ಬಳ್ಳಾರಿ

ಜಾನಕಿ ಕಾರ್ಪ್ ಇಂಡಸ್ಟ್ರೀಸ್ ನಿಂದ ಹಳ್ಳಿಗಳು ಮೂಲಭೂತ ಸೌಕರ್ಯಗಳು ಒದಗಿಸಿದೆ : ಅಂಬರೀಷ್

ಜಾನಕಿ ಕಾರ್ಪ್ ಇಂಡಸ್ಟ್ರೀಸ್ ನಿಂದ ಹಳ್ಳಿಗಳು ಮೂಲಭೂತ ಸೌಕರ್ಯಗಳು ಒದಗಿಸಿದೆ : ಅಂಬರೀಷ್

ಬಳ್ಳಾರಿ 30: ಸಿಡಿಗಿನಮಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ಥಾಪಿಸಲ್ಪಟ್ಟಿರುವ ಜಾನಕಿ ಕಾರ್ಪ್ ಕಾರ್ಖಾನೆಯಿಂದ ಆ ಪ್ರದೇಶದ ಸುತ್ತಮುತ್ತಲ ಹಳ್ಳಿಗಳಿಗೆ ಕೆಲವು ಮೂಲಭೂತ ಸೌಕರ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಿವೆ. ಪಿ .ಡಿ. ಹಳ್ಳಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಂಬರೀಷ್ ಮಾತನಾಡಿದರು.  ಯಾರು ಇಬ್ಬರು ಮೂವರು ಕಿಡಿಗೇಡಿಗಳು ಸೇರಿಕೊಂಡು ಕಾರ್ಖಾನೆಯ ಅಧಿಕಾರಿಗಳಿಂದ ಹಣಕ್ಕೆ ಬೇಡಿಕೆ ಇಟ್ಟು ಅವರಿಂದ ಹಣ ಸಿಗದಿದ್ದಾಗ ಸುಖಾ ಸುಮ್ಮನೆ ಕಾರ್ಖಾನೆ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತ ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸಿ ಜಾನಕಿ  ಕಾರ್ಖಾನೆಯ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಸುಳ್ಳು ದೂರ ನೀಡಿದ್ದಾರೆ. ಆದರೆ  ಅವರ ದೂರಿನಲ್ಲಿ ಯಾವುದೇ ನಂಬತಕ್ಕಂತ ವಿಷಯ ಇರುವುದಿಲ್ಲ, ಕಾರಣ ಅವರ ದೂರಿಗೆ ಮಾನ್ಯತೆ ನೀಡಬಾರದು. ಏಕೆಂದರೆ ಸುತ್ತಮುತ್ತಲಿನ ಗ್ರಾಮಗಳ ವರೆಗೆ ಯಾರಾದರೂ ದೈವ ದಿನರಾದರೆ 5000 ಹಾಗೂ ಅನಾರೋಗ್ಯದ ನಿಮಿತವಾಗಿ ಹೆಚ್ಚು ಕಡಿಮೆ ಏನಾದರೂ ಕಂಡುಬಂದಲ್ಲಿ ಕಾರ್ಖಾನೆಯ ಮೂಲಕ 24*7 ಆಂಬುಲೆನ್ಸ್‌ ಕಾರ್ಯವ್ಯಾಸ್ತೆಯನ್ನು ಮಾಡಲಾಗಿದೆ.  

ಎಂದು ಹಗರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಂಬರೀಶ್, ಹಾಲಿ ಅಧ್ಯಕ್ಷರು ಮತ್ತು ಸಿಡಿಗಿನ ಮೊಳ ಗ್ರಾಮ ಪಂಚಾಯತಿ ಸದಸ್ಯರುಗಳು ಹಾಗೂ ಮೀನಳ್ಳಿಯ ಹಲವಾರು ಗ್ರಾಮಸ್ಥರು ಇಂದು ಈ ಕಾರ್ಖಾನೆಯಿಂದ ನಮಗೆ ಅನುಕೂಲಕರವಾಗಿದೆ ಹೊರತು ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ ಹಾಗೂ ಈ ಕಾರ್ಖಾನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ತಮ್ಮ ಕುಟುಂಬಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ ಜಿಲ್ಲಾಧಿಕಾರಿಯ ಕಚೇರಿಯ ಮುಂಭಾಗದಲ್ಲಿ   ಅಪರ ಜಿಲ್ಲಾಧಿಕಾರಿಗಳು  ಮಹಮ್ಮದ್ ಜುಬೇರ್ ಅವರಿಗೆ ಈ ಜಾನಕಿ  ಕಾರ್ಖಾನೆಯೂ ಯಾವುದೇ ರೀತಿಯ ತೊಂದರೆಗೊಳಾಗದೆ ಮುನ್ನಡೆಸಬೇಕೆಂದು ನಮ್ಮ ಜೀವನದ ಬಾಳು ಬೆಳಕಾಗಬೇಕೆಂದು ಜಾನಕಿ  ಕಾರ್ಖಾನೆಯನ್ನು ಯಥಾಪ್ರಕಾರವಾಗಿ ಕಾರ್ಯ ಪ್ರವೃತ್ತಿ ಗೊಳಿಸಬೇಕೆಂದು  ಮನವಿ ಪತ್ರ ನೀಡಿ ವಿನಂತಿಸಿದರು.  

