ಬಳ್ಳಾರಿ

ಕೋಟ್ಪಾ ಕಾಯ್ದೆ ಉಲ್ಲಂಘನೆ: 05ಪ್ರಕರಣಗಳು ದಾಖಲು

ಕೋಟ್ಪಾ ಕಾಯ್ದೆ ಉಲ್ಲಂಘನೆ: 05ಪ್ರಕರಣಗಳು ದಾಖಲು


ಬಳ್ಳಾರಿ(ಸಿರಗುಪ್ಪ) 30: ಕಾರ್ಮಿಕ ಇಲಾಖೆ, ನಗರಸಭೆ, ತಾಲೂಕು ಆಡಳಿತ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಅಧಿಕಾರಿಗಳು ಸಿರಗುಪ್ಪ ಪಟ್ಟಣದ ವಿವಿಧ ವಾಣಿಜ್ಯ ಮಳಿಗೆಗಳಿ(ಅಂಗಡಿ)ಗೆ ಮಂಗಳವಾರ ತೆರಳಿ ಕರ್ನಾಟಕ ಅಂಗಡಿ ಮತ್ತು ವಾಣಿಜ್ಶ ಸಂಸ್ಥೆಗಳ ಕಾಯ್ಥೆ 1961 ಮತ್ತು ನಿಯಮಗಳು 1963 ರಡಿ ಅಂಗಡಿ/ವಾಣಿಜ್ಯ ಸಂಸ್ಥೆಗಳ ನೋಂದಣಿ ಹಾಗೂ ನವೀಕರಣ ಮಾಡಿಸಿರುವ ಬಗ್ಗೆ ಪರೀಶೀಲಿಸಿದರು. 

ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ರ ಅಡಿಯಲ್ಲಿ ಉಲ್ಲಂಘನೆ ಮಾಡಿದ ಅಂಗಡಿ ್ಘ ಉದ್ದಿಮೆಗಳನ್ನು ಪರೀಶೀಲನೆ ನಡೆಸಿದರು ಮತ್ತು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. 

ಕೋಟ್ಟಾಕಾಯ್ದೆ 2003 ರ ಸೆಕ್ಷನ್ -4ರ ಉಲ್ಲಂಘನೆಯ ಅಡಿಯಲ್ಲಿ ವಿವಿಧ ಅಂಗಡಿಗಳಲ್ಲಿ ಪರೀಶೀಲನೆ ನಡೆಸಿ 5 ಪ್ರಕರಣ ದಾಖಲಿಸಿ ದಂಡ ವಿಧಿಸಲಾಯಿತು ಮತ್ತು ಮಾಲೀಕರಿಗೆ ಕರಪತ್ರಗಳನ್ನು ಮತ್ತು ಸ್ಟೀಕರ್ಸ ಅಂಟಿಸುವ ಮೂಲಕ ಅರಿವು ಮತ್ತು ಜಾಗೃತಿ ಮೂಡಿಸಲಾಯಿತು. 


ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಮತ್ತು ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆಯ ಕುರಿತು ಜಾಗೃತಿ ಮೂಡಿಸಲಾಯಿತು. 

ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ನೀರೀಕ್ಷಕರಾದ ಸಿ.ಎನ್‌.ರಾಜೇಶ್, ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಬಳ್ಳಾರಿ ಕ್ಷೇತ್ರಾಧಿಕಾರಿಗಳಾದ ಪಿ.ಎಂ.ಈಶ್ವರಯ್ಯ, ತಾಲೂಕು ಕಛೇರಿಯ ಪ್ರಥಮ ದರ್ಜೆ ಸಹಾಯಕರಾದ ಪ್ರಸನ್ನಕುಮಾರ, ನಗರಸಭೆ ಸಿಬ್ಬಂದಿ ಮತ್ತು ಮಕ್ಕಳ ಸಹಾಯವಾಣಿ 1098 ಸಿಬ್ಬಂದಿಗಳಾದ ಅರುಣ ಮತ್ತು ಸಜನಿ ಇದ್ದರು. 


ಸುದ್ದಿ ಓದಿ