ದಲಿತರ ಮೇಲಿನ ದೌರ್ಜನ್ಯ ಸಹಿಸಲಾಗದು: ಸುರೇಶ ತಳವಾರ
ಹುಕ್ಕೇರಿ ಜುಲೈ ೧೪: ಮಹಾರಾಷ್ಟ್ರದ ಮುಂಬೈನ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ಮನೆಯ ಮೇಲೆ ಕಲ್ಲು ತುರಾಟ ನಡೆದ ಘಟನೆಯನ್ನು ಖಂಡಿಸಿ ಹಾಗೂ ಮೂಲ ಅಶಪೃಷ್ಯ ಜಾತಿಯಿಂದ ಬೇರೆ ಜಾತಿಯನ್ನು ಬೇರಪಡಿಸುವಂತೆ ಆಗ್ರಹಿಸಿ ಹುಕ್ಕೇರಿ ತಾಲೂಕಿನ ಅಹಿಂದ ಬ್ರಿಗೇಡ್ ಮತ್ತು ವಿವಿಧ ದಲಿತ ಪರ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟಣೆ ಜರುಗಿತು.
ಬೆಳಗಾವಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜಾಗ್ರತ ಸಮಿತಿ ಸದಸ್ಯ ಸುರೆಶ ತಳವಾರ ನೇತೃತ್ವದಲ್ಲಿ ಅಹಿಂದ್ ಬ್ರಿಗೇಡ್ ಮತ್ತು ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಕೋರ್ಟ ಸರ್ಕಲ್ ಮುಖಾಂತರ ಮಿನಿ ವಿಧಾನ ಸೌಧಕ್ಕೆ ತೇರಳಿ ಮಹಾರಾಷ್ಟ್ರದ ಮುಂಬೈನಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ ರವರ ರಾಜ ಗೃಹದ ಮೇಲೆ ಕಲ್ಲು ತೂರಾಟ ಮಾಡಿದ ಪ್ರಕರಣ ಖಂಡಿಸಿದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಸುರೇಶ ತಳವಾರ ಡಾ.ಬಾಬಾ ಸಾಹೇಬ ಅಂಬೇಡ್ಕರ ಇಡೀ ಪ್ರಪಂಚಕ್ಕೆ ಮಾದರಿಯಾಗುವಂತಹ ಸಂವಿಧಾನವನ್ನು ಕೊಟ್ಟು, ನಮ್ಮ ದೇಶದ ಕಾನೂನುವನ್ನು ಎತ್ತಿ ಹಿಡಿದವರು. ಇಂತಹ ಮಹಾನ್ ವ್ಯಕ್ತಿಯ ಮನೇಯ ಮೇಲೆ ಕಲ್ಲು ತೂರಾಟ ಖಂಡನಿಯವಾಗಿದೆ. ಇಂತಹ ಕೀಡಕೇಡಿಗಳ ವಿರುದ್ಧ ಕಠೀಣ ಕಾನೂನು ಶಿಕ್ಷೆಗೆ ಒಳಪಡಿಸಬೇಕು ಮತ್ತು ಆ ಮನೆಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಮೂಲ ಅಷಪೃಷ್ಯ ಜಾತಿಯಿಂದ ಇನದನೂಳಿದ ಜಾತಿಗಳನ್ನು ಬೇರ್ಪಡಿಸಿ ಅವರಿಗೂ ಸಹ ಮಿಸಲಾತಿ ಕಲ್ಪಿಸುವಂತೆ ಆಗ್ರಹಿಸಲಾಗಿದೆ ಎಂದರು ( )
ದಲಿತ ಮುಖಂಡರಾದ ಉದಯ ಹುಕ್ಕೇರಿ ಮಾತನಾಡಿ ಇಂತಹ ಹೀನ ಕೃತ್ಯ ಹಿಂದೆ ಯಾರ ಕೈವಾಡಯಿದೆ, ಅಂತಹವರನ್ನು ಪತ್ತೆ ಹಚ್ಚಿ ಅವರ ವಿರುದ್ಧವೂ ಗರಿಷ್ಠ ಕಾನೂನ ಕ್ರಮ ವಿಧಿಸಬೇಕು.ಇದು ಪ್ರಜಾಪ್ರಬಹುತ್ವ ದೇಶಕ್ಕೆ ಅವಮಾನವಾಗಿದೆ. ಇಂತಹ ದೇಶದ್ರೋಹಿಗಳನ್ನು ಸೆರೆಹಿಡಿದು, ದೇಶದ್ರೋಹ ಶಿಕ್ಷೆಗೆ ಒಳಪಡಿಸಬೇಕು. ರಾಜಗೃಹಕ್ಕೆ ಹಾಗೂ ಅಲ್ಲಿ ವಾಸಿಸುತ್ತಿರುವ ಡಾ. ಬಾಬಾಸಾಹೇಬ ಅಂಬೇಡ್ಕರರ ವಾರಸದಾರರಿಗೆ ಇನ್ಮೂಂದೆ ಸಂರಕ್ಷಣೆ ನೀಡಬೇಕೆಂದು ತಹಸೀಲ್ದಾರರಿಗೆ ಮನವಿ ಅರ್ಪಿಸಿದರು.
ಮನವಿ ಸ್ವೀಕರಿಸಿದ ಗ್ರೇಡ್ 2 ತಹಸೀಲ್ದಾರ ಕೀರಣ ಬೆಳವಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲ ಹಾಗೂ ರಾಷ್ಟ್ರಪತಿಗಳಿಗೆ ನಿಮ್ಮ ಬೇಡಿಕೆ ರವಾನಿಸಲಾಗುವದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉದಯಕುಮಾರ ಹುಕ್ಕೇರಿ, ರಮೇಶ ಹುಂಜಿ,ಸದಾನಂದ ಕಾಂಬಳೆ ,ಕಲ್ಲಪ್ಪಾ ಕಟ್ಟಿ,ಮಾರುತಿ ತಳವಾರ ,ದೀಪಕ ವೀರಮುಖ, ಮಹೇಶ ಹಟ್ಟಿಹೋಳಿ,ಪ್ರಮೋದ ಹೋಸಮನಿ,ಬಾಬು ಬೂಸಗೋಳ,ಬಾಳಾಸಾಹೇಬ ಕೋಳಿ,ಸದಾನಂದ ಗುಡಿಕಡೆ,ಕುಮಾರ ತಳವಾರ,ಜಗದೀಶ ಕಾಮತ ಮೊದಲಾದವರು ಉಪಸ್ಥಿತರಿದ್ದರು.