 ಜಾನಕಿ ಕಾರ್ಖಾನೆ ತನ್ನ ಸುತ್ತಮುತ್ತಲ ಹಳ್ಳಿಗಳಾದ ಮೀನಹಳ್ಳಿ, ಸಿಡಿಗಿನ ಮೊಳ, ಪಿಡಿಹಳ್ಳಿ, ಕೆ ವೀರಾಪುರ ಸೇರಿದಂತೆ ಹಲವು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಘಟಕ, ವೈಯಕ್ತಿಕ ಶೌಚಾಲಯ, ಶಾಲಾ ಕಟ್ಟಡ, ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಲೇಖನ ಸಾಮಗ್ರಿಗಳು ನೀಡುವುದು, ಹಬ್ಬ ಹರಿ ದಿನಗಳಿಗೆ ಗ್ರಾಮದಲ್ಲಿ ಇರುವ ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಗ್ರಾಮಕ್ಕೆ ಆ ಕಾರ್ಖಾನೆಯಿಂದ ಸಹಾಯವಾಗುತ್ತದೆ ಹೊರತು ಯಾವುದೇ ತೊಂದರೆ ಆಗಿರುವುದಿಲ್ಲ. ಕಾರಣ ಕೆಲವು ಕಿಡಿಗೇಡಿಗಳು ನೀಡಿರುವ ದೂರನ್ನು ಯಾವುದೇ ಕಾರಣಕ್ಕೂ ಪರಿಗಣಿಸಿ ಕಾರ್ಖಾನೆಯ ವಿರುದ್ಧ ಯಾವುದೇ ಕ್ರಮವನ್ನು ಕೈಗೊಳ್ಳಬಾರದು ಎಂದು ಜಿಲ್ಲಾಡಳಿತ ಅಧಿಕಾರಿಗಳಲ್ಲಿ  ಮನವಿ ಮಾಡಿದ್ದಾರೆ. ಹಾಗೂ  ವಿಕಲಚೇತನರಿಗೆ ಬೇಕಾಗುವ ಪರಿಕರಗಳನ್ನು ನೀಡುವುದು, ಬಡ ಜನರಿಗೆ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುವುದು.  

ಆಹಾರದ ಕಿಟ್ ನೀಡುವುದು  ಸೇರಿದಂತೆ ಹಲವಾರು ಇತಿಹಾಸ ಪುರುಷ, ಧಾರ್ಮಿಕರು ಮತ್ತು ಹೋರಾಟಗಾರರ ಜಯಂತಿಗಳನ್ನು ಆಚರಿಸಲು ಧನಸಹಾಯ ನೀಡಿ ಪ್ರೋತ್ಸಹಿಸುತ್ತಾರೆ. ಇಂತಹ ಕಾರ್ಖಾನೆಯ ವಿರುದ್ಧ ತಮ್ಮ ವಯಕ್ತಿಕ ದ್ವೇಷವನ್ನು ಇಟ್ಟುಕೊಂಡು ಪೂರ್ವಗ್ರಹ ಪೀಡಿತರಾಗಿ ಸುಳ್ಳು ದೂರ ನೀಡಿ ಕಾರ್ಖಾನೆಯ ಅಧಿಕಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಇವರು ತಮ್ಮ ಸ್ವಜನ ಪಕ್ಷಪಾತ ಇಟ್ಟುಕೊಂಡು ಹೀಗೆ ದೂರಗಳನ್ನು ಸಲ್ಲಿಸುತ್ತಾರೆ, ಇವರಿಗೆ ಗ್ರಾಮ ಅಭಿವೃದ್ಧಿಗಿಂತ ತಮ್ಮ ಹಿತಾಸಕ್ತಿ ಮುಖ್ಯವಾಗಿರುತ್ತದೆ.ಆದಕಾರಣ ಇವರ ದೂರಿಗೆ ಯಾವುದೇ ರೀತಿಯ ಮನ್ನಣೆ ನೀಡದೆ ಕಾರ್ಖಾನೆ ಇನ್ನಷ್ಟು ವಿಸ್ತರಣೆಗೆ ಮತ್ತು ಇತರೆ ಕೈಗಾರಿಕೆ ಸ್ಥಾಪನೆಗೆ ಜಿಲ್ಲಾ ಆಡಳಿತದಿಂದ ಅನುಮತಿ ನೀಡಿ ಸಹಕರಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ನಾಗರಾಜ, ಸುಂಕಪ್ಪ ಕೆ ರಾಮಪ್ಪ ಶಾಶವಲಿ ಮಹಾನಂದಿ ಬಿ ಚನ್ನಬಸವನಗೌಡ ಶಿವರಾಜ ಕೆ ಎಸ್ ಸ್ವಾಮಿ ಸೇರಿದಂತೆ ಸುಮಾರು 71 ಜನರು ಸಹಿ ಮಾಡಿರುವ ಮನವಿ ಪತ್ರವನ್ನು ನೀಡುವಲ್ಲಿ ಸುತ್ತ ಮುತ್ತಲಿನ ಹಿರಿಯ ಮುಖಂಡರು ಗ್ರಾಮಸ್ಥರು ಇತರರು ಭಾಗವಹಿಸಿದ್ದರು. 


ಸುದ್ದಿ ಓದಿ