಗಳಲ್ಲಿ ಹೆಚ್ಚಾಗಿ ಆಚರಿಸುತ್ತಾರೆ ಎಂದು ಹೇಳಿದರು. 

ಸಮಾಜದ ಮುಖಂಡರಾದ ರಮೇಶ ಮಡಿವಾಳ,ಬಸಪ್ಪ ಪರೀಟ, ಮಲ್ಲಪ್ಪ ಕ ಪರೀಟ, ಕಾಂತು ಪರೀಟ, ಚನ್ನಪ್ಪ ಪರೀಟ, ಸಿದ್ದಲಿಂಗ ಪರೀಟ, ಮಲ್ಲಪ್ಪ ಯ ಪರೀಟ, ನಾಗಪ್ಪ ಕಳ್ಳಿ ರಾಮಚಂದ್ರ ಪಾತ್ರೋಟ, ಶಿವಾನಂದ ಹುನಶ್ಯಾಳ, ಗ್ರಂಥಾಲಯ ಪಾಲಕರಾದ ಪಾಟೀಲ, ನಿಜಗುಣಿ ಕೊಣ್ಣೂರ, ಬಸರಾಜ ಹಡಪದ, ದುಂಡಪ್ಪ ಮಡಿವಾಳ, ಶಿವಾನಂದ ಜಿಡ್ಡಿಮನಿ, ಗೋಕಾವಿ ಸರ್, ನಂದಗಾಂವದ ಕಲ್ಲು ಪರೀಟ, ಶೇಖರ್ ಪರೀಟ, ಪಾಂಡು ಪರೀಟ ಯಾದವಾಡ ಸರ್ ಪ್ರಶಾಂತ್ ಮುಕೇಣ್ಣವರ, ಶಿವಾಜಿ ಅಂಕುಶಿ, ಚನ್ನಪ್ಪ ಸೇರಿದಂತೆ ಹಲವರು ಇದ್ದರು ಕಾರ್ಯಕ್ರಮವನ್ನು ರವಿ ಹಲಸಪ್ಪಗೋಳ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